ನಿವೃತ್ತ ಪ್ರಾಧ್ಯಾಪಕರೊಬ್ಬರ ಜೊತೆ ಸಲುಗೆ ಬೆಳೆಸಿಕೊಂಡ ಚೆಂದುಳ್ಳಿ ಚೆಲುವೆಯೊಬ್ಬಳ್ಳು ಹನಿಟ್ರ್ಯಾಪ್(Honeytrap) ಖೆಡ್ಡಕ್ಕೆ ಕೆಡವಿ ಬಳಿಕ ಅವರ ಅಶ್ಲೀಲ ಚಿತ್ರ ಮತ್ತು ವಿಡಿಯೊಗಳನ್ನು ರೆಕಾರ್ಡ್ ಮಾಡಿಕೊಂಡು ಹಣಕ್ಕೆ ಬೇಡಿಕೆ ಇಟ್ಟಿದ್ದಾಳೆ. ಕೊಡದಿದ್ದರೆ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬ್ಲಾಕ್‌ಮೇಲ್ ಮಾಡಿ, ಬರೋಬ್ಬರಿ 21 ಲಕ್ಷ ದೋಚಿದ್ದಾಳೆ!

ಹುಬ್ಬಳ್ಳಿ (ಅ.13) : ನಿವೃತ್ತ ಪ್ರಾಧ್ಯಾಪಕರೊಬ್ಬರ ಜೊತೆ ಸಲುಗೆ ಬೆಳೆಸಿಕೊಂಡ ಚೆಂದುಳ್ಳಿ ಚೆಲುವೆಯೊಬ್ಬಳ್ಳು ಹನಿಟ್ರ್ಯಾಪ್(Honeytrap) ಖೆಡ್ಡಕ್ಕೆ ಕೆಡವಿ ಬಳಿಕ ಅವರ ಅಶ್ಲೀಲ ಚಿತ್ರ ಮತ್ತು ವಿಡಿಯೊಗಳನ್ನು ರೆಕಾರ್ಡ್ ಮಾಡಿಕೊಂಡು ಹಣಕ್ಕೆ ಬೇಡಿಕೆ ಇಟ್ಟಿದ್ದಾಳೆ. ಕೊಡದಿದ್ದರೆ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬ್ಲಾಕ್‌ಮೇಲ್ ಮಾಡಿ, ಬರೋಬ್ಬರಿ 21 ಲಕ್ಷ ದೋಚಿದ್ದಾಳೆ!

ಉಪತಹಸೀಲ್ದಾರ್‌ ಹನಿಟ್ರ್ಯಾಪ್‌ : ಪ್ರಕರಣ ಮುಚ್ಚಿ ಹಾಕಲು ₹25 ಲಕ್ಷಕ್ಕೆ ಬೇಡಿಕೆ

ಅಂಜಲಿ ಶರ್ಮಾ(Anjali sharma) ಎಂಬಾಕೆ ಧಾರವಾಡ(Dharwad)ದ ಆ ಪ್ರಾಧ್ಯಾಪಕರಿಗೆ ವಾಟ್ಸ್‌ಆ್ಯಪ್(Whatsapp) ವಿಡಿಯೊ ಕರೆ(Video call) ಮೂಲಕ ಪರಿಚಯವಾಗಿದ್ದಳು. ಸ್ನೇಹ ಸಲುಗೆಗೆ ತಿರುಗಿತ್ತು. ವಾಟ್ಸ್‌ಆ್ಯಪ್‌ನಲ್ಲಿ ಇಬ್ಬರೂ ತಮ್ಮ ಖಾಸಗಿ ವಿಡಿಯೊ ಹಾಗೂ ಫೋಟೊಗಳನ್ನು ವಿನಿಮಯ ಮಾಡಿಕೊಂಡಿದ್ದರು. ವಿಡಿಯೊ ಕಾಲ್‌ನಲ್ಲಿಯೂ ಮಾತನಾಡಿದ್ದರು.

ಕೆಲ ದಿನಗಳ ನಂತರ ಅಂಜಲಿ ನಿವೃತ್ತ ಪ್ರಾಧ್ಯಾಪಕರ ಖಾಸಗಿ ವಿಡಿಯೊ, ಫೋಟೊ, ವಿಡಿಯೊ ಕರೆಯ ಸ್ಕ್ರೀನ್‌ಶಾಟ್‌ಗಳನ್ನು ತೋರಿಸಿ 3 ಲಕ್ಷರೂ. ನೀಡುವಂತೆ ಬ್ಲಾಕ್‌ಮೇಲ್ ಮಾಡಿದ್ದಾಳೆ. ನಂತರ, ಆಕೆಯ ಸಹಚರ ವಿಕ್ರಮ್(Vikram)ಎಂಬಾತ ತಾನು ಸೈಬರ್ ಪೊಲೀಸ್ ಅಧಿಕಾರಿ(Cyber police Officer) ಎಂದು ಹೇಳಿಕೊಂಡು ಪ್ರಾಧ್ಯಾಪಕರಿಗೆ ಕರೆ ಮಾಡಿ 
ನಿಮಗೆ ಬ್ಲಾಕ್‌ಮೇಲ್ ಮಾಡಿರುವ ಅಂಜಲಿ ನನಗೆ ಪರಿಚಯವಿದ್ದು, ನಿಮ್ಮ ಫೋಟೊ ಮತ್ತು ವಿಡಿಯೊಗಳನ್ನು ಡೆಲಿಟ್ ಮಾಡಿಸುತ್ತೇನೆ. ಅದಕ್ಕಾಗಿ, ನನಗೆ 5 ಲಕ್ಷ ಕೊಡಬೇಕು ಎಂದಿದ್ದಾನೆ. 

ಪ್ರಾಧ್ಯಾಪಕರ ಬ್ಯಾಂಕ್ ಖಾತೆಯ ವಿವರ ಪಡೆದು, ಆನ್‌ಲೈನ್‌(Online)ನಲ್ಲಿ ಹಂತಹಂತವಾಗಿ 21 ಲಕ್ಷರೂ. ತನ್ನ ಖಾತೆಗೆ ವರ್ಗಾಯಿಸಿಕೊಂಡು ವಂಚಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಹುಬ್ಬಳ್ಳಿ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಡ್ಯ ಹನಿಟ್ರ್ಯಾಪ್: ಸಲ್ಮಾಭಾನು ಮಾಯಾಜಾಲಕ್ಕೆ ಸಿಲುಕಿದ ಜಗನ್ನಾಥ ಶೆಟ್ಟಿ