ಗುಂಡಿನ ಮತ್ತಲ್ಲಿ ಬಾಂಬ್ ಅನ್ನೇ ಕಚ್ಚಿದ ಭೂಪ: ಬಾಯಲ್ಲೇ ಕಂಟ್ರಿ ಬಾಂಬ್ ಸ್ಫೋಟಗೊಂಡು ಸಾವು
ಜೀವನದಲ್ಲಿ ಖಿನ್ನತೆಗೆ ಒಳಗಾಗಿದ್ದ ವ್ಯಕ್ತಿ ಬಾಯಲ್ಲಿ ಕಂಟ್ರಿ ಬಾಂಬ್ ಕಚ್ಚಿದ್ದಾನೆ. ಬಳಿಕ, ಅದು ಬಾಯಲ್ಲೇ ಸ್ಫೋಟಗೊಂಡು ವ್ಯಕ್ತಿ ಮೃತಪಟ್ಟ ಆಘಾತಕಾರಿ ಘಟನೆ ಆಂಧ್ರ ಪ್ರದೇಶದಲ್ಲಿ ನಡೆದಿದೆ.

ತಿರುಪತಿ (ಅಕ್ಟೋಬರ್ 25, 2023): ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ಸೋಮವಾರ ತಡರಾತ್ರಿ ವ್ಯಕ್ತಿಯೊಬ್ಬರ ಬಾಯಲ್ಲಿ ಬಾಂಬ್ ಸ್ಫೋಟಗೊಂಡು ಮೃತಪಟ್ಟಿದ್ದಾರೆ. ಆ ವ್ಯಕ್ತಿ ಕುಡಿದ ಅಮಲೇರಿದ ಸ್ಥಿತಿಯಲ್ಲಿದ್ದಾಗ ಈ ಘಟನೆ ಸಂಭವಿಸಿದೆ ಎಂದು ವರದಿಯಾಗಿದೆ.
ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ಸೋಮವಾರ ತಡರಾತ್ರಿ 35 ವರ್ಷದ ವ್ಯಕ್ತಿಯೊಬ್ಬರ ಬಾಯಲ್ಲಿ ಕಂಟ್ರಿ ಬಾಂಬ್ ಸ್ಫೋಟಗೊಂಡಿದ್ದು, ಇದರಿಂದ ಅವರು ಸಾವಿಗೀಡಾಗಿರುವ ಅವಘಡ ಸಂಭವಿಸಿದೆ. ಬಂಗಾರುಪಾಳ್ಯಂ ಮಂಡಲದ ಗದ್ದಂವಾರಿಪಲ್ಲಿ ಗ್ರಾಮದಲ್ಲಿ ಈ ವಿಲಕ್ಷಣ ಘಟನೆ ವರದಿಯಾಗಿದೆ.
ಇದನ್ನು ಓದಿ: ದೆಹಲಿಯಲ್ಲಿ ಸ್ವಿಜರ್ಲೆಂಡ್ ಮಹಿಳೆ ಹತ್ಯೆ: ಕೈಕಾಲು ಕಟ್ಟಿ, ಪ್ಲಾಸ್ಟಿಕ್ ಕವರ್‌ನಲ್ಲಿ ಡೆಡ್‌ಬಾಡಿ ಸುತ್ತಿದ ಪಾಗಲ್ ಪ್ರೇಮಿ!
