ಮೂಲಗಳ ಪ್ರಕಾರ, ವಕೀಲರ ಮೂಲಕ ಕೋರ್ಟ್‌ ಮುಂದೆ ಹಾಜರಾಗಲು ಅನುಮತಿ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿದ್ದು, ಈ ಅರ್ಜಿಯನ್ನು ತಿರಸ್ಕರಿಸಲಾಗಿದೆ. ಮೇ 8 ರಂದು ಕೋರ್ಟ್‌ ಮುಂದೆ ಖುದ್ದಾಗಿ ಹಾಜರಾಗುವಂತೆ ಸೂಚಿಸಲಾಗಿದೆ. 

ನವದೆಹಲಿ (ಮೇ.5): ಲೇಡಿ ಬ್ಲ್ಯಾಕ್‌ಮೇಲರ್‌ ಅರ್ಚನಾ ನಾಗ್‌ ಅವರ ನಿಕಟವರ್ತಿಗಳಲ್ಲಿ ಒಬ್ಬರಾಗಿದ್ದ ಶ್ರದ್ಧಾಂಜಲಿ ಬೆಹರಾಗೆ ಕೋರ್ಟ್‌ ಶಾಕ್‌ ನೀಡಿದೆ.ವಿ ಶೇಷ ಜಾರಿ ನಿರ್ದೇಶನಾಲಯ (ಇಡಿ) ನ್ಯಾಯಾಲಯವು ವೈಯಕ್ತಿಕವಾಗಿ ತನ್ನ ಮುಂದೆ ಹಾಜರಾಗುವಂತೆ ಶ್ರದ್ಧಾಂಜಲಿಗೆ ಸೂಚನೆ ನೀಡಿದೆ. ತನ್ನ ವಕೀಲರ ಮೂಲಕ ನ್ಯಾಯಾಲಯದ ವಿಚಾರಣೆಗೆ ಹಾಜಾರಾಗುತ್ತೇನೆ ಎಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ ಶ್ರದ್ಧಾಂಜಲಿ ಬೆಹರಾಗೆ ಹಿನ್ನಡೆಯಾಗಿದ್ದು, ಮೇ 8 ರಂದು ಕೋರ್ಟ್‌ನಲ್ಲು ಖುದ್ದು ಹಾಜರಾಗಿರುವಂತೆ ಸೂಚನೆ ನೀಡಿದೆ.ಬಂಧನಕ್ಕೆ ಒಳಗಾಗುವ ಭೀತಿಯಲ್ಲಿರುವ ಶ್ರದ್ಧಾಂಜಿಲಿ, ತಮ್ಮ ವಕೀಲರ ಮೂಲಕ ನ್ಯಾಯಾಲಯದ ಮುಂದೆ ಹಾಜರಾಗಲು ಅನುಮತಿ ಕೋರಿದ್ದರು ಎಂದು ಮೂಲಗಳು ತಿಳಿಸಿವೆ. ಈ ನಡುವೆ ಜಾರಿ ನಿರ್ದೇಶನಾಲಯ ಶ್ರದ್ಧಾಂಜಲಿ ಕೂಡ ಹನಿ ಟ್ರ್ಯಾಪ್‌ ಕೇಸ್‌ನಲ್ಲಿ ಆರೋಪಿ ಎಂದು ಹೆಸರಿಸಿದ ಬಳಿಕ ಆಕೆಗೆ ಸಮಸ್ಯೆ ಇನ್ನಷ್ಟು ಹೆಚ್ಚಾಗಿದೆ. ಮೇ 8 ರಂದು ನ್ಯಾಯಾಲಯದ ಮುಂದೆ ಹಾಜರಾಗುವಂತೆ ಆಕೆಯನ್ನು (ಶ್ರದಾಂಜಲಿ) ಕೇಳಲಾಗಿದೆ ಎಂದು ಇಡಿ ಪರವಾಗಿ ವಾದ ಮಂಡಿಸಿದ ಗೋಪಾಲ್ ಅಗರ್ವಾಲ್ ಹೇಳಿದ್ದಾರೆ. ಶ್ರದ್ಧಾಂಜಲಿ ಪರ ವಕೀಲ ಅಶೋಕ್ ದಾಸ್, “ವಿಶೇಷ ನ್ಯಾಯಾಲಯವು ಖುದ್ದಾಗಿ ಅಥವಾ ವಕೀಲರ ಮೂಲಕ ಹಾಜರಾಗಲು ನೋಟಿಸ್ ನೀಡಿದಾಗ, ನಾನು ಸೆಕ್ಷನ್ 205 ರ ಅಡಿಯಲ್ಲಿ ವಕೀಲರ ಮೂಲಕ ಪ್ರತಿನಿಧಿಸುತ್ತೇವೆ ಎಂದು ಉಲ್ಲೇಖಿಸಿ ಪ್ರಾತಿನಿಧ್ಯವನ್ನು ನೀಡಿದ್ದೆ. ಅದನ್ನು ನ್ಯಾಯಾಲಯ ತಿರಸ್ಕರಿಸಿದೆ. ನಾವು ಈ ತೀರ್ಪನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲಿದ್ದೇವೆ' ಎಂದು ಹೇಳಿದ್ದಾರೆ.

