Asianet Suvarna News Asianet Suvarna News

ಸುಪ್ರೀಂ ಚಾಟಿ ಬಳಿಕ ಆಂಧ್ರದಲ್ಲಿ ದ್ವಿತೀಯ ಪಿಯು ಪರೀಕ್ಷೆ ರದ್ದು!

* ದ್ವಿತೀಯ ಪಿಯುಸಿ ಪರೀಕ್ಷೆ ವೇಳೆ ಸಾವಾದರೆ ಸರ್ಕಾರವ ಹೊಣೆ

* ಸುಪ್ರೀಂ ಚಾಟಿ ಬಳಿಕ ಆಂಧ್ರದಲ್ಲಿ ದ್ವಿತೀಯ ಪಿಯು ಪರೀಕ್ಷೆ ರದ್ದು

* ಸಾವಾಗಲ್ಲ ಎಂದು ಖಚಿತಪಡಿಸಿದರಷ್ಟೇ ಪರೀಕ್ಷೆಗೆ ಅನುಮತಿ ಎಂದಿದ್ದ ಕೋರ್ಟ್‌

AP Board Exams 2021 SSC Inter Exams Cancelled by Andhra Pradesh Government pod
Author
Bangalore, First Published Jun 25, 2021, 10:01 AM IST

ನವದೆಹಲಿ(ಜೂ.25): ದ್ವಿತೀಯ ಪಿಯುಸಿ ಪರೀಕ್ಷೆ ಬರೆಯುವ ಯಾವುದೇ ವಿದ್ಯಾರ್ಥಿ ಕೂಡಾ ಸಾವಿಗೀಡಾಗಲು ಬಿಡುವುದಿಲ್ಲ ಎಂದು ಖಚಿತವಾಗಿ ಭರವಸೆ ನೀಡುವವರೆಗೂ ರಾಜ್ಯದಲ್ಲಿ ಪರೀಕ್ಷೆ ನಡೆಸಲು ಅನುಮತಿ ನೀಡುವುದಿಲ್ಲ ಎಂದು ಸುಪ್ರೀಂಕೋರ್ಟ್‌ ಚಾಟಿ ಬೀಸಿದ ಬೆನ್ನಲ್ಲೇ, ಆಂಧ್ರಪ್ರದೇಶ ಸರ್ಕಾರ ಪರೀಕ್ಷೆ ರದ್ದು ಮಾಡುವ ನಿರ್ಧಾರ ಕೈಗೊಂಡಿದೆ.

ಈ ಕುರಿತು ಹೇಳಿಕೆ ನೀಡಿರುವ ಶಿಕ್ಷಣ ಸಚಿವ ಎ.ಸುರೇಶ್‌, ಸುಪ್ರೀಂಕೋರ್ಟ್‌ ಆದೇಶದ ಬಳಿಕ ನಾವು ಪರೀಕ್ಷೆ ನಡೆಸುವ ಸ್ಥಿತಿಯಲ್ಲಿ ಇಲ್ಲ. ಹೀಗಾಗಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಗಳನ್ನು ರದ್ದುಪಡಿಸುವ ನಿರ್ಧಾರಕ್ಕೆ ಬರಲಾಗಿದೆ ಎಂದು ಪ್ರಕಟಿಸಿತು.

ಇದಕ್ಕೂ ಮುನ್ನ ಗುರುವಾರ ಪರೀಕ್ಷೆ ರದ್ದು ಪಡಿಸಲು ಕೋರಿದ್ದ ಅರ್ಜಿಗಲ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌, ‘ ಪರೀಕ್ಷೆ ನಡೆಸುವ ಸಂಬಂಧ ಕೈಗೊಂಡಿರುವ ಸುರಕ್ಷತಾ ಕ್ರಮಗಳ ಬಗ್ಗೆ ಸರ್ಕಾರ ಸಲ್ಲಿಸಿರುವ ಮಾಹಿತಿಗಳು ನಮಗೆ ತೃಪ್ತಿ ತಂದಿಲ್ಲ. ಹೀಗಾಗಿ ನಮಗೆ ತೃಪ್ತಿ ಆಗುವವರೆಗೂ ರಾಜ್ಯದಲ್ಲಿ ಪರೀಕ್ಷೆ ನಡೆಸಲು ಅನುಮತಿ ನೀಡಲಾಗದು ಎಂದು ನ್ಯಾ.ಎ.ಎಂ.ಖಾನ್ವಿಲ್ಕರ್‌ ಮತ್ತು ನ್ಯಾ. ದಿನೇಶ್‌ ಮಹೇಶ್ವರಿ ಅವರನ್ನೊಳಗೊಂಡ ನ್ಯಾಯಪೀಠ ಹೇಳಿತು. ಇದೇ ವೇಳೆ, ಒಂದು ವೇಳೆ ಯಾವುದೇ ವಿದ್ಯಾರ್ಥಿ ಪರೀಕ್ಷೆಯಲ್ಲಿ ಭಾಗಿಯಾದ ಬಳಿಕ ಸಾವನ್ನಪ್ಪಿದರೆ ಅದಕ್ಕೆ ಸರ್ಕಾರವೇ 1 ಕೋಟಿ ರು.ವರೆಗೂ ಪರಿಹಾರ ನೀಡುವಂತೆ ಆದೇಶಿಸುವ ಬಗ್ಗೆಯೂ ತಾನು ಪರಿಶೀಲಿಸುವುದಾಗಿ ನ್ಯಾಯಪೀಠ ಹೇಳಿತ್ತು.

ಒಂದು ಕೊಠಡಿಯಲ್ಲಿ 15-18 ವಿದ್ಯಾರ್ಥಿಗಳನ್ನು ಮಾತ್ರ ಕೂರಿಸುವುದಾಗಿ ನೀವು ಹೇಳುತ್ತಿದ್ದೀರಿ. ನಿಮ್ಮ ಲೆಕ್ಕಚಾರದಲ್ಲೇ ಹೇಳುವುದಾದರೆ 5,19.510 ವಿದ್ಯಾರ್ಥಿಗಳನ್ನು ಕೊಠಡಿಗೆ 15ರಂತೆ ಕೂರಿಸಲು 34,644 ಕೊಠಡಿ ಬೇಕು. ಅಷ್ಟುಕೊಠಡಿ ನಿಮ್ಮ ಬಳಿ ಎಲ್ಲಿದೆ ತೋರಿಸಿ ಎಂದು ರಾಜ್ಯ ಸರ್ಕಾರದ ಪರ ವಕೀಲರನ್ನು ಪ್ರಶ್ನಿಸಿತ್ತು.ಅಲ್ಲದೆ ಇದು ಕೇವಲ 5 ಲಕ್ಷ ವಿದ್ಯಾರ್ಥಿಗಳ ಪ್ರಶ್ನೆಯಲ್ಲ. 34000ಕ್ಕೂ ಹೆಚ್ಚ ಪರೀಕ್ಷಾ ಪರಿವೀಕ್ಷಕರು ಸೇರಿದಂತೆ 1 ಲಕ್ಷಕ್ಕೂ ಹೆಚ್ಚು ಸಿಬ್ಬಂದಿ ಇಡೀ ಪ್ರಕ್ರಿಯೆಯಲ್ಲಿ ಭಾಗಿಯಾಗಬೇಕಾಗುತ್ತದೆ. ಅವರ ಬಗ್ಗೆಯೂ ನೀವು ಗಮನ ಹರಿಸಬೇಕಾಗುತ್ತದೆ ಎಂದು ಸೂಚಿಸಿತ್ತು.

Follow Us:
Download App:
  • android
  • ios