ಅಯೋಧ್ಯೆ ತೀರ್ಪಿನ ಬಳಿಕ ಬಾಬ್ರಿಯ ಮತ್ತೊಂದು ತೀರ್ಪು ಶೀಘ್ರ ಪ್ರಕಟ

ಅಡ್ವಾಣಿ, ಜೋಷಿ ಸೇರಿ ಬಿಜೆಪಿ ನಾಯಕರು ಆರೋಪಿಯಾಗಿರುವ ಕೇಸ್ | ಸಿಬಿಐನ ಲಖನೌ ವಿಶೇಷ ಕೋರ್ಟ್ ನಿಂದ ಶೀಘ್ರ ತೀರ್ಪು|ಬಾಬ್ರಿ ಧ್ವಂಸಗೊಂಡ ಬಳಿಕ 3 ಕೇಸ್‌ಗಳು|

Another Babri Case Verdict Soon by the Court

ನವದೆಹಲಿ[ನ.10]: ಅಯೋಧ್ಯೆಯ ರಾಮಮಂದಿರ-ಬಾಬ್ರಿ ಮಸೀದಿ ತೀರ್ಪನ್ನು ಸುಪ್ರೀಂ ಕೋರ್ಟ್‌ ಪ್ರಕಟಿಸಿದ ಬೆನ್ನಲ್ಲೇ, ಬಾಬ್ರಿ ಮಸೀದಿ ಪ್ರಕರಣಕ್ಕೆ ಸಂಬಂಧಿಸಿದ ಮತ್ತೊಂದು ತೀರ್ಪು ಶೀಘ್ರವೇ ಉತ್ತರ ಪ್ರದೇಶದ ಲಖನೌ ವಿಶೇಷ ನ್ಯಾಯಾಲಯದಿಂದ ಹೊರ ಬೀಳುವ ಸಾಧ್ಯತೆ ದಟ್ಟವಾಗಿದೆ. 

ಪೇಜಾವರ ಶ್ರೀ ಅಭಿನಂದಿಸಿದ ಮುಸ್ಲಿಂ ಯುವಕರು

ಈ ಪ್ರಕರಣದ ತೀರ್ಪು ಪ್ರಕಟಗೊಂಡಿದ್ದೇ ಆದಲ್ಲಿ, ಬಾಬ್ರಿ ಮಸೀದಿ ಧ್ವಂಸದ ನಂತರ ರಾಜಕೀಯ ಸೇರಿದಂತೆ ಇನ್ನಿತರ ಕಾರಣಗಳಿಗಾಗಿ ನೆನೆಗುದಿಗೆ ಬಿದ್ದಿದ್ದ ಪ್ರಕರಣವೊಂದರ ತೀರ್ಪು 27 ವರ್ಷಗಳ ಬಳಿಕ ಪ್ರಕಟವಾದಂತಾಗಲಿದೆ. 1992 ರ ಡಿಸೆಂಬರ್ 6 ರಂದು ಹಿಂದು ಕರಸೇವಕರು ಬಾಬ್ರಿ ಮಸೀದಿ ಧ್ವಂಸ ಮಾಡಿದ ಪ್ರಕರಣ ಸಂಬಂಧದ ವಿಚಾರಣೆಯು ಅಂತಿಮಘಟ್ಟ ತಲುಪಿದ್ದು, ಸಿಬಿಐ ವಿಶೇಷ ನ್ಯಾಯಾಲಯ ಶೀಘ್ರವೇ ತೀರ್ಪು ಪ್ರಕಟಿಸಲಿದೆ. 

