ಸೇನೆಗೇ ಸಡ್ಡು ಹೊಡೆದು 12 ಉಗ್ರರ ಬಿಡಿಸಿದ ಸ್ತ್ರೀಯರು: ಯೋಧರಿಗೆ ದಿಗ್ಬಂಧನ; ಉಗ್ರರ ರಕ್ಷಣೆಗೆ ನಿಂತ ಸಾವಿರಾರು ಗ್ರಾಮಸ್ಥರು

12 ಮಂದಿಯನ್ನು ಭಾರತೀಯ ಸೇನೆ ಬಂಧಿಸಿತು. ಆದರೆ ಈ ವೇಳೆ 1200ರಿಂದ 1500 ಜನರು ಜಮಾವಣೆಗೊಂಡು ಉಗ್ರರನ್ನು ಕರೆದೊಯ್ಯುವುದಕ್ಕೆ ಅಡ್ಡಿಪಡಿಸಿದರು. ಮಹಿಳೆಯರೇ ಈ ದೊಂಬಿಯ ನೇತೃತ್ವ ವಹಿಸಿದ್ದರು.

army frees 12 manipur militants as mob of 1200 blocks way ash

ಇಂಫಾಲ (ಜೂನ್ 26, 2023): ಸುಮಾರು 2 ತಿಂಗಳಿನಿಂದ ಆಂತರಿಕ ಸಂಘರ್ಷದಿಂದ ನಲುಗಿರುವ ಮಣಿಪುರದಲ್ಲಿ ನಾಟಕೀಯ ಬೆಳವಣಿಗೆಯೊಂದು ನಡೆದಿದೆ. ಮಣಿಪುರದಲ್ಲಿ ನಡೆದ ಹಲವು ದಾಳಿಗಳಲ್ಲಿ ಭಾಗಿಯಾಗಿದ್ದ ಮೈತೇಯಿ ಬಂಡುಕೋರ ಸಂಘಟನೆಯೊಂದರ 12 ಬಂಡುಕೋರರನ್ನು ಸೇನೆ ಬಂಧಿಸಿತಾದರೂ, ಅವರನ್ನು ಕರೆದೊಯ್ಯುವುದಕ್ಕೆ ಜನರು ಅವಕಾಶವನ್ನೇ ನೀಡಿಲ್ಲ. 

ಮಹಿಳೆಯರ ನೇತೃತ್ವದಲ್ಲಿ 1200 ರಿಂದ 1500 ಜನರು ಯೋಧರಿಗೆ ಇಡೀ ದಿನ ದಿಗ್ಬಂಧನ ವಿಧಿಸಿದ್ದರಿಂದ ಸೇನೆ ಉಗ್ರರನ್ನು ಬಿಟ್ಟು ಬರಿಗೈಲಿ ತೆರಳುವಂತಾಗಿದೆ. ಭಾರಿ ಸಂಖ್ಯೆಯಲ್ಲಿ ಜನರು ಅದರಲ್ಲೂ ಮಹಿಳೆಯರೇ ಜಮಾವಣೆಯಾಗಿದ್ದರಿಂದ ಬಲಪ್ರಯೋಗ ಮಾಡಿದ್ದರೆ ಸಂಘರ್ಷ ಉಂಟಾಗುತ್ತಿತ್ತು. ಜನರ ಜೀವಕ್ಕೆ ಅಪಾಯವಾಗುವ ಸಾಧ್ಯತೆ ಇತ್ತು. ಹೀಗಾಗಿ ಉಗ್ರರನ್ನು ಬಿಡುಗಡೆ ಮಾಡಿ, ಇಡೀ ದಿನ ಸೃಷ್ಟಿಯಾಗಿದ್ದ ಬಿಕ್ಕಟ್ಟಿಗೆ ತೆರೆ ಎಳೆಯಲಾಗಿದೆ. 

ಇದನ್ನು ಓದಿ: ಮಣಿಪುರ ಹಿಂಸಾಚಾರ: ಕೇಂದ್ರ ಸಚಿವರ ಮನೆಗೆ ಬೆಂಕಿ; 1200 ಜನರ ಗುಂಪಿನಿಂದ ದುಷ್ಕೃತ್ಯ

ಕಾರ್ಯಾಚರಣೆಯ ನೇತೃತ್ವ ಹೊತ್ತಿದ್ದ ಕಮಾಂಡರ್‌ ಈ ಬಗ್ಗೆ ಪ್ರಬುದ್ಧ ನಿರ್ಧಾರ ಕೈಗೊಂಡಿದ್ದಾರೆ. ಇದು ಸೇನೆಯ ಮಾನವೀಯ ಮುಖವನ್ನು ಅನಾವರಣಗೊಳಿಸಿದೆ ಎಂದು ಭಾರತೀಯ ಸೇನೆ ಹೇಳಿಕೆ ಬಿಡುಗಡೆ ಮಾಡಿದೆ.

