ನವದೆಹಲಿ[ಫೆ.02]: ನಿರ್ಭಯಾ ಗ್ಯಾಂಗ್‌ರೇಪ್‌ ಹಾಗೂ ಕೊಲೆ ಪ್ರಕರಣದ ದೋಷಿ ವಿನಯ್‌ ಶರ್ಮಾ ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯನ್ನು ರಾಷ್ಟ್ರಪತಿ ರಾಮನಾಥ ಕೋವಿಂದ್‌ ಶನಿವಾರ ತಿರಸ್ಕರಿಸಿದ್ದಾರೆ. ಆದರೆ ಇದರ ಬೆನ್ನಲ್ಲೇ ಅಕ್ಷಯ್‌ ಠಾಕೂರ್‌ ಎಂಬ ಇನ್ನೊಬ್ಬ ದೋಷಿಯು ಕ್ಷಮಾದಾನ ಅರ್ಜಿ ಸಲ್ಲಿಸಿದ್ದಾನೆ.

ಫೆಬ್ರವರಿ 1ರ ಬೆಳಗ್ಗೆ 6 ಗಂಟೆಗೇ ಈ ಪ್ರಕರಣದ ಎಲ್ಲ ನಾಲ್ವರೂ ದೋಷಿಗಳು ನೇಣುಗಂಬಕ್ಕೆ ಏರಬೇಕಿತ್ತು. ಆದರೆ ವಿನಯ್‌ನ ಕ್ಷಮಾದಾನ ಅರ್ಜಿ ಬಾಕಿ ಇದ್ದ ಕಾರಣ, ದಿಲ್ಲಿ ನ್ಯಾಯಾಲಯವು ಗಲ್ಲು ಶಿಕ್ಷೆ ಜಾರಿಯನ್ನು ಅನಿರ್ದಿಷ್ಟಅವಧಿಗೆ ಶುಕ್ರವಾರ ಮುಂದೂಡಿತ್ತು.

ಆದರೆ ವಿನಯ್‌ ಶರ್ಮಾ ಕ್ಷಮಾದಾನ ಅರ್ಜಿ ತಿರಸ್ಕಾರ ಹಿನ್ನೆಲೆಯಲ್ಲಿ ಹೊಸ ಡೆತ್‌ ವಾರಂಟ್‌ ಹೊರಡಿಸಲು ತಿಹಾರ್‌ ಜೈಲು ಅಧಿಕಾರಿಗಳು ಪಟಿಯಾಲಾ ಹೌಸ್‌ ಕೋರ್ಟ್‌ ಮೊರೆ ಹೋಗಿದ್ದಾರೆ.

ಸದ್ಯಕ್ಕಿಲ್ಲ ನ್ಯಾಯ: ಪಾಪಿಗಳ ಗಲ್ಲುಶಿಕ್ಷೆ ಮುಂದೂಡಿದ ದೆಹಲಿ ಕೋರ್ಟ್!

ಆದರೆ ಈಗ ವಿನಯ್‌ ಶರ್ಮಾನ ಕ್ಷಮಾದಾನ ಅರ್ಜಿ ವಜಾ ಆಗಿದೆ. ಈ ಹಿಂದೆಯೇ ಮುಕೇಶ್‌ ಸಿಂಗ್‌ ಕ್ಷಮಾದಾನ ಅರ್ಜಿಯೂ ವಜಾ ಆಗಿತ್ತು. ಇದರಿಂದ ಈ ಇಬ್ಬರ ಕಾನೂನು ಹೋರಾಟದ ಹಾದಿ ಅಂತ್ಯಗೊಂಡಂತಾಗಿದೆ. ಅಕ್ಷಯ್‌ನ ಕ್ಷಮಾದಾನ ಹಾದಿ ಇನ್ನೂ ತೆರೆದೇ ಇದೆ. ಆದರೆ ಕೊನೆಯ ಆರೋಪಿ ಪವನ್‌ ಗುಪ್ತಾ ಕ್ಯುರೇಟಿವ್‌ ಹಾಗೂ ಕ್ಷಮಾದಾನ ಅರ್ಜಿ ಸಲ್ಲಿಕೆಯ ಎರಡೂ ಮಾರ್ಗಗಳನ್ನು ಇನ್ನೂ ಉಳಿಸಿಕೊಂಡಿದ್ದಾನೆ.

ಪಾಪಿ ಅರ್ಜಿ ತಿರಸ್ಕಾರ: ನೇಣಿಗೆ ಕೊರಳೊಡ್ಡುವುದೊಂದೇ ಮಾರ್ಗ!