ಉಗ್ರ ಕಾರ್ಯಾಚರಣೆಯ ಸಮಯದಲ್ಲಿ ಉಗ್ರರಿಂದ ಮುಖಕ್ಕೆ ಗುಂಡೇಟು ತಿಂದು 8 ವರ್ಷಗಳ ಕಾಲ ಕೋಮಾದಲ್ಲಿದ್ದ ಸೇನಾಧಾರಿಕಾರಿ ಲೆ.ಕರ್ನಲ್‌ ಕರಣ್‌ಬೀರ್‌ ಸಿಂಗ್‌ ನಾಥ್‌ ಮಂಗಳವಾರ ನಿಧನರಾಗಿದ್ದಾರೆ.

ನವದೆಹಲಿ: ಉಗ್ರ ಕಾರ್ಯಾಚರಣೆಯ ಸಮಯದಲ್ಲಿ ಉಗ್ರರಿಂದ ಮುಖಕ್ಕೆ ಗುಂಡೇಟು ತಿಂದು 8 ವರ್ಷಗಳ ಕಾಲ ಕೋಮಾದಲ್ಲಿದ್ದ ಸೇನಾಧಾರಿಕಾರಿ ಲೆ.ಕರ್ನಲ್‌ ಕರಣ್‌ಬೀರ್‌ ಸಿಂಗ್‌ ನಾಥ್‌ ಮಂಗಳವಾರ ನಿಧನರಾಗಿದ್ದಾರೆ.

ಇವರು ಸೇನಾ ಪದಕ ವಿಜೇತರಾಗಿದ್ದು, 2015ರಲ್ಲಿ ಜಮ್ಮು ಕಾಶ್ಮೀರದ ಕುಪ್ವಾರದಲ್ಲಿ ನಡೆದ ಕಾರ್ಯಾಚರಣೆಯ ವೇಳೆ ಮುಖಕ್ಕೆ ಗುಂಡುಗಳ ತಗುಲಿ ಗಾಯಗೊಂಡಿದ್ದರು. ತಕ್ಷಣವೇ ಇವರನ್ನು ಆಸ್ಪತ್ರೆಗೆ ದಾಖಲಿಸಿದರೂ ಸಹ ಗಾಯದಿಂದಾಗಿ ಕೋಮಾಗೆ ಜಾರಿ ಸುಮಾರು 8 ವರ್ಷಗಳ ಆಸ್ಪತ್ರೆಯಲ್ಲೇ ಇದ್ದರು. ಸುಮಾರು 20 ವರ್ಷಗಳ ಕಾಲ ಸೈನಿಕನಾಗಿ ಸೇವೆ ಸಲ್ಲಿಸಿದ್ದ ಇವರ ಸಾವಿಗೆ ಅಧಿಕಾರಿಗಳು ಸಂತಾಪ ಸೂಚಿಸಿದ್ದಾರೆ.

ಜಮ್ಮು - ಕಾಶ್ಮೀರದಲ್ಲಿ ಸೇನೆ ಮೇಲೆ ದಾಳಿ: ಚೀನಾ ನಿರ್ಮಿತ ಶಸ್ತ್ರಾಸ್ತ್ರ ಬಳಸ್ತಿರೋ ಭಯೋತ್ಪಾದಕರು

ಆಗಿದ್ದೇನು?:

ಲೆ।ಕ। ನಾಥ್‌ ಅವರು ರಾಷ್ಟ್ರೀಯ ರೈಫಲ್ಸ್‌ನಲ್ಲಿ ಕೆಲಸ ಮಾಡುತ್ತಿದ್ದಾಗ, ಸೈನಿಕ ಕಾರ್ಯಾಚರಣೆಗೆ ಕುಪ್ವಾರಗೆ ತೆರಳಿದ್ದರು. ಕಾರ್ಯಾಚರಣೆಯ ಸಮಯದಲ್ಲಿ ಇವರ ಮುಖ್ಯಸ ಕರ್ನಲ್ ಸಂತೋಷ್‌ ಅವರು ಉಗ್ರರ ಗುಂಡಿಗೆ ಬಲಿಯಾದರೂ ಸಹ ಎದೆಗುಂದರೆ ತಮ್ಮ ತಂಡದೊಂದಿಗೆ ಕಾರ್ಯಾಚರಣೆ ಮುಂದುವರೆಸಿದ್ದರು. ಆದರೆ ಈ ಸಮಯದಲ್ಲಿ ಕಲಾಶ್ಮಿಕೋವ್‌ ರೈಫಲ್ಸ್‌ನಿಂದ ಸಿಡಿದ ಗುಂಡುಗಳು ನಾಥ್‌ ಅವರ ಮುಖವನ್ನು ಹೊಕ್ಕಿದ್ದವು. ತೀವ್ರವಾಗಿ ಗಾಯಗೊಂಡಿದ್ದ ನಾಥ್‌ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಸಹ ಗಾಯಗಳಿಂದಾಗಿ ಅವರು ಕೋಮಾಗೆ ಜಾರಿದ್ದರು.

ಪೂಂಚ್ ಸೆಕ್ಟರ್‌ನಲ್ಲಿ ಭೀಕರ ಭಯೋತ್ಪಾದಕ ದಾಳಿ, ಭಾರತೀಯ ಸೇನಾ ಮೇಲೆ ಗುಂಡಿನ ಸುರಿಮಳೆ!