ಒಡಿಶಾ (ನ.06):  ಕೊರೋನಾ ವೈರಸ್‌ ನಿಯಂತ್ರಣಕ್ಕಾಗಿ ಆ್ಯಂಟಿ ವೈರಸ್‌ ಆಗಿ ಸ್ಯಾನಿಟೈಸರ್‌ ಬಳಕೆ ಮಾಡುತ್ತಿದ್ದೇವೆ. 

ದಿನ ನಿತ್ಯ ಉಪಯೋಗಿಸುವ ವಸ್ತುಗಳನ್ನು ಕೂಡ ಸ್ಯಾನಿಟೈಸ್‌ ಮಾಡುತ್ತೇವೆ. ಅದೇ ರೀತಿ ಒಡಿಶಾದಲ್ಲಿ ಆ್ಯಂಟಿ ವೈರಸ್‌ ಟಿಫಿನ್‌ ಸೆಂಟರ್‌ವೊಂದನ್ನು ತೆರೆಯಲಾಗಿದೆ. ಇದಕ್ಕೆ  ಆ್ಯಂಟಿ ವೈರಸ್‌ ಟಿಫಿನ್‌ ಸೆಂಟರ್‌ ಎಂದು ಹೆಸರಿಡಲಾಗಿದ್ದು, ಈ ಹೆಸರಿನಿಂದಲೇ ಈ ಸೆಂಟರ್ ಭಾರೀ ಜನಪ್ರಿಯತೆಯನ್ನು ಗಳಿಸಿಕೊಂಡಿದೆ. 

IPL 2020 : ದುಬೈಯಲ್ಲಿ ಕ್ರಿಕೆಟರ್ಸ್‌ ಏನು ತಿನ್ತಾರೆ ನೋಡಿ ..

ಇಲ್ಲಿ ಇಡ್ಲಿ, ದೋಸಾ, ಸಮೋಸಾ, ಉಪ್ಪಿಟ್ಟು ಮತ್ತಿತರ ತಿಂಡಿಗಳು ಲಭ್ಯವಿದ್ದು, ಜನರು ತಿಂಡಿ ತಿನ್ನಲು ಮುಗಿಬಿದ್ದಿರುವ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. 

ಹೀಗಾಗಿ ತಿಂಡಿಗೆ ಸೆನಿಟೈಸರ್‌ ಬಳಕೆ ಮಾಡಲಾಗಿದೆಯೇ? ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.