ಅಲ್ ಖೈದಾ ಉಗ್ರ ಸಂಘಟನೆ ಜೊತೆಗೆ ಸಂಪರ್ಕ: ಮತ್ತೊಂದು ಮದರಸಾ ನೆಲಸಮ..!
ಅಸ್ಸಾಂನಲ್ಲಿ ಅಲ್ ಖೈದಾ ಉಗ್ರ ಸಂಘಟನೆಯ ಜತೆಗೆ ಸಂಪರ್ಕ ಹೊಂದಿದೆ ಎನ್ನಲಾದ ಮದರಸಾವನ್ನು ನೆಲಸಮಗೊಳಿಸಲಾಗಿದೆ. ಈ ಹಿಂದೆಯೂ ಇದೇ ಕಾರಣಕಕೆ ಮದರಸಾವೊಂದನ್ನು ಧ್ವಂಸ ಮಾಡಲಾಗಿತ್ತು.
ಅಲ್ ಖೈದಾ ಜೊತೆಗಿನ ಸಂಪರ್ಕದ ಮೇಲೆ ಅಸ್ಸಾಂನ ಬಾರ್ಪೇಟಾ ಜಿಲ್ಲೆಯಲ್ಲಿ ಸರ್ಕಾರೇತರ ಮದರಸಾವನ್ನು ಸೋಮವಾರ ಜಿಲ್ಲೆಯ ಅಧಿಕಾರಿಗಳು ಕೆಡವಿದ್ದಾರೆ. ಈ ಸಂಬಂಧ ಮಾಹಿತಿ ನೀಡಿದ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, "ಜಿಹಾದಿ ಚಟುವಟಿಕೆಗಳು ನಡೆಯುತ್ತಿದ್ದ ಬಾರ್ಪೇಟಾ ಜಿಲ್ಲೆಯ ಧಕಾಲಿಯಾಪಾರದಲ್ಲಿರುವ ಮದರಸಾವನ್ನು ಕಾನೂನು ಪ್ರಕ್ರಿಯೆಯ ನಂತರ ಇಂದು ಹೊರಹಾಕಲಾಗಿದೆ" ಎಂದು ಹೇಳಿದರು. ಅಲ್ಲದೆ, ಈ ಘಟನೆಯ ಸಂಬಂಧ ಅಸ್ಸಾಂ ಪೊಲೀಸರು ಮದರಸಾ ಪ್ರಾಂಶುಪಾಲರಾದ ಮಹ್ಮುನೂರ್ ರಶೀದ್ ಅವರನ್ನು ಬಂಧಿಸಲಾಗಿದೆ.
ನೆಲಸಮಗೊಂಡ ಮದರಸಾ, ಶೈಖುಲ್ ಹಿಂದ್ ಮಹಮ್ಮದುಲ್ ಹಸನ್ ಜಮಿಯುಲ್ ಹುದಾ ಇಸ್ಲಾಮಿಕ್ ಅಕಾಡೆಮಿಯು ಭಾರತೀಯ ಉಪ-ಖಂಡದ (AQIS) ಭಯೋತ್ಪಾದಕ ಸಂಘಟನೆಯಲ್ಲಿ ಅಲ್ ಖೈದಾ ಸದಸ್ಯರಾಗಿರುವ ಇಬ್ಬರು ಬಾಂಗ್ಲಾದೇಶಿ ಪ್ರಜೆಗಳಿಗೆ ನೆಲೆಯಾಗಿದೆ ಎಂದು ಕಂಡುಬಂದಿದೆ. ಇನ್ನು, ಈ ಇಬ್ಬರು ಬಾಂಗ್ಲಾದೇಶಿ ಭಯೋತ್ಪಾದಕರಲ್ಲಿ ಒಬ್ಬ, ಎಂಡಿ ಸುಮನ್ ಅಲಿಯಾಸ್ ಸೈಫುಲ್ ಇಸ್ಲಾಂನನ್ನು ಈ ಮೊದಲೇ ಬಂಧಿಸಲಾಗಿತ್ತು. ಆದರೆ ಮತ್ತೊಬ್ಬ ಉಗ್ರ ತಪ್ಪಿಸಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಆಗಸ್ಟ್ 4 ರಂದು, ಅಸ್ಸಾಂನ ಮೊರಿಗಾಂವ್ ಜಿಲ್ಲೆಯ ಮತ್ತೊಂದು ಮದರಸಾವನ್ನು ಕೆಡವಲಾಯಿತು. ಹಾಗೂ, ಅದರ ಮುಖ್ಯಸ್ಥ ಮುಫ್ತಿ ಅವರನ್ನು AQIS ನೊಂದಿಗೆ ಸಂಪರ್ಕ ಹೊಂದಿದ್ದಕ್ಕಾಗಿ ಬಂಧಿಸಲಾಯಿತು.