ಅಯೋಧ್ಯೆ ತೀರ್ಪು: ಬಿಜೆಪಿಗೆ ಜೀವ ಕೊಟ್ಟಿದ್ದೇ ರಾಮಜನ್ಮಭೂಮಿ ಹೋರಾಟ

ಕಳೆದ 3 ದಶಕಗಳ ಹಿಂದಿನ ಈ ಪ್ರಕರಣದ 49 ಆರೋಪಿಗಳ ಪೈಕಿ ಕೆಲವರು ಸಾವನ್ನಪ್ಪಿದ್ದಾರೆ. ಆದರೆ, ಇದುವರೆಗೂ ವಿಚಾರಣೆ ಮಾತ್ರಪೂರ್ಣಗೊಂಡಿಲ್ಲ. ಬಾಬ್ರಿ ಮಸೀದಿ ಧ್ವಂಸ ಪ್ರಕರಣವು ಬಹುದೊಡ್ಡ ಪ್ರಮಾಣದ ಪಿತೂರಿ ಎಂದು ಉಲ್ಲೇಖಿತವಾದ ಸಿಬಿಐ ಚಾರ್ಜ್‌ಶೀಟ್‌ನಲ್ಲಿ ಬಿಜೆಪಿ ಪ್ರಮುಖ ನಾಯಕರಾದ ಲಾಲ್ ಕೃಷ್ಣಅಡ್ವಾಣಿ, ಮುರಳೀ ಮನೋಹರ ಜೋಷಿ, ಉಮಾಭಾರತಿ, ವಿನಯ್ ಕಟಿಯಾರ್, ವಿಷ್ಣುಹರಿ ದಾಲ್ಮಿಯಾ ಹಾಗೂ ಆರ್‌ಎಸ್‌ಎಸ್‌ ಸೇರಿದಂತೆ ಒಟ್ಟು 49 ಆರೋಪಿಗಳನ್ನು ಪಟ್ಟಿ ಮಾಡಲಾಗಿತ್ತು.

ಬಾಬ್ರಿ ಧ್ವಂಸಗೊಂಡ ಬಳಿಕ 3 ಕೇಸ್‌ಗಳು:

1992 ರ ಡಿಸೆಂಬರ್ 6 ರಂದು ಭಾರೀ ಪ್ರಮಾಣದ ಕರಸೇವಕರು ಬಾಬ್ರಿ ಮಸೀದಿ ಮೇಲೆ ಸಾಮೂಹಿಕ ದಾಳಿ ಮಾಡಿ ಮಸೀದಿಯನ್ನು ನೆಲಸಮಗೊಳಿಸಿದ ಬೆನ್ನಲ್ಲೇ, ಅದೇ ದಿನ ಸಂಜೆ 5.15 ಗಂಟೆಗೆ ವಿವಿಧ ಐಪಿಸಿ ಸೆಕ್ಷನ್‌ಗಳಡಿ ಅಪರಿಚಿತ ಕರಸೇವಕರ ವಿರುದ್ಧ ಕೇಸ್ ದಾಖಲಿಸಿಕೊಳ್ಳಲಾಗಿತ್ತು. ಅಲ್ಲದೆ, ಪ್ರಚೋದನಾಕಾರಿ ಭಾಷಣ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕರಾದ ಎಲ್.ಕೆ ಅಡ್ವಾಣಿ, ಅಶೋಕ್‌ ಸಿಂಘಾಲ್, ಗಿರಿರಾಜ್ ಕಿಶೋರ್, ಮುರಳೀ ಮನೋಹರ ಜೋಷಿ, ಉಮಾ ಭಾರತಿ,ವಿನಯ್ ಕಟಿಯಾರ್, ವಿಷ್ಣು ಹರಿ ದಾಲ್ಮಿಯಾ ಹಾಗೂ ಸಾಧ್ವಿ ರಿತಂಬರಾ ವಿರುದ್ಧ 2ನೇ ದೂರು ದಾಖಲಿಸಲಾಯಿತು. ಆ ನಂತರದ ದಿನಗಳಲ್ಲಿ ಮಾಧ್ಯಮ ಪ್ರತಿನಿಧಿಗಳ ಮೇಲೆ ನಡೆದ ದಾಳಿಗಳಿಗೆ ಸಂಬಂಧಿಸಿದಂತೆ ಅಯೋಧ್ಯೆಯ ರಾಮಜನ್ಮಭೂಮಿ ಠಾಣಾ ವ್ಯಾಪ್ತಿಯಲ್ಲಿ 3ನೇ ಕೇಸ್ ದಾಖಲಿಸಲಾಗಿತ್ತು. ಆ ನಂತರ, ಬಾಬ್ರಿ ಮಸೀದಿ ಧ್ವಂಸಕ್ಕೆ ಸಂಬಂಧಿಸಿದ ಈ ಎಲ್ಲ ಪ್ರಕರಣಗಳನ್ನು ಸಿಬಿಐಗೆ ವಹಿಸಲಾಗಿತ್ತು.

ಪೊಲೀಸರ ಹದ್ದಿನ ಕಣ್ಣು: ದೇಶ ಸಂಪೂರ್ಣ ಶಾಂತ

ನವೆಂಬರ್ 10ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Latest Videos
Follow Us:
Download App:
  • android
  • ios