ಮಹಿಳೆಯ ಸೆಲ್ಫೀ ಹುಚ್ಚು| ಸೆಲ್ಫೀ ಕ್ಲಿಕ್ಕಿಸಲು ಹೋಗಿ ಕೂದಲೆಳೆ ಅಂತರದಲ್ಲಿ ಪಾರು| ಮೇಕೆ ಕೋಪ, ಮಹಿಳೆಗೆ ಹೆಲ್ಮೆಟ್ ಧರಿಸಲು ಸಲಹೆ
ನವದೆದೆಹಲಿ(ಮಾ.13): ಇಂದು ಸೆಲ್ಫೀ ಕ್ಲಿಕ್ಕಿಸೋದು ಒಂದು ಬಗೆಯ ಟ್ರೆಂಡ್ ಆಗಿ ಮಾರ್ಪಾಡಾಗಿದೆ. ಎಲ್ನೋಡಿದ್ರೂ ಸೆಲ್ಫೀ ದುನಿಯಾ, ಮಕ್ಕಳಿಂದ ಹಿಡಿದು ಹಿರಿಯರವರೆಗೆ ಸೆಲ್ಫೀ ಹುಚ್ಚು ಯಾರನ್ನೂ ಬಿಟ್ಟಿಲ್ಲ. ಆದರೆ ಅನೇಕ ಬಾರಿ ಈ ಸೆಲ್ಫೀ ಜೀವಕ್ಕೆ ಮಾರಕವಾಗುತ್ತದೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದು ವೈರಲ್ ಆಗಯತ್ತಿದ್ದು, ಮಹಿಳೆಗಾದ ಪರಿಸ್ಥಿತಿ ಕಂಡು ಅನೇಕ ಮಂದಿ ನಕ್ಕಿದ್ದರೆ, ಇನ್ನು ಕೆಲವರು ಮರುಕ ಪಟ್ಟುಕೊಂಡಿದ್ದಾರೆ.
ಇನ್ನು ವೈರಲ್ ಆದ ಈ ವಿಡಿಯೋದಲ್ಲಿ ಮಹಿಳೆ ಕಾಡು ಪ್ರದೇಶದಲ್ಲಿ ಸೆಲ್ಫೀ ತೆಗೆದುಕೊಳ್ಳಲು ಸಜ್ಜಾಗಿದ್ದಾಳೆ. ಇನ್ನು ಇಲ್ಲಿ ಸ್ವಲ್ಪ ದೂರದಲ್ಲಿ ಮೇಕೆಯೊಂದನ್ನು ಹಗ್ಗಕ್ಕೆ ಕಟ್ಟಿರುವುದನ್ನೂ ನೋಡಬಹುದಾಗಿದೆ. ಮಹಿಳೆ ಆ ಮೇಕೆಯನ್ನು ಕಂಡು ಚಿತ್ರ ವಿಚಿತ್ರವಾಗಿ ಮುಖ ತಿರುಗಿಸಲಾರಂಭಿಸುತ್ತಾಳೆ. ಇದರಿಂದ ಕೆರಳಿದ ಮೇಕೆ ಹಾಗೋ ಹೀಗೋ ಮಾಡಿ ಹಗ್ಗವನ್ನು ಕಡಿದುಕೊಂಡು ಮಹಿಳೆಯತ್ತ ಬರುತ್ತದೆ. ಹೀಗಿದ್ದರೂ ಮಹಿಳೆ ಮಾತ್ರ ಇದ್ಯಾವುದರ ಪರಿವೆಯೇ ಇಲ್ಲದೇ ಸೆಲ್ಪೀ ತೆಗೆಯುವಲ್ಲಿ ಬ್ಯೂಸಿಯಾಗುತ್ತಾಳೆ.
ಆದರೆ ಅತ್ತ ಓಡಿ ಬಂದ ಮೇಕೆ ಮಾತ್ರ ಬಬಹಳ ಜೋರಾಗಿ ಮಹಿಳೆಗೆ ತನ್ನ ಕೊಂಬಿಂದ ಗುದ್ದುತ್ತದೆ. ಹೀಗಿದ್ದರೂ ಈ ಘಟನೆ ನಡೆದಿದ್ದೆಲ್ಲಿ ಎಂಬ ಮಾಹಿತಿ ಲಭ್ಯವಾಗಿಲ್ಲ.
