Asianet Suvarna News Asianet Suvarna News

ಚೆಕ್‌ ಬೌನ್ಸ್‌ ಆದ್ರೆ ಇನ್ನೊಂದು ಖಾತೆ ಹಣ ಕಟ್‌..!

ಹಾಲಿ ದೇಶದ ವಿವಿಧ ಕೋರ್ಟ್‌ಗಳಲ್ಲಿ 35 ಲಕ್ಷಕ್ಕೂ ಹೆಚ್ಚು ಚೆಕ್‌ ಬೌನ್ಸ್‌ ಪ್ರಕರಣಗಳಿವೆ. ಸಾಮಾನ್ಯ ನ್ಯಾಯಾಲಯಗಳಲ್ಲಿ ಇವುಗಳ ವಿಚಾರಣೆ ಸಾಧ್ಯವಾಗದೇ ಇರುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದ ಸುಪ್ರೀಂ

Another Account Money Debited if Check Bounces grg
Author
First Published Oct 10, 2022, 1:00 AM IST | Last Updated Oct 11, 2022, 9:40 AM IST

ನವದೆಹಲಿ(ಅ.10): ದೇಶಾದ್ಯಂತ ಆತಂಕಕಾರಿ ಪ್ರಮಾಣದಲ್ಲಿ ಹೆಚ್ಚುತ್ತಿರುವ ಚೆಕ್‌ ಬೌನ್ಸ್‌ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ, ಚೆಕ್‌ ನೀಡಿರುವ ವ್ಯಕ್ತಿಯ ಒಂದು ಬ್ಯಾಂಕ್‌ ಖಾತೆಯಲ್ಲಿ ಹಣ ಇಲ್ಲದೇ ಹೋದರೆ ಆತನ ಇನ್ನೊಂದು ಬ್ಯಾಂಕ್‌ ಖಾತೆಯಿಂದ ಹಣ ಕಡಿತಗೊಳಿಸುವುದು ಸೇರಿದಂತೆ ಹಲವು ಪ್ರಸ್ತಾವಗಳ ಜಾರಿಗೆ ಪರಿಶೀಲನೆ ನಡೆಸುತ್ತಿದೆ.

ಹಾಲಿ ದೇಶದ ವಿವಿಧ ಕೋರ್ಟ್‌ಗಳಲ್ಲಿ 35 ಲಕ್ಷಕ್ಕೂ ಹೆಚ್ಚು ಚೆಕ್‌ ಬೌನ್ಸ್‌ ಪ್ರಕರಣಗಳಿವೆ. ಸಾಮಾನ್ಯ ನ್ಯಾಯಾಲಯಗಳಲ್ಲಿ ಇವುಗಳ ವಿಚಾರಣೆ ಸಾಧ್ಯವಾಗದೇ ಇರುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದ ಸುಪ್ರೀಂಕೋರ್ಟ್‌, ಈ ಬಗ್ಗೆ ಏನು ಕ್ರಮ ಕೈಗೊಳ್ಳಬಹುದು ಎಂದು ಶಿಫಾರಸು ಮಾಡಲು ಸಮಿತಿಯೊಂದನ್ನು ರಚಿಸಿತ್ತು. ಈ ಪ್ರಕರಣದ ವಿಚಾರಣೆ ವೇಳೆ ಚೆಕ್‌ ಬೌನ್ಸ್‌ ಪ್ರಕರಣಗಳ ವಿಚಾರಣೆಗೆಂದೇ ಪ್ರತ್ಯೇಕ ಕೋರ್ಚ್‌ ಸ್ಥಾಪನೆ ಬಗ್ಗೆ ತಾತ್ವಿಕವಾಗಿ ಒಪ್ಪಿಗೆ ಸೂಚಿಸಿತ್ತು. ಅದರ ಬೆನ್ನಲ್ಲೇ ಕೇಂದ್ರ ಹಣಕಾಸು ಸಚಿವಾಲಯ ಇಂಥ ಪ್ರಕರಣಗಳ ನಿರ್ವಹಣೆ ಕುರಿತು ಸಲಹೆ ಪಡೆಯಲು ಉನ್ನತ ಮಟ್ಟದ ಸಭೆಯೊಂದನ್ನು ಆಯೋಜಿಸಿತ್ತು. ಅದರಲ್ಲಿ ಹಲವು ಮಹತ್ವದ ಸಲಹೆಗಳು ವ್ಯಕ್ತವಾಗಿವೆ.

