ಅಗ್ನಿಪಥ ಯೋಜನೆಗೆ ದೇಶಾದ್ಯಂತ ಭಾರಿ ಪ್ರತಿಭಟನೆ ಸೇನಾ ನೇಮಕಾತಿ ಯೋಜನೆಗೆ ವಿವಾದ ಯಾಕೆ? ಅಗ್ನಿಪಥ ಯೋಜನೆಯಿಂದ ಯಾರಿಗೆ ಒಳಿತು? ನೌಕಾ ಸೇನಾ ಮುಖ್ಯಸ್ಥರ ಜೊತೆ ಏಷ್ಯಾನೆಟ್ ನ್ಯೂಸ್ ಸಂದರ್ಶನ

ನವದೆಹಲಿ(ಜೂ.20): ಕೇಂದ್ರ ಸರ್ಕಾರ ಘೋಷಿಸಿರುವ ಅಗ್ನಿಪಥ ಸೇನಾ ನೇಮಕಾತಿ ಯೋಜನೆಗೆ ಹಲವು ರಾಜ್ಯಗಳಲ್ಲಿ ಭಾರಿ ಪ್ರತಿಭಟನೆ ನಡೆಯುತ್ತಿದೆ. ಇದು ದೇಶದ ಭದ್ರತೆಗೆ ಅಪಾಯ, ಸೇನೆ ಸೇರಲು ಇಚ್ಚಿಸಿದ ಯುವಕರಿಗೆ ಮಾಡಿದ ಅನ್ಯಾಯ ಸೇರಿದಂತೆ ಹಲವು ಆರೋಪಗಳು ಕೇಳಿಬರುತ್ತಿದೆ. ಅಸಲಿಗೆ ಈ ಯೋಜನೆಯಿಂದ ದೇಶಕ್ಕಾಗುವ ಲಾಭವೇನು? ವಿವಾದ ಯಾಕೆ? ಈ ಕುರಿತು ಏಷ್ಯಾನೆಟ್ ನ್ಯೂಸ್ ಜೊತೆ ನೌಕಾ ಸೇನಾ ಮುಖ್ಯಸ್ಥ ಆರ್ ಹರಿ ಕುಮಾರ್ ಹಲವು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.

ಏಷ್ಯಾನೆಟ್ ನ್ಯೂಸ್ ನಡೆಸಿದ ವಿಶೇಷ ಸಂದರ್ಶನದಲ್ಲಿ ಆರ್ ಹರಿ ಕುಮಾರ್ ಸೇನಾ ನೇಮಕಾತಿ ಅಗ್ನಿಪಥ ಕುರಿತು ಎದ್ದಿರುವ ಗೊಂದಲಕ್ಕೆ ತೆರೆ ಎಳೆದಿದ್ದಾರೆ. ಅಗ್ನಿಪಥ ಯೋಜನೆ ಏಕಾಏಕಿ ತೆಗೆದುಕೊಂಡ ನಿರ್ಧಾರವಲ್ಲ. ಕಾರ್ಗಿಲ್ ಯುದ್ಧದ ವರದಿಯಲ್ಲಿ ನೀಡಿದ ಶಿಫಾರಸು ಆಧರಿಸಿ ಕಳೆದೆರಡು ವರ್ಷ ಇದಕ್ಕಾಗಿ ಸತತ ಪರಿಶ್ರಮ ಪಡಲಾಗಿದೆ. ಅಭ್ಯಾಸ, ಇತರ ದೇಶದ ಮಿಲಿಟರಿ ನೇಮಕಾತಿ, ನಮ್ಮ ದೇಶದಲ್ಲಿನ ಸಮಸ್ಯೆ ಹಾಗೂ ನೇಮಕಾತಿ ಸೇರಿದಂತೆ ಸಮಗ್ರ ವಿಚಾರವನ್ನು ಚರ್ಚಿಸಿ, ಅಧ್ಯಯನ ಮಾಡಿ ಅಗ್ನಿಪಥ ಯೋಜನೆ ರೂಪಿಸಲಾಗಿದೆ ಎಂದು ಹರಿ ಕುಮಾರ್ ಹೇಳಿದ್ದಾರೆ.

ಅಗ್ನಿಪಥಕ್ಕೆ ವಿರೋಧ: ದಂಗೆ ಎಬ್ಬಿಸುವವರಿಗೆ ಸೇನಾ ಮುಖ್ಯಸ್ಥರ ಖಡಕ್ ವಾರ್ನಿಂಗ್!

ಕಾರ್ಗಿಲ್ ವರದಿಯಲ್ಲಿ ಯೋಧರ ಸರಾಸರಿ ವಯಸ್ಸು ಕಡಿತಗೊಳ್ಳಬೇಕು. ಭಾರತದ ಗಡಿಗಳಿರುವ ಭೌಗೋಳಿಕ ಪ್ರದೇಶ, ಅಲ್ಲಿ ಎದುರಾಗುವ ಸವಾಲುಗಳನ್ನು ಮೆಟ್ಟಿ ನಿಲ್ಲಲು ಯುವ ಯೋಧರ ಅವಶ್ಯಕತೆ ಇದೆ. ಎಲ್ಲೀವರೆಗೆ ಭಾರತ ಯೋಧರ ವಯಸ್ಸು ಕಡಿಮೆಯಾಗುವುದಿಲ್ಲ ಅಲ್ಲೀವರಗೆ ಭಾರತ ಶಕ್ತವಾಗಿ ಹೋರಾಡಲು ಕಷ್ಟವಾಗಲಿದೆ ಎಂದಿದೆ. ಈ ಕಾರಣಕ್ಕಾಗಿ ಯೋಧರ ವಯಸ್ಸು ಕಡಿಮೆ ಮಾಡಲು ಹಾಗೂ ಸೇನೆ ಬಲ ತುಂಬಲು ಅಗ್ನಿಪಥ ಯೋಜನೆ ಅತ್ಯಂತ ಸಹಕಾರಿ ಎಂದು ಹರಿ ಕುಮಾರ್ ಹೇಳಿದ್ದಾರೆ.

