Asianet Suvarna News Asianet Suvarna News

ಹೀರಾಬೆನ್ ಮರಳು ಶಿಲ್ಪ ಚಿತ್ರಿಸಿ ಹಿರಿಯ ಚೇತನಕ್ಕೆ ಕಲಾವಿದನ ಭಾವಪೂರ್ಣ ವಿದಾಯ

ಪ್ರಧಾನಿ ನರೇಂದ್ರ ಮೋದಿಯವರ ತಾಯಿ ಹೀರಾಬೇನ್ ಇಂದು ನಿಧನರಾಗಿದ್ದು, ಅವರ ಅಗಲಿಕೆಗೆ ದೇಶದ ವಿವಿಧ ಗಣ್ಯರು ಸೇರಿದಂತೆ ಜನ ಸಾಮಾನ್ಯರು ಕೂಡ ಸಂತಾಪ ವ್ಯಕ್ತಪಡಿಸಿದ್ದಾರೆ.

artist Sudarsan Pattnaik emotional farewell to a departed senior spirit Heeraben by drawing sand sculpture of Heeraben akb
Author
First Published Dec 30, 2022, 9:00 PM IST

ಮುಂಬೈ: ಪ್ರಧಾನಿ ನರೇಂದ್ರ ಮೋದಿಯವರ ತಾಯಿ ಹೀರಾಬೇನ್ ಇಂದು ನಿಧನರಾಗಿದ್ದು, ಅವರ ಅಗಲಿಕೆಗೆ ದೇಶದ ವಿವಿಧ ಗಣ್ಯರು ಸೇರಿದಂತೆ ಜನ ಸಾಮಾನ್ಯರು ಕೂಡ ಸಂತಾಪ ವ್ಯಕ್ತಪಡಿಸಿದ್ದಾರೆ. ಈಗ ಖ್ಯಾತ ಮರಳುಶಿಲ್ಪ ಕಲಾವಿದ ಸುದರ್ಶನ್ ಪಟ್ನಾಯಕ್ ಅವರು ಕೂಡ ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್ ನಿಧನಕ್ಕೆ ಮರಳು ಶಿಲ್ಪದ ಮೂಲಕ ಸಂತಾಪ ಸೂಚಿಸಿ ಶತಾಯುಷಿ ತಾಯಿಗೆ ಭಾವಪೂರ್ಣ ವಿದಾಯ ಹೇಳಿದ್ದಾರೆ. ಒಡಿಶಾ ಪುರಿ ಬೀಚ್‌ನಲ್ಲಿ ಹೀರಾಬೇನ್ ಅವರ ಮರಳು ಶಿಲ್ಪವನ್ನು ಬಿಡಿಸಿದ ಕಲಾವಿದ ಸುದರ್ಶನ್ ಪಟ್ನಾಯಕ್ ಅಗಲಿದ ಹಿರಿಯ ಚೇತನದ ಸದ್ಗತಿಗೆ ಪ್ರಾರ್ಥಿಸಿದರು. 

ಮೋದಿ ತಾಯಿ ಹೀರಾಬೆನ್ ಅವರು ಇಂದು ಮುಂಜಾನೆ ಮೂರು ಗಂಟೆಗೆ ಇಹಲೋಕ ತ್ಯಜಿಸಿದರು. ಹೀರಾಬೇನ್ ಮೋದಿ ಅವರನ್ನು ಬುಧವಾರ ಅನಾರೋಗ್ಯದ ಹಿನ್ನೆಲೆಯಲ್ಲಿ ಅಹ್ಮದಾಬಾದ್‌ನ (Ahmedabad) ಯುಎನ್ ಮೆಹ್ತಾ ಇನ್‌ಸ್ಟಿಟ್ಯೂಟ್ ಆಫ್ ಕಾರ್ಡಿಯಾಲಜಿ ಮತ್ತು ರಿಸರ್ಚ್ ಸೆಂಟರ್‌ಗೆ (UN Mehta Institute of Cardiology and Research Centre in Ahmedabad) ದಾಖಲಿಸಲಾಗಿತ್ತು. ನಿನ್ನೆ ಅವರು ಆರೋಗ್ಯದಲ್ಲಿ ಸ್ವಲ್ಪ ಚೇತರಿಕೆ ಇದೆ ಎಂದು ವರದಿಯಾಗಿತ್ತು. ಆದರೆ ಇಂದು ಮುಂಜಾನೆ ಅವರು ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. 