ನೇಪಾಳ, ಬಾಂಗ್ಲಾದೇಶದ ಗಡಿಯಲ್ಲಿ ಮುಸ್ಲಿಂ ಜನಸಂಖ್ಯೆ ಹೆಚ್ಚಳ, ಆತಂಕಕಾರಿ ಎಂದ ಗುಪ್ತಚರ ಇಲಾಖೆ!
ಮದರಸಾಗಳು ಭಯೋತ್ಪಾದನೆಯ ಕೇಂದ್ರವಾಗುತ್ತಿವೆ: ಅಸ್ಸಾಂ ಸಿಎಂ
ಅಸ್ಸಾಂನ ಬಾರ್ಪೇಟಾ ಜಿಲ್ಲೆಯ ಖಾಸಗಿ ಮದರಸಾವನ್ನು ಸರ್ಕಾರಿ ಭೂಮಿಯಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದೆ ಮತ್ತು ಭಯೋತ್ಪಾದನಾ ಚಟುವಟಿಕೆಗಳಿಗೆ ತರಬೇತಿ ಶಿಬಿರವಾಗಿ ಬಳಸಲಾಗುತ್ತಿದೆ ಎಂದು ಆರೋಪಿಸಿ ಸ್ಥಳೀಯ ಆಡಳಿತವು ಅದನ್ನು ನೆಲಸಮಗೊಳಿಸಿದೆ. ಮದರಸಾ ಧ್ವಂಸವನ್ನು ದೃಢೀಕರಿಸಿದ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ "ಈ ಸಂಸ್ಥೆಗಳನ್ನು ಭಯೋತ್ಪಾದನೆಯ ಕೇಂದ್ರವಾಗಿ ಬಳಸಲಾಗುತ್ತಿರುವುದರಿಂದ ನಾವು [ಅಸ್ಸಾಂನಲ್ಲಿ] ನೆಲಸಮಗೊಳಿಸಿದ ಎರಡನೇ ಮದರಸಾ ಇದಾಗಿದೆ" ಎಂದು ಹೇಳಿದರು.
ಜಮಿಯುಲ್ ಹುದಾ ಅಕಾಡೆಮಿ ಮದರಸಾವನ್ನು ಖಾಸಗಿಯಾಗಿ ನಿರ್ಮಿಸಿದ ಇಬ್ಬರು ಸಹೋದರರಾದ ಅಕ್ಬರ್ ಅಲಿ ಮತ್ತು ಅಬ್ದುಲ್ ಕಲಾಂ ಆಜಾದ್ ಅವರನ್ನು ಶನಿವಾರ ಬಾರ್ಪೇಟಾದಲ್ಲಿ ಬಂಧಿಸಿದ ನಂತರ ಮದರಸಾವನ್ನು ಕೆಡವಲಾಯಿತು. ಈ ಸಹೋದರರು ಅಲ್ ಖೈದಾ ಬೆಂಬಲಿತ ಜಿಹಾದಿ ಮಾಡ್ಯೂಲ್‌ಗಳೊಂದಿಗೆ ಸಂಪರ್ಕ ಹೊಂದಿದ್ದರು ಮತ್ತು ಈ ವರ್ಷದ ಮಾರ್ಚ್‌ನಿಂದ ಕಾಣೆಯಾಗಿದ್ದರು ಎಂದು ವರದಿಯಾಗಿದೆ. ಇನ್ನು, ಈ ಮದರಸಾದಲ್ಲಿ ಯಾವುದೇ ಶೈಕ್ಷಣಿಕ ಚಟುವಟಿಕೆ ನಡೆಯುತ್ತಿರಲಿಲ್ಲ ಎಂದು ಹೇಳಿದ ಅಸ್ಸಾಂ ಮುಖ್ಯಮಂತ್ರಿ, ಈ ಕಟ್ಟಡವನ್ನು ಭಯೋತ್ಪಾದಕ ಸಂಘಟನೆ ಅಲ್ ಖೈದಾ ತರಬೇತಿ ಶಿಬಿರವಾಗಿ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದರು.
