ಕೋಲ್ಕತಾ(ಡಿ.18): ಪಶ್ಚಿಮ ಬಂಗಾಳದಲ್ಲಿ ಚುನವಣಾ ತಯಾರಿ ಭರ್ಜರಿಯಾಗಿ ನಡೆಯುತ್ತಿದೆ. ಕೆಲ ತಿಂಗಳುಗಳಲ್ಲೇ ಬಂಗಾಳದಲ್ಲಿ ವಿಧಾನ ಸಭಾ ಚುನಾವಣೆ ನಡೆಯಲಿದೆ. ಆದರೆ ಚುನಾವಣೆಗೂ ಮುನ್ನ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್(TMC)ಗೆ ಆಘಾತ ಎದುರಾಗಿದೆ.  ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆಪ್ತ ಸುವೆಂಧು ಅಧಿಕಾರಿ ರಾಜೀನಾಮೆ ಬೆನ್ನಲ್ಲೇ ಇದೀಗ ಟಿಎಂಸಿ ಶಾಸಕ ಸಿಲ್‌ಭದ್ರ ದತ್ತಾ ರಾಜೀನಾಮೆ ನೀಡಿದ್ದಾರೆ.

ಮಮತಾಗೆ ಬಿಗ್ ಶಾಕ್‌: ಪ್ರಭಾವಿ ಟಿಎಂಸಿ ಶಾಸಕ ರಾಜೀನಾಮೆ!...

ಬಾರಾಕ್‌ಪೊರ್ MLA ಸಿಲ್‌ಭದ್ರ ದತ್ತಾ ರಾಜೀನಾಮೆ ನೀಡಿ, ತೃಣಮೂಲ ಕಾಂಗ್ರೆಸ್‌ನಿಂದ ಹೊರಬಂದಿದ್ದಾರೆ. ದತ್ತಾ ರಾಜೀನಾಮೆ ಬೆನ್ನಲ್ಲೇ ಪಕ್ಷದ ಅಲ್ಪ ಸಂಖ್ಯಾತ ಸೆಲ್ ಕಾರ್ಯದರ್ಶಿ, ಟಿಎಂಸಿ ನಾಯಕ ಕಬಿರುಲ್ ಇಸ್ಲಾಂ ಕೂಡ ರಾಜೀನಾಮೆ ನೀಡಿದ್ದಾರೆ. ಈ ಮೂಲಕ ಕಳೆದೆರಡು ದಿನದಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷದ ಪ್ರಮುಖ ನಾಲ್ವರು ನಾಯಕರು ರಾಜೀನಾಮೆ ನೀಡಿದ್ದಾರೆ.

ಕೇಂದ್ರ ಸರ್ಕಾರಕ್ಕೆ ಮಮತಾ ಠಕ್ಕರ್.. ಬರೋದಿಲ್ಲ ಏನಾದ್ರೂ ಮಾಡ್ಕೊಳ್ಳಿ!.

ಒಬ್ಬರ ಮೇಲೊಬ್ಬರು ರಾಜೀನಾಮೆ ನೀಡುವ ಮೂಲಕ ಮಮತಾ ಬ್ಯಾನರ್ಜಿ ಸರ್ಕಾರಕ್ಕೆ ತೀವ್ರ ಹಿನ್ನಡೆ ತಂದಿದ್ದಾರೆ. ಹೀಗಾಗಿ ಮಮತಾ ಬ್ಯಾನರ್ಜಿ ತುರ್ತು ಸಭೆ ಕರೆದಿದ್ದಾರೆ. ಆದರೆ ಪಕ್ಷದೊಳಗೆ ಎರಡು ಗುಂಪುಗಳಾಗಿದೆ ಅನ್ನೋ ಮಾತುಗಳು ಕೇಳಿಬಂದಿದೆ. ಹೀಗಾಗಿ ಮಮತಾ ಕರೆದ ತುರ್ತು ಸಭೆಗೆ ಹಲವರು ಗೈರಾಗಿದ್ದಾರೆ. 

ಇದರ ನಡುವೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಬೆಂಗಾವಲು ವಾಹನ ಮೇಲೆ ದಾಳಿ ಕುರಿತು ಕೇಂದ್ರ ಸರ್ಕಾರ ಹಾಗೂ ಮಮತಾ ಬ್ಯಾನರ್ಜಿ ಸರ್ಕಾರ ನಡುವೆ ಗುದ್ದಾಟ ನಡೆಯುತ್ತಿದೆ. ಈ ತಲೆನೋವಿನ ನಡುವೆ ಇದೀಗ ಪಕ್ಷದ ಬುಡವೇ ಅಲುಗಾಡುತ್ತಿದೆ.