ಪೇಜಾವರ ಶ್ರೀ ಅಭಿನಂದಿಸಿದ ಮುಸ್ಲಿಂ ಯುವಕರು
ಜಿಲ್ಲಾ ಸೌಹಾರ್ದ ಸಮಿತಿಯ ಮುಸ್ಲಿಂ ಯುವ ಸದಸ್ಯರು ಶನಿವಾರ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ, ರಾಮಮಂದಿರದ ಪರವಾಗಿ ಬಂದಿರುವ ತೀರ್ಪಿನ ಹಿನ್ನೆಲೆಯಲ್ಲಿ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರನ್ನು ಅಭಿನಂದಿಸಿದ್ದಾರೆ.
ಉಡುಪಿ(ನ.10): ಜಿಲ್ಲಾ ಸೌಹಾರ್ದ ಸಮಿತಿಯ ಮುಸ್ಲಿಂ ಯುವ ಸದಸ್ಯರು ಶನಿವಾರ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ, ರಾಮಮಂದಿರದ ಪರವಾಗಿ ಬಂದಿರುವ ತೀರ್ಪಿನ ಹಿನ್ನೆಲೆಯಲ್ಲಿ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರನ್ನು ಅಭಿನಂದಿಸಿದ್ದಾರೆ.
ಸಮಿತಿಯ ಪ್ರಮುಖರಾದ ಕರಾಮತ್ ಆಲಿ, ಮೊಹಮ್ಮದ್ ಅರೀಫ್, ಅನ್ಸಾರ್ ಅಹಮ್ಮದ್, ಮನ್ಸೂರ್, ಅಹಮದ್ ಶ್ರೀಗಳನ್ನು ಅಭಿನಂದಿಸಿ ಆಶೀ ರ್ವಾದ ಪಡೆದರು. ನಂತರ ಮಾತನಾಡಿದ ಅನ್ಸಾರ್ ಅಹಮ್ಮದ್, ನಮಗೆ ತೀರ್ಪು ಮುಸ್ಲಿಂ ಸಮು ದಾಯದ ಪರವಾಗಿ ಬಂದಿಲ್ಲ ಎನ್ನುವ ಬೇಸರಕ್ಕಿಂತ ದೀರ್ಘಕಾಲದ ವಿವಾದವೊಂದು ಕೊನೆಗೊಂಡ ಸಂತಸ ಹೆಚ್ಚು ಇದೆ ಎಂದಿದ್ದಾರೆ.
ಅಯೋಧ್ಯೆಗೆ ಹೊರಟಿದ್ದ ನಮ್ಮನ್ನು ಬಂಧಿಸಿದ್ದರು: ಪೇಜಾವರ ಶ್ರೀ
7 ದಶಕಗಳ ಅಯೋಧ್ಯೆ ರಾಮ ಜನ್ಮ ಭೂಮಿ ವಿವಾದಕ್ಕೆ ಶನಿವಾರ ತೆರೆ ಬಿದ್ದಿದ್ದು, ಸುಪ್ರೀಂ ಇಂದು ಐತಿಹಾಸಿಕ ತೀರ್ಪು ಪ್ರಕಟಿಸಿದೆ. ವಿವಾದಿತ 2.77 ಎಕರೆ ಜಾಗವನ್ನು ರಾಮಲಲ್ಲಾಗೆ ವಹಿಸಿ ಸುಪ್ರೀಂ ತೀರ್ಪು ನೀಡಿದೆ. ಯಾರ ಭಾವನೆಗೂ ಧಕ್ಕೆಯಾಗದಂತೆ ಬಾಬರಿ ಮಸೀದಿಗೂ ಅಯೋಧ್ಯೆಯಲ್ಲೇ ಪ್ರತ್ಯೇಕ ಜಾಗವನ್ನು ಕಲ್ಪಿಸುವಂತೆ ಕೋರ್ಟ್ ಸರ್ಕಾರಕ್ಕೆ ಸೂಚಿಸಿದೆ.
ಅಯೋಧ್ಯೆ ತೀರ್ಪು: ಬಿಜೆಪಿಗೆ ಜೀವ ಕೊಟ್ಟಿದ್ದೇ ರಾಮಜನ್ಮಭೂಮಿ ಹೋರಾಟ