ಕುಪ್ವಾರ(ಜ.  08) ದೇಶಭಕ್ತಿತಯನ್ನು ಸಾರುತ್ತಲೇ ಗಡಿ ಕಾಯುವ ಯೋಧರಿಗೆ ಎಷ್ಟು ನಮನ ಸಲ್ಲಿಸಿದರೂ ಸಾಲದು. ಇದೆಲ್ಲದರ ನಡುವೆ ಪ್ರವಾಹ ಆಗಲಿ, ನೈಸರ್ಗಿಕ ವಿಕೋಪ ಆಗಲಿ ಸೈನಿಕರು ನೆರವಿಗೆ ಧಾವಿಸುತ್ತಲೆ ಬರುತ್ತಾರೆ. ಜನರನ್ನು ತಮ್ಮ ಪ್ರಾಣದ ಹಂಗು ತೊರೆದು ರಕ್ಷಣೆ ಮಾಡುತ್ತಾರೆ. ಈಗ ಸೈನಿಕರು ಅಂಥದ್ದೆ ಒಂದು ಮಹತ್ ಕಾರ್ಯ ಮಾಡಿದ್ದು ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಕಾಶ್ಮೀರದಲ್ಲಿ ಹಿಮ ಬೀಳುತ್ತಲೇ ಇದೆ. ಆದರೆ ಸೇನೆ ಮಾಡಿದ ಕೆಲಸಕ್ಕೆ ಒಂದು ಮೆಚ್ಚುಗೆ ಹೇಳಲೇಬೇಕು.  ತುರ್ತು ಸಂದರ್ಭದಲ್ಲಿ   ಗರ್ಭಿಣಿಯನ್ನು ಸುರಿಯುವ ಹಿಮದಲ್ಲಿ ಬರೋಬ್ಬರಿ ಎರಡು ಕಿಮೀ ಹೊತ್ತು ಸಾಗಿದ್ದಾರೆ. ಮೊಣಕಾಲಿನವರೆಗೆ ಹಿಮ ತುಂಬಿದ್ದರೂ ಜಗ್ಗದೆ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಪಾಕ್ ಸೈನಿಕರಿಗೆ ಭಾರತೀಯ ಯೋಧರು ಕೊಟ್ಟ ಎಚ್ಚರಿಕೆ

ಗುರುವಾರ ರಾತ್ರಿ 11.30 ರ ಸುಮಾರಿಗೆ ಸೇನೆಯ ಕ್ಯಾಂಪ್ ಗೆ ಕರೆ ಒಂದು ಬಂದಿದೆ. ಮನ್  ಜೂರ್ ಅಹಮದ್ ಶೇಖ್ ಎನ್ನುವರು ಕರೆ ಮಾಡಿದ್ದಾರೆ.  ತಮ್ಮ ಪತ್ನಿಗೆ ಹೆರಿಗೆ  ನೋವು ಕಾಣಿಸಿಕೊಂಡಿದ್ದು ಸಹಾಯ ಬೇಕು ಎಂದು ಕೋರಿದ್ದಾರೆ.  ಆ ಸಂದರ್ಭದಲ್ಲಿ ಹಿಮ ಬೀಳುತ್ತಲೇ ಇತ್ತು. ಈ ಕಾರಣದಿಂದ ಆರೋಗ್ಯ ಸೇವೆ ನೀಡುವ ವಾಹನಗಳು  ಸಂಚರಿಸಲು ಸಾಧ್ಯವಾಗುತ್ತಿರಲಿಲ್ಲ. 

 ಹಾಗಾಗಿ ಬೇರೆ ಆಯ್ಕೆ ಇರಲಿಲ್ಲ. ಆರೋಗ್ಯ ಸಿಬ್ಬಂದಿ ಒಬ್ಬರನ್ನು  ಕರೆದುಕೊಂಡು ಗರ್ಭಿಣಿ ಇದ್ದಲ್ಲಿಗೆ ತೆರಳಿ  ಪ್ರಾಥಮಿಒಕ ಚಿಕಿತ್ಸೆ ನೀಡಲಾಗಿದೆ. ಅದಾದ ಮೇಲೆ ಅಲ್ಲಿಂದ ಶಿಫ್ಟ್ ಮಾಖಡುವುದು ಅನಿವಾರ್ಯ ಎಂಬಂತೆ ಗೊತ್ತಾಗಿದೆ.  ಅಲ್ಲಿಂದ ಮಹಿಳೆಯನ್ನು ಹೊತ್ತುಕೊಂಡು  ಯೋಧರು ಆಸ್ಪತ್ರೆಗೆ  ಆಗಮಿಸಿದ್ದಾರೆ.  ಸೇನೆ ಸಹ ಈ ಕಾರ್ಯವನ್ನು ಕೊಂಡಾಡಿದ್ದು ದೇಶದ ನಾಗರಿಕರು ಸೇನೆಯ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.