Check Bounce: ನಟಿ ಜೀವಿತಾ ರಾಜಶೇಖರ್ ವಿರುದ್ಧ ಜಾಮೀನು ರಹಿತ ವಾರಂಟ್

ಸಮಿತಿ ನೀಡಿದ ಸಲಹೆಗಳು:

ಚೆಕ್‌ ನೀಡಿದ ವ್ಯಕ್ತಿಯ ಒಂದು ಬ್ಯಾಂಕ್‌ನಲ್ಲಿ ಹಣ ಇಲ್ಲದೇ, ಅದು ಬೌನ್ಸ್‌ ಆಗುವ ಪರಿಸ್ಥಿತಿ ಬಂದರೆ ಆಗ ಆತನದ್ದೇ ಇನ್ನೊಂದು ಬ್ಯಾಂಕ್‌ ಖಾತೆಯಿಂದ ಹಣ ಕಡಿತಗೊಳಿಸುವುದು. ಚೆಕ್‌ ಬೌನ್ಸ್‌ ಅನ್ನು ಸಾಲ ಮರುಪಾವತಿಗೆ ವಿಫಲ ಎಂದು ಪರಿಗಣಿಸುವುದು. ಈ ಮಾಹಿತಿಯನ್ನು ರೇಟಿಂಗ್‌ ಏಜೆನ್ಸಿಗೆ ರವಾನಿಸಿ ಅವರ ಕ್ರೆಡಿಟ್‌ ರೇಟಿಂಗ್‌ ಕಡಿಮೆಗೊಳಿಸಲು ಕ್ರಮ.

ಈ ಪ್ರಸ್ತಾವಗಳ ಬಗ್ಗೆ ಕಾನೂನು ಸಚಿವಾಲಯದ ಸಲಹೆ ಪಡೆದು ಮುಂದಿನ ಹೆಜ್ಜೆ ಇಡಲು ಹಣಕಾಸು ಸಚಿವಾಲಯ ನಿರ್ಧರಿಸಿದೆ. ಒಂದು ವೇಳೆ ಈ ಪ್ರಸ್ತಾವಗಳು ಕಾಯ್ದೆ ರೂಪ ಪಡೆದು ಜಾರಿಗೆ ಬಂದರೆ, ಖಾತೆಯಲ್ಲಿ ಹಣ ಇಲ್ಲದೇ ಇದ್ದರೂ ಚೆಕ್‌ ನೀಡಿ ವಂಚಿಸುವ ಪ್ರಕರಣಗಳಿಗೆ ಕಡಿವಾಣ ಬೀಳಲಿದೆ. ಜೊತೆಗೆ ಚೆಕ್‌ ಸ್ವೀಕರಿಸಿದ್ದವರು, ಪ್ರಕರಣದ ಕುರಿತು ಕೋರ್ಚ್‌ ಮೆಟ್ಟಿಲೇರದೇ ತಮ್ಮ ಹಣವನ್ನು ಪಡೆದುಕೊಳ್ಳುವ ಅವಕಾಶ ಲಭ್ಯವಾಗಲಿದೆ. ಉದ್ಯಮ ಸ್ನೇಹಿ ವಾತಾವರಣ ರಚನೆಗೆ ಮತ್ತಷ್ಟುನೆರವಾಗಲಿದೆ. ಉದ್ದೇಶಪೂರ್ವಕವಾಗಿ ವಂಚನೆ ಮಾಡುವವರ ಅಟಾಟೋಪಕ್ಕೆ ಕೊನೆ ಬೀಳಲಿದೆ.

2 ಪ್ರಮುಖ ಶಿಫಾರಸು

1. ಚೆಕ್‌ ನೀಡಿದ ವ್ಯಕ್ತಿಯ ಬ್ಯಾಂಕ್‌ ಖಾತೆಯಲ್ಲಿ ಹಣ ಇಲ್ಲದೇ ಅದು ಬೌನ್ಸ್‌ ಆಗುವ ಪರಿಸ್ಥಿತಿ ಬಂದರೆ ಆಗ ಆತನದ್ದೇ ಇನ್ನೊಂದು ಬ್ಯಾಂಕ್‌ ಖಾತೆಯಿಂದ ಹಣ ಕಡಿತಗೊಳಿಸಿ ಪಾವತಿಸುವುದು.
2. ಚೆಕ್‌ ಬೌನ್ಸ್‌ ಅನ್ನು ಸಾಲ ಮರುಪಾವತಿಗೆ ವಿಫಲ ಎಂದು ಪರಿಗಣಿಸುವುದು. ಈ ಮಾಹಿತಿಯನ್ನು ರೇಟಿಂಗ್‌ ಏಜೆನ್ಸಿಗೆ ರವಾನಿಸಿ ಅವರ ಕ್ರೆಡಿಟ್‌ ರೇಟಿಂಗ್‌ ಕಡಿಮೆಗೊಳಿಸಲು ಕ್ರಮ.
 

Latest Videos
Follow Us:
Download App:
  • android
  • ios