ಪ್ರಧಾನಿ ಮೋದಿ ತಾಯಿ ಹೀರಾಬೆನ್ ನಿಧನ: ಮೋದಿ ನೀಡಿದ ಸಂದೇಶ ಏನು?

ಹೀರಾಬೇನ್ ಅವರ ಮರಳಿನ ಕಲಾಕೃತಿ ರಚಿಸಿದ ಸುದರ್ಶನ್(Sudarsan Pattnaik), ಅದರ ಕಲಾಕೃತಿ ಹಿಂಭಾಗದಲ್ಲಿ ಹಿಂದಿಯಲ್ಲಿ ಮಾ ಎಂದು ಬರೆದು ಕೆಳಭಾಗದಲ್ಲಿ ಓಂ ಶಾಂತಿ ಎಂದು ಬರೆದುಕೊಂಡಿದ್ದರು. ಗೌರವಾನ್ವಿತ ನರೇಂದ್ರ ಮೋದಿಯವರ ತಾಯಿ ಹೀರಾಬೇನ್ ಅವರು ದೇವ ಪಾದಕಮಲಗಳಲ್ಲಿ ಸೇರಿಕೊಂಡಿದ್ದಾರೆ. ಓಂ ಶಾಂತಿ, ಪ್ರಧಾನಿ ನರೇಂದ್ರ ಮೋದಿ ಹಾಗೂ ಅವರ ಕುಟುಂಬಕ್ಕೆ ತಾಯಿಯ ಅಗಲಿಕೆಯ ಈ ಸಂದರ್ಭದಲ್ಲಿ ಸಂತಾಪ ಸೂಚಿಸುತ್ತೇನೆ. ಇದು ಪುರಿ ಬೀಚ್‌ನಲ್ಲಿ ನನ್ನ ಮರಳು ಶಿಲ್ಪ ಕಲೆ ಎಂದು ಅವರು ಬರೆದುಕೊಂಡಿದ್ದಾರೆ.

ಹೀರಾಬೇನ್ (Heeraben Modi)ಅವರು ತಮ್ಮ ಕೊನೆಯ ಪುತ್ರ ನಿವೃತ್ತ ಸರ್ಕಾರಿ ಅಧಿಕಾರಿ ಪಂಕಜ್ ಜೊತೆ ಗಾಂಧಿನಗರದ (Gandhinagar) ರೈಸನ್ (Raysan) ಎಂಬಲ್ಲಿ ವಾಸಿಸುತ್ತಿದ್ದರು. ಅಮ್ಮನ ಅನಾರೋಗ್ಯದ ಹಿನ್ನೆಲೆಯಲ್ಲಿ ಬುಧವಾರ ನರೇಂದ್ರ ಮೋದಿ ಗುಜರಾತ್ ಸಿಎಂ ಭೂಪೇಂದ್ರ ಪಟೇಲ್ (Bhupendra Patel)ಜೊತೆ ಹೋಗಿ ಆಸ್ಪತ್ರೆಯಲ್ಲಿ ತಾಯಿಯನ್ನು ಭೇಟಿ ಮಾಡಿ ಮತ್ತೆ ದೆಹಲಿಗೆ ತೆರಳಿದ್ದರು. 