ಹೈಡ್ರಾಮಾ:
ಮಣಿಪುರ ಬಂಡುಕೋರ ಸಂಘಟನೆಯ 12 ಉಗ್ರರು 2015ರಲ್ಲಿ ಭಾರತೀಯ ಸೇನೆಯ 6ನೇ ಡೋಗ್ರಾ ಪಡೆ ಮೇಲೆ ನಡೆದ ದಾಳಿಯಲ್ಲೂ ಭಾಗವಹಿಸಿದ್ದರು. ಶನಿವಾರ ಬೆಳಗ್ಗೆ 12 ಮಂದಿಯನ್ನು ಭಾರತೀಯ ಸೇನೆ ಬಂಧಿಸಿತು. ಆದರೆ ಈ ವೇಳೆ 1200 ರಿಂದ 1500 ಜನರು ಜಮಾವಣೆಗೊಂಡು ಉಗ್ರರನ್ನು ಕರೆದೊಯ್ಯುವುದಕ್ಕೆ ಅಡ್ಡಿಪಡಿಸಿದರು. ಮಹಿಳೆಯರೇ ಈ ದೊಂಬಿಯ ನೇತೃತ್ವ ವಹಿಸಿದ್ದರು.

ಇದನ್ನೂ ಓದಿ: ಮಣಿಪುರದಲ್ಲಿ ಅಮಿತ್‌ ಶಾ ಶಾಂತಿ ಮಂತ್ರ: ಮೀಟಿ, ಕುಕಿ ಸಮುದಾಯದ ನಾಯಕರ ಜತೆ ಶಾಂತಿ ಸಭೆ

ಕಾರ್ಯಾಚರಣೆ ನಡೆಸಲು ಅವಕಾಶ ನೀಡುವಂತೆ ಸೇನೆ ಎಷ್ಟೇ ಬೇಡಿಕೊಂಡರೂ ಧನಾತ್ಮಕ ಪರಿಣಾಮ ಬೀರಲಿಲ್ಲ. ಈ ದೊಂಬಿಯಲ್ಲಿ ಮ್ಯಾನ್ಮಾರ್‌ನಿಂದ ಬಂದವರೂ ಸೇರಿಕೊಂಡಿದ್ದರು. ಹೆಚ್ಚುವರಿ ಪಡೆಗಳನ್ನು ಸ್ಥಳಕ್ಕೆ ಆಗಮಿಸುವುದಕ್ಕೂ ಈ ದೊಂಬಿ ತಡೆಯೊಡ್ಡಿತ್ತು. ಸೇತುವೆಯಲ್ಲಿ ಮರದ ಹಲಗೆಗಳನ್ನೂ ತೆಗೆದು ಹಾಕಲಾಗಿತ್ತು. ಹೀಗಾಗಿ ಬಂಡುಕೋರರನ್ನು ಬಿಡುಗಡೆ ಮಾಡಲಾಯಿತು ಎಂದು ಸೇನಾ ಮೂಲಗಳು ತಿಳಿಸಿವೆ.

ಮಣಿಪುರದಲ್ಲಾಗಿದ್ದೇನು?

  • ಬಂಡುಕೋರ ಸಂಘಟನೆಯ 12 ಉಗ್ರರನ್ನು ಅವರ ಊರಿಗೆ ಹೋಗಿ ಬಂಧಿಸಿದ ಸೇನೆ
  • ಉಗ್ರರ ರಕ್ಷಣೆಗೆ ನಿಂತ ಗ್ರಾಮಸ್ಥರು: ಯೋಧರಿಗೆ 1500 ಜನರಿಂದ ಊರೊಳಗೆ ದಿಗ್ಬಂಧನ
  • ಮಹಿಳೆಯರನ್ನು ಮುಂದೆ ಬಿಟ್ಟು ಸೈನಿಕರು ದಾಳಿ ನಡೆಸದಂತೆ ನೋಡಿಕೊಂಡ ಗ್ರಾಮಸ್ಥರು
  • ಹೆಚ್ಚಿನ ಅನಾಹುತ ತಡೆಯುವ ಸಲುವಾಗಿ ದಾಳಿ ನಡೆಸದೆ ಉಗ್ರರ ಬಿಟ್ಟುಕೊಟ್ಟ ಸೈನಿಕರು

ಇದನ್ನೂ ಓದಿ: 4 ದಿನ ಮಣಿಪುರ ಪ್ರವಾಸದಲ್ಲಿ ಅಮಿತ್‌ ಶಾ: ಶಾಂತವಾಯ್ತು ಜನಾಂಗೀಯ ಸಂಘರ್ಷ 

ಇದನ್ನೂ ಓದಿ: ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ, ಇಬ್ಬರು ಬಲಿ; ಸೇನೆಯಿಂದ 40 ಕ್ಕೂ ಹೆಚ್ಚು ಉಗ್ರರ ಹತ್ಯೆ!

 

Latest Videos
Follow Us:
Download App:
  • android
  • ios