"ಹೈಕೋರ್ಟ್ ವಿಶೇಷ ನ್ಯಾಯಾಲಯಕ್ಕೆ ಅರ್ಜಿಯನ್ನು ಮರುಪರಿಶೀಲಿಸಲು ಕೇಳಿದೆ. ಆದರೆ ನ್ಯಾಯಾಲಯವು ಏಪ್ರಿಲ್ 24 ರಂದು ವಿಚಾರಣೆ ನಡೆಸಿ ತೀರ್ಪನ್ನು ಕಾಯ್ದಿರಿಸಿತ್ತು. ಈಗ, ಮನವಿಯನ್ನು ತಿರಸ್ಕರಿಸಲಾಗಿದೆ ಮತ್ತು ಮೇ 8 ರಂದು ಖುದ್ದಾಗಿ ಹಾಜರಾಗುವಂತೆ ನ್ಯಾಯಾಲಯ ಶ್ರದ್ಧಾಂಜಲಿಯನ್ನು ಕೇಳಿದೆ ”ಎಂದು ದಾಸ್ ಹೇಳಿದ್ದಾರೆ. 

ಏಪ್ರಿಲ್ 11 ರಂದು, ಚಲನಚಿತ್ರ ನಿರ್ಮಾಪಕ, ಅಕ್ಷಯ ಪಾರಿಜಾಗೆ ಸಂಬಂಧಿಸಿದ ನಯಾಪಾಲಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಅರ್ಚನಾ ನಾಗ್ ಮತ್ತು ಅವರ ಪತಿ ಜಗಬಂಧು ಚಂದ್‌ಗೆ ಒರಿಸ್ಸಾ ಹೈಕೋರ್ಟ್ ಷರತ್ತುಬದ್ಧ ಜಾಮೀನು ನೀಡಿತ್ತು. ಆದರೆ, ದಂಪತಿ ವಿರುದ್ಧ ಖಂಡಗಿರಿ ಪೊಲೀಸ್ ಠಾಣೆಯಲ್ಲಿ ಇತರೆ ಪ್ರಕರಣಗಳು ಬಾಕಿಯಿರುವುದರಿಂದ ಇನ್ನೂ ಜೈಲಿನಲ್ಲಿದ್ದಾರೆ.

Honeytrapನಿಂದ 30 ಕೋಟಿ ರೂ. ಆಸ್ತಿ ಸಂಪಾದಿಸಿದ ಒಡಿಶಾ ಮಹಿಳೆ: ಈಕೆ ಬಾಯಿಬಿಟ್ಟರೆ ಸರ್ಕಾರವೇ ಪತನ..!

