ಕೊರೋನಾ ವೈರಸ್ ಭೀಕರತೆ ಅರಿವಿದ್ದರೂ ಮಾಸ್ಕ್ ಧರಿಸಲು ಹಿಂದೇಟು ಆರೋಗ್ಯ ಇಲಾಖೆ ಬಹಿರಂಗ ಪಡಿಸಿದೆ ಸಂಪೂರ್ಣ ಮಾಹಿತಿ ಮಾಸ್ಕ್ ಧರಿಸಿದರೂ ಸರಿಯಾಗಿ ಬಳಸದ ಜನ  

ನವದೆಹಲಿ(ಮೇ.20); ಕೊರೋನಾ ವೈರಸ್ ಭಾರತದಲ್ಲಿ ಅದೆಂತಾ ಅನಾಹುತ ಸೃಷ್ಟಿಸಿದೆ ಅನ್ನೋ ಸ್ಪಷ್ಟ ಚಿತ್ರಣ ಎಲ್ಲರಿಗೂ ಇದೆ. ಕೊರೋನಾ ನಿಯಂತ್ರಣಕ್ಕೆ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಪಾಲಿಸುವುದು, ಶುಚಿತ್ವ ಕಾಪಾಡಿಕೊಳ್ಳುವುದು ಅತ್ಯಂತ ಅಗತ್ಯವಾಗಿದೆ. ಆದರೆ ಭಾರತೀಯರು ಕೊರೋನಾ ಮಾರ್ಗಸೂಚಿ ಪಾಲನೆಯಲ್ಲಿ ಹಿಂದಿದ್ದಾರೆ. ಈ ಕುರಿತು ಆರೋಗ್ಯ ಇಲಾಖೆ ಮಾಹಿತಿ ಬಹಿರಂಗ ಪಡಿಸಿದೆ.

ಲಸಿಕೆ ಸಿಕ್ತೋ, ಇಲ್ವೋ.. ಆದ್ರೆ ಕೊರೋನಾದಿಂದ ಕಾಪಾಡಿಕೊಳ್ಳಲು ಈ 3 ಅಗತ್ಯ!

ಭಾರತೀಯರು ಶೇಕಡಾ 50 ರಷ್ಟು ಮಂದಿ ಮಾಸ್ಕ್ ಧರಿಸುತ್ತಿಲ್ಲ ಅನ್ನೋದು ಸಮೀಕ್ಷೆಯಲ್ಲಿ ಬಹಿರಂಗವಾಗಿದೆ. ಈ ಕುರಿತು ಆರೋಗ್ಯ ಇಲಾಖೆ ಸಂಪೂರ್ಣ ಮಾಹಿತಿ ನೀಡಿದೆ

ದೇಶದ ಶೇಕಡಾ 50 ರಷ್ಟು ಮಂದಿ ಮಾಸ್ಕ್‌ ಹಾಕುವುದಿಲ್ಲ
ಶೇಕಡಾ 64 ರಷ್ಟು ಮಂದಿ ಮಾಸ್ಕ್ ಧರಿಸಿದರೂ, ಬಾಯಿಗೆ ಮಾತ್ರ, ಮೂಗಿನ ಮೇಲೆ ಇರುವುದಿಲ್ಲ
ದೇಶದ ಶೇಕಡಾ 20 ರಷ್ಟು ಮಂದಿ ಬಾಯಿ ಕೆಳಗೆ ಮಾಸ್ಕ್ ಹಾಕುತ್ತಾರೆ
ಶೇಕಡಾ 2 ರಷ್ಟು ಮಂದಿ ಕುತ್ತಿಗೆಗೆ ಮಾಸ್ಕ್ ಹಾಕುತ್ತಾರೆ

ಕೊರೋನಾ ವಸ್ತುಗಳ ಬೆಲೆ ಇಳಿಕೆ: ಬರೀ 22 ರೂ.ಗೆ N95 ಮಾಸ್ಕ್

ದೇಶದಲ್ಲಿ ಸರಿಯಾಗಿ ಮಾಸ್ಕ್ ಹಾಕುವವರ ಸಂಖ್ಯೆ ಶೇಕಡಾ 7 ರಷ್ಟು ಮಾತ್ರ. ಹೀಗಾಗಿ ದೇಶದಲ್ಲಿ ಕೊರೋನಾ ವೈರಸ್ ಸಂಖ್ಯೆ ಹರಡಲು ಇದು ಕೂಡ ಪ್ರಮುಖವಾಗಿದೆ. ದೇಶದ ಪ್ರಮುಖ 25 ನಗರದಲ್ಲಿ ಮಾಸ್ಕ್ ಧಾರಣೆ ಕುರಿತು ಸಮೀಕ್ಷೆ ಮಾಡಲಾಗಿದೆ.

Scroll to load tweet…

ದೇಶದ ಎಂಟು ರಾಜ್ಯಗಳಲ್ಲಿ 1 ಲಕ್ಷಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳಿವೆ. 9 ರಾಜ್ಯಗಳಲ್ಲಿ 50,000 ದಿಂದ 1 ಲಕ್ಷ ಸಕ್ರಿಯ ಪ್ರಕರಣಗಳಿವೆ ಮತ್ತು 19 ರಾಜ್ಯಗಳಲ್ಲಿ 50,000 ಕ್ಕಿಂತ ಕಡಿಮೆ ಸಕ್ರಿಯ ಪ್ರಕರಣಗಳಿವೆ ಎಂದು ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲಾವ್ ಅಗರ್ವಾಲ್ ಹೇಳಿದರು.