ಮೃತ ವ್ಯಕ್ತಿಯನ್ನು ಗದ್ದಂವಾರಿಪಲ್ಲಿ ನಿವಾಸಿ ಎಂ.ಚಿರಂಜೀವಿ ಎಂದು ಗುರುತಿಸಲಾಗಿದ್ದು, ಈ ಬಗ್ಗೆ ಬಂಗಾರುಪಾಳ್ಯಂ ಸಿಐ ನಾಗರಾಜು ರಾವ್ ಮಾಹಿತಿ ನೀಡಿದ್ದಾರೆ. ಹೆಂಡತಿಯ ಜತೆ ಜಗಳವಾಡಿದ ಬಳಿಕ ಆಕೆ ಮನೆ ಬಿಟ್ಟು ಹೋಗಿದ್ದರು. ನಂತರ, ಆತ ಜೀವನದಲ್ಲಿ ಸಾಕಷ್ಟು ಖಿನ್ನತೆಗೆ ಒಳಗಾಗಿದ್ದ ಮತ್ತು ಕುಡಿತದ ಚಟಕ್ಕೆ ಒಳಗಾಗಿದ್ದರು ಎಂದೂ ಪೊಲೀಸರು ತಿಳಿಸಿದ್ದಾರೆ.
ಚಿರಂಜೀವಿ ಕುಡಿದು ಅಮಲೇರಿದ ಸ್ಥಿತಿಯಲ್ಲಿದ್ದಾಗ ಕಮಟ್ರಿ ಬಾಂಬ್ ಅಂಚನ್ನು ಕಚ್ಚದ್ದಾರೆ. ಈ ಹಿನ್ನೆಲೆ ಅದು ಆತನ ಬಾಯಿಯಲ್ಲೇ ಸ್ಫೋಟಗೊಂಡಿದ್ದು, ಮತ್ತು ಘಟನೆಯಲ್ಲಿ ಆತನ ಮುಖ ಸಂಪೂರ್ಣವಾಗಿ ಹಾನಿಗೊಳಗಾಯಿತು ಎಂದೂ ಪೊಲೀಸರು ಪ್ರಾಥಮಿಕ ತನಿಖೆಯ ಬಳಿಕ ತಿಳಿಸಿದ್ದಾರೆ. ಅಲ್ಲದೆ, ನಿಖರವಾಗಿ ಘಟನೆಯ ಸಂಪೂರ್ಣ ತನಿಖೆ ನಡೆಸಲಾಗ್ತಿದೆ ಎಂದೂ ಮಾಹಿತಿ ನೀಡಿದ್ದಾರೆ.
ಇದನ್ನು ಓದಿ: ನವರಾತ್ರಿ ಉಪವಾಸ ಮಾಡ್ತಿದ್ದ ಅಣ್ಣ, ಅಕ್ಕನಿಂದ 15 ವರ್ಷದ ಸಹೋದರಿಯ ಬೆತ್ತಲೆಗೊಳಿಸಿ ಬರ್ಬರ ಹತ್ಯೆ!
ಘಟನೆಯ ಬಳಿಕ ನೆರೆಹೊರೆಯರು ಮತ್ತು ಸ್ಥಳೀಯ ಪೊಲೀಸರು ಕೂಡಲೇ ಬಂಗಾರುಪಾಳ್ಯದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರೂ, ಚಿರಂಜೀವಿ ಆ ವೇಳೆಗೆ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಈ ಸಂಬಂಧ ಬಂಗಾರುಪಾಳ್ಯಂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ಇನ್ನೊಂದೆಡೆ, ಚಿರಂಜೀವಿ ಮೊದಲು ಕಂಟ್ರಿ ಬಾಂಬ್ ಅನ್ನು ಹೇಗೆ ಹೊಂದಿದ್ದರು ಮತ್ತು ಏಕೆ ಎಂದು ಪತ್ತೆ ಹಚ್ಚಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ ಎಂದೂ ತಿಳಿದುಬಂದಿದೆ.
ಇದನ್ನೂ ಓದಿ: ಡಿಜಿಟಲ್ ಬ್ಯಾಂಕಿಂಗ್ ವಂಚನೆಗಳ ಬಗ್ಗೆ ಎಚ್ಚರಿಕೆ ಇರಲಿ: ನಿಮ್ಮ ಹಣ ರಕ್ಷಿಸಿಕೊಳ್ಳಲು ಹೀಗೆ ಮೋಸ ಹೋಗ್ಬೇಡಿ..!