ನಿಮ್ಮ ತಾಯಿ ನಮ್ಮ ತಾಯಿ ಇದ್ದಂತೆ: ಮೋದಿಗೆ ಮಮತಾ ಬ್ಯಾನರ್ಜಿ ಸಾಂತ್ವನ

ಮೊದಲೇ ಯೋಜಿಸಲ್ಪಟ್ಟಂತೆ ಇಂದು ಪ್ರಧಾನಿ (Prime Minister) ನರೇಂದ್ರ ಮೋದಿ (Narendra Modi) ಪಶ್ಚಿಮ ಬಂಗಾಳಕ್ಕೆ (West Bengal) ಭೇಟಿ ನೀಡಿ ವಿವಿಧ ಯೋಜನೆಗಳಿಗೆ ಚಾಲನೆ ನೀಡಬೇಕಿತ್ತು. ಆದರೆ ಇಂದು ಮುಂಜಾನೆ ಅವರ ತಾಯಿ ನಿಧನರಾದ ಹಿನ್ನೆಲೆಯಲ್ಲಿ ಸೀದಾ ತಮ್ಮೂರಿಗೆ ಹೊರಟು ಹೋದ ಪ್ರಧಾನಿ ಮೋದಿ, ತಾಯಿಯ ಅಂತಿಮ ದರ್ಶನ ಪಡೆದು ಮಗನಾಗಿ ಅಂತಿಮ ವಿಧಿವಿಧಾನದಲ್ಲಿ ಭಾಗಿಯಾದರು. ತಾಯಿಯ ಅಂತಿಮ ವಿಧಿ ವಿಧಾನಗಳನ್ನು ನಡೆಸಿಕೊಟ್ಟು ಒಂದು ಗಂಟೆ ನಂತರ ಪ್ರಧಾನಿ ವಿಡಿಯೋ ಕಾನ್ಫರೆನ್ಸ್ ಮೂಲಕ ಪಶ್ಚಿಮ ಬಂಗಾಳದ ಈ ಕಾರ್ಯಕ್ರಮದಲ್ಲಿ ಭಾಗಿಯಾದರು.

ಮಮತಾ ಬ್ಯಾನರ್ಜಿ ಭಾಷಣದ ಬಳಿಕ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಆರಂಭದಲ್ಲೇ ಬಂಗಾಳದ ಜನತೆಯಲ್ಲಿ ಕ್ಷಮೆ ಯಾಚಿಸಿದರು. ಇಂದು ನಿಮ್ಮನ್ನು ಭೇಟಿಯಾಗಬೇಕಿತ್ತು. ಆದರೆ ವೈಯುಕ್ತಿಕ ಕಾರಣಗಳಿಂದ ಬಂಗಾಳಕ್ಕೆ ಬರಲು ಸಾಧ್ಯವಾಗಲಿಲ್ಲ. ಇದಕ್ಕೆ ಕ್ಷಮೆಯಾಚಿಸುತ್ತೇನೆ. ಬಂಗಾಳದ ಪವಿತ್ರ ಭೂಮಿಗೆ ನಮನ ಸಲ್ಲಿಸುವ ಅವಕಾಶ ಇಂದು ನನಗೆ ಸಿಕ್ಕಿದೆ.  ಸ್ವಾತಂತ್ರ್ಯ ಚಳವಳಿಯ ಇತಿಹಾಸವು ಬಂಗಾಳದ ಪ್ರತಿಯೊಂದು ಕಣದಲ್ಲೂ ಅಡಕವಾಗಿದೆ. ವಂದೇ ಮಾತರಂ ಪಠಿಸಿದ ಭೂಮಿಯಾಗಿರುವ ಈ ಪಶ್ಚಿಮ ಬಂಗಾಳದಲ್ಲಿ ಇಂದು ವಂದೇ ಭಾರತ್ ರೈಲಿಗೆ ಇದೀಗ ಫ್ಲ್ಯಾಗ್ ಆಫ್ ಮಾಡಲಾಗಿದೆ. ಇಂದು, ಅಂದರೆ ಡಿಸೆಂಬರ್ 30 ರ ದಿನಾಂಕವು ಇತಿಹಾಸದಲ್ಲಿ ತನ್ನದೇ ಆದ ಪ್ರಾಮುಖ್ಯತೆಯನ್ನು ಹೊಂದಿದೆ.  ಡಿಸೆಂಬರ್ 30, 1943 ರಂದು ನೇತಾಜಿ ಸುಭಾಷ್ ಅವರು ಅಂಡಮಾನ್‌ನಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸುವ ಮೂಲಕ ಭಾರತದ ಸ್ವಾತಂತ್ರ್ಯದ ಧ್ವಜವನ್ನು ಹಾರಿಸಿದ್ದ ದಿನವೂ ಕೂಡ ಇದಾಗಿದೆ ಎಂಬುದು ಸ್ಮರಣೀಯ ಎಂದು ಮೋದಿ ಹೇಳಿದ್ದರು. 

 

Follow Us:
Download App:
  • android
  • ios