Asianet Suvarna News Asianet Suvarna News

ಎಲ್ಲೆಲ್ಲೂ ಇರುವೆ: ಆಂಧ್ರದ ಹಳ್ಳಿಯೊಂದರ ಜನರ ನಿದ್ದೆಗೆಡಿಸಿದ ಇರುವೆಗಳು

ಕೆಲ ದಿನಗಳ ಹಿಂದೆ ಅರ್ಜೆಂಟೀನಾದ ನಗರವೊಂದರಲ್ಲಿ ಒಮ್ಮಿಂದೊಮ್ಮೆಲೆ ಕಾಣಿಸಿಕೊಂಡ ಸಾವಿರಾರು ಜೀರುಂಡೆಗಳು ಇಡೀ ನಗರದ ಜನರನ್ನು ಪರದಾಡುವಂತೆ ಮಾಡಿತ್ತು. ಅದೇ ರೀತಿ ಈಗ ನಮ್ಮ ನೆರೆಯ ರಾಜ್ಯ ಆಂಧ್ರದ ಹಳ್ಳಿಯೊಂದರ ಜನ ಇರುವೆಗಳ ಕಾಟದಿಂದ ಪರದಾಡುತ್ತಿರುವ ವಿಚಿತ್ರ ಘಟನೆ ನಡೆದಿದೆ. 

ants made sleepless night to Andhra villagers akb
Author
First Published Sep 20, 2022, 2:04 PM IST

ವಿಶಾಖಪಟ್ಟಣ: ನೀವು ಹಾಲಿವುಡ್ ಸಿನಿಮಾ ಮಮ್ಮಿ ನೋಡಿದ್ದೀರಾ? ನೋಡಿದ್ದೀರಾದರೆ ಅದರಲ್ಲಿ ಮಮ್ಮಿ(ಗೋರಿ)ಯೊಂದರಿಂದ ಸಾವಿರಾರು ಜಿರಳೆಗಳು ಹೊರಬರುವ ದೃಶ್ಯಗಳನ್ನು ನೀವು ನೋಡಿರಹುದು. ಹಾಗೆಯೇ ಕೆಲ ದಿನಗಳ ಹಿಂದೆ ಅರ್ಜೆಂಟೀನಾದ ನಗರವೊಂದರಲ್ಲಿ ಒಮ್ಮಿಂದೊಮ್ಮೆಲೆ ಕಾಣಿಸಿಕೊಂಡ ಸಾವಿರಾರು ಜೀರುಂಡೆಗಳು ಇಡೀ ನಗರದ ಜನರನ್ನು ಪರದಾಡುವಂತೆ ಮಾಡಿತ್ತು. ಅದೇ ರೀತಿ ಈಗ ನಮ್ಮ ನೆರೆಯ ರಾಜ್ಯ ಆಂಧ್ರದ ಹಳ್ಳಿಯೊಂದರ ಜನ ಇರುವೆಗಳ ಕಾಟದಿಂದ ಪರದಾಡುತ್ತಿರುವ ವಿಚಿತ್ರ ಘಟನೆ ನಡೆದಿದೆ. 

ಆಂಧ್ರಪ್ರದೇಶದ (Andhra Pradesh) ಶ್ರೀಕಾಕುಲಂ ಜಿಲ್ಲೆಯ (Srikakulam district) ಅಮುದಲವಲಸಾ ಗ್ರಾಮದಲ್ಲಿ (Amudalavalasa Mandal) ಲಕ್ಷಾಂತರ ಸಂಖ್ಯೆಯ ಇರುವೆಗಳು ಒಮ್ಮೆಗೆ ಕಾಣಿಸಿಕೊಂಡು ಗ್ರಾಮವನ್ನು ಬಾಧಿಸುತ್ತಿವೆ. ಅದರಲ್ಲೂ ಇಸಕಲಪೇಟಾ (Isakalapeta) ಗ್ರಾಮದ ಪ್ರತಿಯೊಂದು ಮೂಲೆ ಮೂಲೆಯನ್ನು ಕೂಡ ಇರುವೆಗಳು ಬಾಧಿಸುತ್ತಿದ್ದು, ಇದು ಗ್ರಾಮಸ್ಥರನ್ನು ಬೆಚ್ಚಿ ಬೀಳುವಂತೆ ಮಾಡಿದೆ. ಇರುವೆಗಳ ಹಾವಳಿಯೊಂದಿಗೆ ಸಮಾಧಾನ ಪಡುವ ವಿಚಾರವೆಂದರೆ ಈ ಇರುವೆಗಳು ಯಾರಿಗೂ ಕಚ್ಚುತ್ತಿಲ್ಲ. ಆದರೆ ಮನುಷ್ಯ ಮೈ ಏರುವ ಇರುವೆಗಳು ಕಾಲಿನಿಂದ ತಲೆಯ ಭಾಗದವರೆಗೆ ಓಡಾಡಿ ಹಾವಳಿ ನೀಡುತ್ತಿವೆ. ಅಲ್ಲೇ ಇವುಗಳು ತಮ್ಮ ಬಾಯಿಯಿಂದ ಮನುಷ್ಯ ದೇಹದ ಮೇಲೆ ರಾಸಾಯನಿಕವನ್ನು(chemical) ಚಿಮುಕಿಸುತ್ತಿವೆ ಎಂದು ಜನ ಹೇಳುತ್ತಿದ್ದಾರೆ.

