ವಿವೋ ಅಧಿಕಾರಿಗಳ ಬಂಧಿಸಿದ್ದಕ್ಕೆ ಭಾರತಕ್ಕೆ ಚೀನಾ ಎಚ್ಚರಿಕೆ
ತನ್ನ ದೇಶದ ಮೊಬೈಲ್ ಕಂಪನಿಯಾದ ‘ವಿವೋ’ ವಿರುದ್ಧ ಭಾರತದ ತನಿಖಾ ಸಂಸ್ಥೆಯಾದ ಜಾರಿ ನಿರ್ದೇಶನಾಲಯ (ಇ.ಡಿ.), 62,476 ಕೋಟಿ ರು. ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಿಸಿ ತನ್ನ ಇಬ್ಬರು ನಾಗರಿಕರು ಸೇರಿದಂತೆ 6 ಮಂದಿಯನ್ನು ಬಂಧಿಸಿದ್ದಕ್ಕೆ ಚೀನಾ ಸರ್ಕಾರ ಆಕ್ರೋಶ ವ್ಯಕ್ತಪಡಿಸಿದೆ.
ಬೀಜಿಂಗ್/ನವದೆಹಲಿ: ತನ್ನ ದೇಶದ ಮೊಬೈಲ್ ಕಂಪನಿಯಾದ ‘ವಿವೋ’ ವಿರುದ್ಧ ಭಾರತದ ತನಿಖಾ ಸಂಸ್ಥೆಯಾದ ಜಾರಿ ನಿರ್ದೇಶನಾಲಯ (ಇ.ಡಿ.), 62,476 ಕೋಟಿ ರು. ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಿಸಿ ತನ್ನ ಇಬ್ಬರು ನಾಗರಿಕರು ಸೇರಿದಂತೆ 6 ಮಂದಿಯನ್ನು ಬಂಧಿಸಿದ್ದಕ್ಕೆ ಚೀನಾ ಸರ್ಕಾರ ಆಕ್ರೋಶ ವ್ಯಕ್ತಪಡಿಸಿದೆ.
ಚೀನಾ ಮೂಲದ ಕಂಪನಿಗಳ ಬಗ್ಗೆ ಭಾರತ ಸರ್ಕಾರ ತಾರತಮ್ಯ ಧೋರಣೆ ಅನುಸರಿಸಕೂಡದು ಎಂದು ಎಚ್ಚರಿಸಿರುವ ಚೀನೀ ವಿದೇಶಾಂಗ ಸಚಿವಾಲಯ, ತನ್ನ ಬಂಧಿತ ಇಬ್ಬರು ನಾಗರಿಕರಿಗೆ ರಾಜತಾಂತ್ರಿಕ ಸಂಪರ್ಕ ನೀಡಲು ನಿರ್ಧರಿಸಿದೆ. ಈ ಕುರಿತು ಸೋಮವಾರ ಹೇಳಿಕೆ ನೀಡಿರುವ ಚೀನಾ ವಿದೇಶಾಂಗ ಇಲಾಖೆ ವಕ್ತಾರ ಮಾವೋ ನಿಂಗ್, ವಿವೋ ಕಂಪನಿಯ ಬೆನ್ನಿಗೆ ಚೀನಾ ನಿಲ್ಲುತ್ತದೆ. ಭಾರತವು ನಮ್ಮ ಕಂಪನಿ ವಿರುದ್ಧ ತಾರತಮ್ಯ ಧೋರಣೆ ಅನುಸರಿಸಬಾರದು. ನಮ್ಮ ಬಂಧಿತ ಇಬ್ಬರು ನಾಗರಿಕರನ್ನು ಸಂಪರ್ಕಿಸಿ ಸಹಾಯ ಮಾಡುವಂತೆ ನಮ್ಮ ಭಾರತದಲ್ಲಿನ ರಾಯಭಾರಿಗೆ ಸೂಚಿಸಲಾಗಿದೆ ಎಂದಿದ್ದಾರೆ.
ಉದ್ಯೋಗಿಗಳಿಗೆ ಬೋನಸ್ ನೀಡಲು ಚೀನಾ ಕಂಪನಿಯ ಸ್ಪೆಷಲ್ ನೀತಿ!
