Asianet Suvarna News Asianet Suvarna News

ಮೋದಿ ಟೀಕಿಸುವ ಪೋಸ್ಟರ್‌ಗಳನ್ನೇ ಆಯುಧವನ್ನಾಗಿಸಿದ ಪ್ರಿಯಾಂಕಾ!

* ಕೊರೋನಾ ವಿರುದ್ಧದ ಹೋರಾಟದಲ್ಲಿ ದೇಶಾದ್ಯಂತ ಭರದಿಂದ ಸಾಗುತ್ತಿದೆ ಲಸಿಕೆ ಅಭಿಯಾನ

* ಲಸಿಕೆ ಅಭಿಯಾನ ವಿಚಾರವಾಗಿ ಮೋದಿ ಟೀಕಿಸಿ ಪೋಸ್ಟರ್‌

* ಪೋಸ್ಟರ್‌ ಸಮರ್ಥಿಸಿಕೊಂಡ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ

* ನನ್ನನ್ನೂ ಅರೆಸ್ಟ್ ಮಾಡಿ: ಮೋದಿಗೆ ರಾಹುಲ್ ಸವಾಲು

Arrest Me Too Rahul Gandhi Tweets Covid Poster Critical Of PM Modi pod
Author
Bangalore, First Published May 16, 2021, 3:34 PM IST

ನವದೆಹಲಿ(ಮೇ.16): ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಕೂಡಾ ಪ್ರಧಾನಿ ಮೋದಿ ಟೀಕಿಸುವ ಪೋಸ್ಟರ್‌ ಸಮರ್ಥಿಸಿಕೊಂಡಿದ್ದಾರೆ. ಮೋದಿ ವಿರುದ್ಧದ ಈ ಪೋಸ್ಟರ್‌ ಸಂಬಂಧ ಈಗಾಗಲೇ ದೆಹಲಿ ಪೊಲೀಸರು 25 ಮಂದಿಯನ್ನು ಅರೆಸ್ಟ್ ಮಾಡಿದ್ದಾರೆ ಎಂಬುವುದು ಉಲ್ಲೇಖನೀಯ. 

ಭಾನುವಾರ ಮಧ್ಯಾಹ್ನ ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ತಮ್ಮ ಟ್ವಟಿರ್‌ ಖಾತೆಯ ಪ್ರೊಫೈಲ್ ಫೋಟೋ ತೆಗೆದು ಹಾಕಿ, ಈ ವಿವಾದಿತ ಪೋಸ್ಟರ್‌ ಫೋಟೋ ಹಾಕಿಕೊಂಡಿದ್ದಾರೆ. ಈ ವಿವಾದಿತ ಪೋಸ್ಟರ್‌ನಲ್ಲಿ 'ಮೋದೀಜೀ ನಮ್ಮ ಮಕ್ಕಳಿಗೆ ಕೊಡಬೇಕಾದ ಲಸಿಕೆಯನ್ನು ವಿದೇಶಕ್ಕೆ ಯಾಕೆ ಕಳುಹಿಸಿದಿರಿ?' ಎಂದು ಪ್ರಶ್ನಿಸಲಾಗಿದೆ.

ಕಾಂಗ್ರೆಸ್‌ ಮಾಜಿ ಅಧ್ಯಕ್ಷ ಹಾಗೂ  ಪ್ರಿಯಾಂಕಾ ಗಾಂಧಿ ಸಹೋದರ ರಾಹುಲ್ ಗಾಂಧಿ ಕೂಡಾ ಮೋದಿ ವಿರುದ್ಧದ ಈ ಪೋಸ್ಟರ್‌ ಶೇರ್ ಮಾಡಿಕೊಂಡಿದ್ದಾರೆ. ಇಷ್ಟೇ ಅಲ್ಲದೇ ನನ್ನನ್ನೂ ಅರೆಸ್ಟ್‌ ಮಾಡಿ ಎಂದು ಸವಾಲೆಸೆದಿದ್ದಾರೆ. 

ಇನ್ನು ದೆಹಲಿ ಪೊಲೀಸರು ಕೊರೋನಾ ಲಸಿಕೆ ಅಭಿಯಾನ ವಿಚಾರದಲ್ಲಿ ಪಿಎಂ ಮೋದಿ ವಿರುದ್ಧ ಪೋಸ್ಟರ್‌ ಅಂಟಿಸಿದ ವಿಚಾರವಾಗಿ 25 ಮಂದಿ ವಿರುದ್ಧ ಎಫ್‌ಐಆರ್‌ ದಾಖಲಿಸಿ, ಅವರನ್ನು ಅರೆಸ್ಟ್ ಮಾಡಿದ್ದಾರೆ. ಈ ಪೋಸ್ಟರ್‌ಗಳು ದೆಹಲಿಯ ನಾನಾ ಪ್ರದೇಶಗಳಲ್ಲಿ ಅಂಟಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

Follow Us:
Download App:
  • android
  • ios