ಬೆಲ್ಲ, ಸಕ್ಕರೆಯನ್ನು ಇರುವೆಗಳಿಂದ ರಕ್ಷಿಸಲು ಈ ಟ್ರಿಕ್ಸ್ ಟ್ರೈ ಮಾಡಿ

ಸ್ಥಳೀಯರ ಪ್ರಕಾರ ಈ ಇರುವೆಗಳು ಚಿಮುಕಿಸುವ ದ್ರವ ಅಂಶವೂ ದೇಹ ತುಂಬೆಲ್ಲಾ ಅಲರ್ಜಿಗೆ ಕಾರಣವಾಗಿದೆಯಂತೆ. ದೇಹದ ತುಂಬೆಲ್ಲಾ ತುರಿಕೆ ಶುರುವಾಗಿರುವುದಲ್ಲದೇ ಅಲರ್ಜಿ ಆಗಿದೆ. ಜೊತೆಗೆ ಚರ್ಮದಲ್ಲಿ ತೊಂದರೆ ಕಾಣಿಸಿಕೊಂಡಿದೆ ಎಂದು ಜನ ಹೇಳಿದ್ದಾರೆ. ಅಲ್ಲದೇ ಈ ಇರುವೆಗಳು ಚಲಿಸಿದಲ್ಲಿ ಕೇವಲ 10 ನಿಮಿಷದಲ್ಲಿ ಅಲರ್ಜಿ ಕಾಣಿಸಿಕೊಂಡಿದೆ ಎಂದು ಜನ ಹೇಳುತ್ತಿದ್ದಾರೆ.

ಅಲ್ಲದೇ ಈ ಇರುವೆಗಳು ದಿನದ 24 ಗಂಟೆಯೂ ಜನರಿಗೆ ತಮ್ಮ ಉಪಸ್ಥಿತಿಯಿಂದ ಹಾವಳಿ ನೀಡುತ್ತಿವೆ ಎಂದು ಜನ ಆರೋಪಿಸಿದ್ದಾರೆ. ಮೈಮೇಲೆ ಇರುವೆಗಳ ಹರಿದಾಟದಿಂದ ಗ್ರಾಮದ ಕೆಲವರಿಗೆ ಜ್ವರ ಬಂದಿದೆ, ಮೈಕೈ ನೋವು ಶುರುವಾಗಿದೆ ಎಂದು ಆರೋಪ ಮಾಡಿದ್ದಾರೆ. ಅಲ್ಲದೇ ಈ ಇರುವೆ (Ants) ಕಾಟದಿಂದ ಅಸ್ವಸ್ಥರಾದವರು ಸ್ಥಳೀಯ ಸರ್ಕಾರಿ ವೈದ್ಯರನ್ನು ಹಾಗೂ ಖಾಸಗಿ ಆಸ್ಪತ್ರೆಯ ವೈದ್ಯರನ್ನು ಕೂಡ ಸಂಪರ್ಕಿಸಿದ್ದಾರೆ. ಅಲ್ಲದೇ ಇದರಿಂದ ಹುಷಾರಾಗಲು ಅವರಿಗೆ ಸುಮಾರು 10 ದಿನ ತೆಗೆದುಕೊಂಡಿದೆ ಎಂದು ತಿಳಿದು ಬಂದಿದೆ. 