ಭಾರತದಿಂದ 62,476 ಕೋಟಿ ರು.ಗಳನ್ನು ಅಕ್ರಮವಾಗಿ ಚೀನಾಗೆ ವರ್ಗಾಯಿಸಿದ ಆರೋಪ ವಿವೋ ಮೇಲೆ ಇದೆ. ಈ ಸಂಬಂಧ ಚೀನಾ ಪ್ರಜೆಗಳಾದ ವಿವೋ ಇಂಡಿಯಾ ಮಧ್ಯಂತರ ಸಿಇಒ ಹಾಂಗ್ ಕ್ಸುಕ್ವಾನ್ ಹಾಗೂ ಗ್ವಾಗ್ವೇನ್ ಅಲಿಯಾಸ್ ಆ್ಯಂಡ್ರ್ಯೂ ಕುವಾಂಗ್ ಸೇರಿದಂತೆ 6 ಜನರನ್ನು ಇತ್ತೀಚೆಗೆ ಇ.ಡಿ. ಬಂಧಿಸಿತ್ತು. ಬಂಧಿತರ ಮೇಲೆ ಅಕ್ರಮ ಹಣ ವರ್ಗಾವಣೆ ಕೇಸು ದಾಖಲಿಸಲಾಗಿತ್ತು.
ದೇಶ ವಿರೋಧಿ ಕೇಸಲ್ಲಿ ಮಾಫಿ ಸಾಕ್ಷಿಯಾಗುವೆ: ನ್ಯೂಸ್‌ಕ್ಲಿಕ್ ಎಚ್‌ಆರ್
ನವದೆಹಲಿ: ಭಾರತದ ಸಾರ್ವಭೌಮತೆಯನ್ನು ಕುಗ್ಗಿಸುವಂತಹ ಸುದ್ದಿಗಳನ್ನು ಪ್ರಸಾರ ಮಾಡಲು ಚೀನಿ ಸಂಸ್ಥೆಗಳಿಂದ ಹಣ ಪಡೆದ ಆರೋಪದ ಮೇಲೆ ಬಂಧಿತರಾಗಿದ್ದ ನ್ಯೂಸ್‌ಕ್ಲಿಕ್ ಸಂಸ್ಥೆಯ ಮಾನವ ಸಂಪನ್ಮೂಲ ಅಧಿಕಾರಿ ಚಕ್ರವರ್ತಿ ತಾನು ಮಾಫಿ ಸಾಕ್ಷಿಯಾಗಲು ಸಿದ್ಧನಾಗಿರುವುದಾಗಿ ದೆಹಲಿ ಕೋರ್ಟ್‌ಗೆ ಮಾಹಿತಿ ನೀಡಿದ್ದಾರೆ. ಚಕ್ರವರ್ತಿ ಮನವಿಯನ್ನು ವಿಶೇಷ ನ್ಯಾಯಾಲಯ ಪುರಸ್ಕರಿಸಿದ್ದು, ಮ್ಯಾಜಿಸ್ಟ್ರೇಟ್ ನ್ಯಾಯಾಧೀಶರು ಅವರ ಹೇಳಿಕೆಯನ್ನು ದಾಖಲಿಸಿಕೊಳ್ಳುವಂತೆ ಸೂಚಿಸಿದ್ದಾರೆ. ಅ.3ರಂದು ದೆಹಲಿ ಪೊಲೀಸರು ನ್ಯೂಸ್‌ಕ್ಲಿಕ್ ಸಂಸ್ಥೆಯ 88 ಸ್ಥಳಗಳ ಮೇಲೆ ದಾಳಿ ಮಾಡಿ ಚಕ್ರವರ್ತಿ ಹಾಗೂ ಸಂಸ್ಥೆಯ ಮುಖ್ಯಸ್ಥರಾದ ಪ್ರಬೀರ್ ಪುರಕಾಯಸ್ಥ ಅವರನ್ನು ಬಂಧಿಸಿದೆ. ಅಲ್ಲದೆ ಸಂಸ್ಥೆಯ 9 ಮಹಿಳಾ ಪತ್ರಕರ್ತರೂ ಸೇರಿದಂತೆ 46 ಜನರನ್ನು ವಿಚಾರಣೆಗೊಳಪಡಿಸಿದೆ.
Mangaluru: ಭದ್ರತೆ ಲೋಪಕ್ಕಾಗಿ ಜಾಗತಿಕವಾಗಿ ನಿಷೇಧಿಸ್ಪಟ್ಟ ಚೀನಾ ಕಂಪನಿ ಸಿಸಿ ಕ್ಯಾಮರಾ ಮಂಗಳೂರಲ್ಲಿ ಅಳವಡಿಕೆ