ಇನ್ನು, ಬಂಧಿತ ವ್ಯಕ್ತಿಗಳು ಬಾಂಗ್ಲಾದೇಶದ ಭಯೋತ್ಪಾದಕ ಕಾರ್ಯಕರ್ತರಿಗೆ ಸಾರಿಗೆ ಮತ್ತು ಇತರ ವ್ಯವಸ್ಥಾಪನಾ ಬೆಂಬಲವನ್ನು ಒದಗಿಸುವ ಅಲ್ ಖೈದಾದ ಬಾರ್ಪೇಟಾ ಘಟಕದ ಪ್ರಮುಖ ಅಂಶಗಳೆಂದು ಪೊಲೀಸರು ಹೇಳಿದ್ದಾರೆ. ಅಲ್ಲದೆ, ಈ ಸಂಬಂಧ ಒಂದು ಕಾರನ್ನು ಸಹ ವಶಪಡಿಸಿಕೊಳ್ಳಲಾಗಿದೆ. ಅಲ್ಲದೆ, ಕೆಡವಲಾದ ಈ ಮದರಸಾವನ್ನು ಈ ಹಿಂದೆ ಬಂಧಿಸಲಾಗಿದ್ದ ಬಾಂಗ್ಲಾದೇಶದ ಮೊಹಮ್ಮದ್ ಸುಮನ್ ಕೂಡ ಬಳಸಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಅವರು ಅಸ್ಸಾಂನಲ್ಲಿ AQIS-ಬೆಂಬಲಿತ ಸ್ಲೀಪರ್ ಸೆಲ್‌ಗಳ ಹಿಂದಿನ ಮಾಸ್ಟರ್‌ಮೈಂಡ್‌ಗಳಲ್ಲಿ ಒಬ್ಬರಾಗಿದ್ದರು ಮತ್ತು ಬಾಂಗ್ಲಾದೇಶ ಮೂಲದ ನಿಷೇಧಿತ ತೀವ್ರಗಾಮಿ ಭಯೋತ್ಪಾದಕ ಗುಂಪಿನ ಅನ್ಸರುಲ್ಲಾ ಬಾಂಗ್ಲಾ ಟೀಮ್ ಅಥವಾ ಎಬಿಟಿಯ ಸದಸ್ಯರಾಗಿದ್ದರು. ಸುಮನ್ ಶಿಕ್ಷಕನ ಸೋಗಿನಲ್ಲಿ ಜಮೀವುಲ್ ಹುದಾ ಅಕಾಡೆಮಿ ಮದರಸಾದಲ್ಲಿ ತಂಗುತ್ತಿದ್ದ ಎಂದೂ ಪೊಲೀಸರು ತಿಳಿಸಿದ್ದಾರೆ.
ಅಸ್ಸಾಂ ಮೂಲದ ಶಂಕಿತ ಉಗ್ರ ಬೆಂಗಳೂರು ಸಿಸಿಬಿ ಪೊಲೀಸರ ವಶಕ್ಕೆ
ಈ ಮಧ್ಯೆ, ಅಸ್ಸಾಂ ಮತ್ತು ದೆಹಲಿಯ ಸರ್ಕಾರಿ ಶಿಕ್ಷಣ ಸಂಸ್ಥೆಗಳ ನಡುವಿನ ಹೋಲಿಕೆಗೆ ಸಂಬಂಧಿಸಿದಂತೆ ಟ್ವಿಟ್ಟರ್‌ನಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರೊಂದಿಗಿನ ತಮ್ಮ ಇತ್ತೀಚಿನ ವಾಗ್ಯುದ್ಧದ ಬಗ್ಗೆ ಪ್ರತಿಕ್ರಿಯಿಸಿದ ಹಿಮಂತ ಬಿಸ್ವಾ ಶರ್ಮಾ, ಕೇಜ್ರಿವಾಲ್ ಅವರು "ರಾಷ್ಟ್ರೀಯ ರಾಜಧಾನಿಯನ್ನು ಸಣ್ಣ ನಗರಗಳೊಂದಿಗೆ ಹೋಲಿಸುವುದು ತಪ್ಪು" ಎಂದು ಹೇಳಿದರು.