ಕೆಲ ದಿನಗಳ ಹಿಂದೆ ಅರ್ಜೆಂಟೀನಾದಲ್ಲೂ ಇಂತಹದ್ದೇ ವಿಚಿತ್ರ ಘಟನೆಯೊಂದು ನಡೆದಿತ್ತು. ಮನೆ, ಭೂಮಿ,ರಸ್ತೆ ಎಲ್ಲೆಡೆಯೂ ರಾಶಿ ರಾಶಿ ಜೀರುಂಡೆಗಳು ಒಮ್ಮೆಗೆ ಬಂದು ಸೇರಿ  ಆಸ್ತಿಗಳಿಗೆ ಹಾನಿಯುಂಟು ಮಾಡಿತ್ತು. ಅರ್ಜೆಂಟೀನಾದ ಮಧ್ಯ ಪ್ರಾಂತ್ಯದಲ್ಲಿರುವ ಲಾ ಪಂಪಾದಲ್ಲಿನ ಸುಮಾರು 2,500 ಪಟ್ಟಣಗಳನ್ನು ಈ ಜೀರುಂಡೆಗಳ ಹಿಂಡು ಬಾಧಿಸಿತ್ತು. ಜೇನುನೊಣಗಳಂತೆ ರಾಶಿ ಬಿದ್ದಿರುವ ಇವುಗಳನ್ನು ಮನೆಗಳಿಂದ ಹೊರ ಹಾಕಲು ಜನ ಹೆಣಗಾಡಿದ್ದರು.

ಅಬ್ಬಾ, ಇವೆಲ್ಲಿಂದ ದಾಂಗುಡಿ ಇಡುತ್ತೋ ಈ ಇರುವೆ, ಕಾಟ ತಪ್ಪಿಸೋದು ಹೇಗೆ?

ಈ ಜೀರುಂಡೆಗಳು ಪೋಲೀಸ್ ಠಾಣೆ, ವಸತಿ ಕಟ್ಟಡಗಳು ಮತ್ತು ವಾಹನಗಳಿಗೆ ಹಾನಿ ಮಾಡುವುದರ ಜೊತೆಗೆ ಚರಂಡಿಗಳನ್ನು ಮುಚ್ಚುವುದು ಮತ್ತು ಇತರ ಅನಾನುಕೂಲತೆಗಳಿಗೆ ಕಾರಣವಾಗಿವೆ ಎಂದು ಸ್ಥಳೀಯ ಅಧಿಕಾರಿಗಳು ಹೇಳಿದ್ದರು. ಈ ಜೀರುಂಡೆಗಳು ಕಚ್ಚುವುದಿಲ್ಲ ಅಥವಾ ಕುಟುಕುವುದಿಲ್ಲ, ಆದರೆ ಅವು ಗಟ್ಟಿಮುಟ್ಟಾದ ದೇಹದ ಮೇಲ್ಭಾಗವನ್ನು ಹೊಂದಿದ್ದು, ಅವು ಹಾರುವಾಗ ಎದುರು ಸಿಕ್ಕುವ ವಸ್ತುಗಳಿಗೆ ಡಿಕ್ಕಿ ಹೊಡೆಯುತ್ತವೆ. ಇದರಿಂದಾಗುವ ಗಾಯವನ್ನು ತಪ್ಪಿಸಲು ಸ್ಥಳೀಯರು ತಮ್ಮ ಮುಖಗಳನ್ನು ಮುಚ್ಚಿಕೊಳ್ಳುವಂತೆ ಸ್ಥಳೀಯ ಅಧಿಕಾರಿಗಳು ಜನರಿಗೆ ಹೇಳಿದ್ದರು.

ಈ ಜೀರುಂಡೆಗಳ ಕಾಟ ತಡೆಯಲಾಗದ ಕೆಲವು ನಿವಾಸಿಗಳು ಈ ಜೀರುಂಡೆಗಳನ್ನು ದೊಡ್ಡದಾದ ಬಾಕ್ಸ್‌ಗಳಲ್ಲಿ ತುಂಬಿ ಅವುಗಳನ್ನು ನಗರದಾಚೆಗೆ ಎಸೆದು ಬಂದಿದ್ದರು. ಆದರೆ ಹೀಗೆ ಜೀರುಂಡೆಗಳು ಈ ಸಂಖ್ಯೆಯಲ್ಲಿ ನಗರವನ್ನು ವ್ಯಾಪಿಸಿರುವುದಕ್ಕೆ ಅಸಾಧಾರಣವಾದ ಭಾರೀ ಮಳೆ ಹಾಗೂ ಇತ್ತೀಚೆಗೆ ಅರ್ಜೆಂಟೀನಾದಲ್ಲಿ ಹೆಚ್ಚಾದ ತಾಪಮಾನ ಕಾರಣ ಎಂದು ಅಧಿಕಾರಿಗಳು ಹೇಳಿದ್ದರು. 

Follow Us:
Download App:
  • android
  • ios