ಏನಿದು ಕೇಸ್‌, ಯಾರೀಕೆ ಅರ್ಚನಾ?: ಅರ್ಚನಾ ನಾಗ್‌ ಬ್ಲ್ಯಾಕ್‌ ಮೇಲರ್‌. ಹನಿ ಟ್ರ್ಯಾಪ್‌ ಮಾಡುವ ಮೂಲಕ ರಾಜಕಾರಣಿಗಳು, ಉದ್ಯಮಿಗಳು ಮತ್ತು ಸಿನಿಮಾ ನಿರ್ಮಾಪಕರ ಅಶ್ಲೀಲ ಫೋಟೋ ಹಾಗೂ ವಿಡಿಯೋಗಳನ್ನು ಸಾರ್ವಜನಿಕವಾಗಿ ಬಹಿರಂಗ ಮಾಡುವುದಾಗಿ ಬೆದರಿಸಿ ಹಣ ಸುಲಿಗೆ ಮಾಡುವುದನ್ನೇ ತಮ್ಮ ಕೆಲಸವನ್ನಾಗಿ ಮಾಡಿಕೊಂಡಿದ್ದರು. ಒಡಿಶಾದ ಪ್ರಖ್ಯಾತ ಚಲನಚಿತ್ರ ನಿರ್ಮಾಪಕ ಅಕ್ಷಯ ಪಾರಿಜಾರನ್ನು ಹನಿ ಟ್ರ್ಯಾಪ್‌ ಬಲೆಗೆ ಬೀಳಿಸುವ ಪ್ರಯತ್ನ ವಿಫಲವಾಗಿದೆ. ಇದರ ಬೆನ್ನಲ್ಲಿಯೇ ಆಕೆ ಜೈಲು ಪಾಲಾಗಿದ್ದು, ದಿನಕ್ಕೆ ಒಂದೊಂದು ಕಥೆಗಳು ಹೊರಬರುತ್ತಿವೆ. ಅಂದಾಜಿನ ಪ್ರಕಾರ, 18 ಶಾಸಕರು ಸೇರಿದಂತೆ ರಾಜ್ಯದ 25 ಪ್ರಭಾವಿ ವ್ಯಕ್ತಿಗಳನ್ನು ಈಕೆ ಹನಿಟ್ರ್ಯಾಪ್‌ ಬಲೆಗೆ ಬೀಳಿಸಿದ್ದಾಳೆ. 2018 ರಿಂದ 2022ರವರೆಗೆ ಈಕೆ ವ್ಯಾಪಕವಾಗಿ ಇಂಥ ಕೆಲಸಗಳನ್ನು ಮಾಡಿದ್ದರು. ಇದರಿಂದಾಗಿ ಅಚರ್ನಾ ಹಾಗೂ ಆಕೆಯ ಪತಿ ಜಗಬಂಧು 30 ಕೋಟಿ ರೂಪಾಯಿ ಆಸ್ತಿ ಗಳಿಕೆ ಮಾಡಿದ್ದರು. ಈಕೆಯ ಹೆಸರಲ್ಲಿ ಮೂರು ಅಂತಸ್ತಿನ ಬಂಗಲೆಯಿದ್ದು, 50 ಲಕ್ಷಕ್ಕೂ ಅಧಿಕ ಬೆಲೆಯ ಪೀಠೋಪಕರಣಗಳು ಇವರ ಮನೆಯಲ್ಲಿದೆ. ಇದರ ನಡುವೆ ಆಕೆಯ ಟ್ರ್ಯಾಪ್‌ಗೆ ಬಿದ್ದ ಹೆಚ್ಚಿನವರು ಒಡಿಶಾದಲ್ಲಿ ಸರ್ಕಾರ ನಡೆಸುತ್ತಿರುವ ಬಿಜೆಡಿಯ ಶಾಸಕರು ಎನ್ನಲಾಗಿದೆ.

ಹನಿಟ್ರ್ಯಾಪ್‌ಗೆ ಕೆಡವಿ ನಿವೃತ್ತ ಪ್ರಾಧ್ಯಾಪಕನಿಂದ 21 ಲಕ್ಷರೂ. ಪೀಕಿದ ಚೆಂದುಳ್ಳಿ ಚೆಲುವೆ