ಅರುಣಾಚಲದ 30 ಗ್ರಾಮ ಮರುನಾಮಕರಣ ಮಾಡಿ ತನ್ನದೆಂದು ಹೇಳಿದ ಚೀನಾಗೆ ಅಮೆರಿಕ ವಾರ್ನಿಂಗ್!

ಅರುಣಾಚಲ ಪ್ರದೇಶದಲ್ಲಿ ಚೀನಾ ಮತ್ತೆ ಕಿರಿಕ್ ಆರಂಭಿಸಿದ ಬೆನ್ನಲ್ಲೇ ಭಾರತ ತಕ್ಕ ತಿರುಗೇಟು ನೀಡಿದೆ. ಅರುಣಾಚಲದ 30 ಗ್ರಾಮಗಳನ್ನು ನಾಮಕರಣ ಮಾಡಿ ತನ್ನದೆಂದು ಹೇಳಿದ ಚೀನಾ ನಡೆಯನ್ನು ಅಮೆರಿಕ ವಿರೋಧಿಸಿದೆ.

America Oppose China announcement of Indian state Arunachal Pradesh 30 New names calls it Zangnam ckm

ವಾಶಿಂಗ್ಟನ್ ಡಿಸಿ(ಏ.04) ಅರುಣಾಚಲ ಪ್ರದೇಶ ಭಾರತದ ಅವಿಭಾಜ್ಯ ಅಂಗ. ಪ್ರತಿ ಬಾರಿ ಚೀನಾ ಗಡಿ ಪ್ರದೇಶದಲ್ಲಿ ಕಿರಿಕ್ ಮಾಡಿದ ಬೆನ್ನಲ್ಲೇ ಹಲವು ಬಾರಿ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಭಾರತ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ. ಆದರೆ ಸುಮ್ಮನಿರುವ ಜಾಯಮಾನ ಚೀನಾಗಿಲ್ಲ. ಇದೀಗ ಅರುಣಾಚಲ ಪ್ರದೇಶದಲ್ಲಿ ಕಿರಿಕ್ ಆರಂಭಿಸಿದ ಚೀನಾಗೆ ಭಾರತ ತಕ್ಕ ತಿರುಗೇಟು ನೀಡಿದೆ. ಅರುಣಾಚಲ ಪ್ರದೇಸದ 30 ಊರುಗಳ ಹೆಸರು ಬದಲಿಸಿ ತನ್ನದು ಎಂದು ಹೇಳಿಕೊಂಡಿದೆ. ಹೆಸರು ಬದಲಿಸಿದ ತಕ್ಷಣ ನಿಮ್ಮ ಪ್ರದೇಶವಾಗಲ್ಲ ಎಂದು ಭಾರತ ತಿರುಗೇಟು ನೀಡಿತ್ತು. ಇದೀಗ ಅಮೆರಿಕ ಇದೇ ಅರುಣಾಚಲ ವಿಚಾರದಲ್ಲಿ ಚೀನಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ. 

ಗಡಿಯಲ್ಲಿ ಅತಿಕ್ರಮಣ ಪ್ರವೇಶ, ಗಡಿ ಭೂಭಾಗಗಳನ್ನು ತನ್ನದು ಎಂದು ಹೆಸರು ಬದಲಿಸಿ ಪಟ್ಟಿ ಬಿಡುಗಡೆ ಮಾಡುವ ಯಾವುದೇ ಕ್ರಮವನ್ನು ಅಮೆರಿಕ ತೀವ್ರವಾಗಿ ಖಂಡಿಸುತ್ತದೆ. ಮಿಲಿಟರಿ ಅಥವಾ ನಾಗರೀಕರು ಯಾರೇ ಆದರೂ ಅತೀಕ್ರಮ ಪ್ರವೇಶ ನಿರ್ಧಾರವನ್ನು ಅಮೆರಿಕ ಖಂಡಿಸುತ್ತದೆ ಎಂದು ಅಮೆರಿಕ ಹೇಳಿದೆ. ಇದೇ ವೇಳೆ ಭಾರತದ ಹೇಳಿಕೆ ಹಾಗೂ ನಿಲುವನ್ನು ಅಮೆರಿಕ ಬೆಂಬಲಿಸಿದೆ.