ಅಗ್ನಿಪಥ ಯೋಜನೆ ಘೋಷಣೆಗೂ ಮುನ್ನ ಸೇನಾ ತಂಡ ಹಲವು ವಿಭಾಗಗಳ ಜೊತೆ ನಿರಂತರ ಕೆಲಸ ಮಾಡಿದೆ. ಸೇನೆಯ ಸೇವಾ ಕೇಂದ್ರ ಕಚೇರಿ, ಸೇನೆಯ ನೇಮಕಾತಿ ವಿಭಾಗ, ಸೇನಾ ಅಧಿಕಾರಿಗಳು, ಹಣಕಾಸು ಸಚಿವಾಲಯ, ಕೌಶಲ್ಯ ಅಭಿವೃದ್ಧಿ ಸಚಿವಾಲಯ, ಶಿಕ್ಷಣ ಸಚಿವಾಲ ಸೇರಿದಂತೆ ಹಲವು ಸಚಿವಾಲಯದ ಜೊತೆ ಚರ್ಚಿಸಲಾಗಿದೆ. ಅಗ್ನಪಥದಡಿಯಲ್ಲಿ ಆಯ್ಕಯಾಗುವ ಅಗ್ನಿವೀರರಗೆ ನಾಲ್ಕು ವರ್ಷಗದ ಬಳಿಕ ಸೇನೆಯಲ್ಲಿ ಉಳಿಸಿಕೊಳ್ಳುವ ಪ್ರಮಾಣ ಕುರಿತು ಸೇನೆ ಸಾಕಷ್ಟು ಚರ್ಚಿಸಿದೆ. ಇದು ಶೇಕಡಾ 50 ರಷ್ಟು ಇರಬೇಕೇ? ಅಥವಾ 60-40 ಅಥವಾ 65-35 ಇರಬೇಕೇ ಎಂದು ಚರ್ಚಿಸಲಾಗಿದೆ. ಈ ಎಲ್ಲಾ ಅಭಿಪ್ರಾಯ, ಅಧ್ಯಯನ ವರದಿಗಳನ್ನು ಕ್ರೋಢಿಕರಿಸಿ ಭಾರತದ ಸೇನೆಗೆ ಹೊಂದಿಕೊಳ್ಳುವ ಅಗ್ನಪಥ ಯೋಜನೆ ಜಾರಿಗೊಳಿಸಲಾಗಿದೆ ಎಂದು ಮೋದಿ ಹೇಳಿದ್ದಾರೆ. 

Agnipath Protest ಭಾರತ್ ಬಂದ್‌ನಿಂದ 742 ರೈಲು ಸಂಚಾರ ರದ್ದು, ಟಿಕೆಟ್ ಹಣ ಹಿಂಪಡೆಯುವುದು ಹೇಗೆ?

ನಾಲ್ಕು ವರ್ಷಗಳ ಬಳಿಕ ಅಗ್ನಿವೀರರು ನಿರುದ್ಯೋಗಿಗಳಾಗುತ್ತಾರೆ ಅನ್ನೋ ಮಾತಲ್ಲಿ ಹುರುಳಿಲ್ಲ. ಸಶಸ್ತ್ರ ಪಡೆಯಲ್ಲಿ ಮುಂದುವರಿಯಲು ಅವಕಾಶವಿದೆ. ಚಿಕ್ಕ ವಯಸ್ಸಿನಲ್ಲೇ ನಾಲ್ಕು ವರ್ಷ ಸೇವೆ ಸಲ್ಲಿಸುಲು ಅವಕಾಶವಿದೆ. ಸೇನೆಗೆ ಸೇರಿ 15 ರಿಂದ 20 ವರ್ಷ ಇರಬೇಕೆ, ಅಥವಾ ನಾಲ್ಕು ವರ್ಷಕ್ಕೆ ಒಪ್ಪಂದ ಅಂತ್ಯಗೊಳಿಸಬೇಕಾ ಅನ್ನೋ ಆಯ್ಕಯೂ ಯುವಕರ ಮುಂದಿದೆ. ನಾಲ್ಕು ವರ್ಷಗಳ ಬಳಿಕ ರಾಜ್ಯದ ವಿವಿಧ ಶಸಸ್ತ್ರ ಪಡೆಯಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳಲು ಸಾಧ್ಯ ಎಂದು ಹರಿ ಕುಮಾರ್ ಹೇಳಿದ್ದಾರೆ.

ಅಗ್ನಿವೀರರು ನಾಲ್ಕು ವರ್ಷಗಳಲ್ಲಿ ಶಿಸ್ತು, ಕೆಲಸ, ತಂಡವಾಗಿ, ದೇಶಕ್ಕಾಗಿ ಸೇವೆ ಎಲ್ಲವನ್ನೂ ಕಲಿಯಲಿದ್ದಾರೆ. ಈ ಯೋಜನೆಗೆ ಬಹುತೇಕ ಎಲ್ಲಾ ಕ್ಷೇತ್ರಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ. ವಿವಿಧ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಈ ಯೋಜನೆ ಸಹಕಾರಿಯಾಗಿದೆ ಎಂದು ಹರಿ ಕುಮಾರ್ ಹೇಳಿದ್ದಾರೆ.