ಅರುಣಾಚಲ ಪ್ರದೇಶದಲ್ಲಿ ಚೀನಾ ಕಿರಿಕ್, ಭಾರತದ 30 ಗ್ರಾಮ ತನ್ನದೆಂದು ಪಟ್ಟಿ ಬಿಡುಗಡೆ !

ಇತ್ತೀಚೆಗೆ  ಚೀನಾದ ನಾಗರಿಕ ವ್ಯವಹಾರಗಳ ಸಚಿವಾಲಯವು ಅರುಣಾಚಲ ಪ್ರದೇಶಕ್ಕೆ ‘ಜಂಗ್ನಾನ್‌’ ಎಂದು ಹೆಸರಿಟ್ಟು, ರಾಜ್ಯದ 30 ಊರುಗಳ 4ನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದು ದಕ್ಷಿಣ ಟಿಬೆಟ್‌ನ ಭಾಗ ಎಂಬುದು ಚೀನಾ ತನ್ನ ಪಟ್ಟಿಯಲ್ಲಿ ಹೇಳಿದೆ. ಈ ಹಿಂದೆ ಚೀನಾದ ನಾಗರಿಕ ವ್ಯವಹಾರಗಳ ಸಚಿವಾಲಯವು ಜಂಗ್ನಾನ್‌ನ (ಆರುಣಾಚಲ) 6 ಸ್ಥಳಗಳ ಪ್ರಮಾಣಿತ ಹೆಸರುಗಳ ಮೊದಲ ಪಟ್ಟಿಯನ್ನು 2017 ರಲ್ಲಿ ಬಿಡುಗಡೆ ಮಾಡಿತ್ತು. 15 ಸ್ಥಳಗಳ ಎರಡನೇ ಪಟ್ಟಿಯನ್ನು 2021ರಲ್ಲಿ ಹಾಗೂ 11 ಸ್ಥಳಗಳ 3ನೇ ಪಟ್ಟಿಯನ್ನು 2023ರಲ್ಲಿ ಬಿಡುಗಡೆ ಮಾಡಿತ್ತು. ಈಗಿನ 30 ಹೆಸರಿನೊಂದಿಗೆ ಚೀನಾ ಮರುನಾಮಕರಣ ಮಾಡಿದ ಊರುಗಳ ಸಂಖ್ಯೆ 62ಕ್ಕೇರಿದೆ.

ಚೀನಾದ ಈ ನಡೆಗೆ ಭಾರತದ ವಿದೇಶಾಂಗ ಸಚಿವ ಜೈಶಂಕರ್ ತಕ್ಕ ಉತ್ತರ ನೀಡಿದ್ದರು. ಚೀನಾ ಭಾರತದ ಅರುಣಾಚಲ ಪ್ರದೇಶದ 30 ಪ್ರದೇಶಗಳಿಗೆ ಚೀನೀ ಭಾಷೆಯ ಹೆಸರುಗಳನ್ನು ಇಟ್ಟು, ತನ್ನ ನಾಗರಿಕ ವ್ಯವಹಾರಗಳ ಸಚಿವಾಲಯದ ಅಧಿಕೃತ ವೆಬ್‌ಸೈಟ್‌ನಲ್ಲಿ ಪೋಸ್ಟ್‌ ಮಾಡಿದೆ. ನಾನು ನಿಮ್ಮ ಮನೆಯ ಹೆಸರನ್ನು ಬದಲಾಯಿಸಿದರೆ, ಅದು ನನ್ನದಾಗುತ್ತದೆಯೇ? ಅರುಣಾಚಲ ಪ್ರದೇಶವು ಈ ಹಿಂದೆ ಭಾರತದ ರಾಜ್ಯವಾಗಿತ್ತು, ಈಗಲೂ ಭಾರತದ ರಾಜ್ಯವೇ, ಮುಂದೆಯೂ ಭಾರತದ ರಾಜ್ಯವಾಗಿಯೇ ಉಳಿಯುತ್ತದೆ. ಹೆಸರುಗಳನ್ನು ಬದಲಾಯಿಸುವುದರಿಂದ ಏನೂ ಲಾಭವಿಲ್ಲ ಎಂದಿದ್ದರು.

ಇದೊಂದೇ ತಿಂಗಳಲ್ಲಿ 4ನೇ ಬಾರಿ ಅರುಣಾಚಲ ನಮ್ಮದು ಎಂದ ಚೀನಾ!

Latest Videos
Follow Us:
Download App:
  • android
  • ios