Asianet Suvarna News Asianet Suvarna News

ಉಗ್ರರು ನುಸುಳಿರುವ ಬಗ್ಗೆ ಮಾಹಿತಿ, ದಸರಾ ಮೇಲೆಯೂ ಟೆರರಿಸ್ಟ್‌ಗಳ ಕರಿನೆರಳು? ತುರ್ತು ಭದ್ರತೆ ಹೆಚ್ಚಳ

ನಾಡಹಬ್ಬ ದಸರಾ ಮೇಲೆಯೂ ಉಗ್ರರ ಕರಿನೆರಳು ಬಿತ್ತಾ ಎಂಬ ಪ್ರಶ್ನೆ ಎದುರಾಗಿದೆ. ರಾಜ್ಯ ಪೊಲೀಸ್‌ ಅಲರ್ಟ್ ಮೈಸೂರಿನಲ್ಲಿ ಆಗಿದ್ದು,  70 ಜನ ಉಗ್ರರು ದೇಶದ ಒಳಗೆ ನುಸುಳಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.  

high security in Mysuru dasara after terrorists alert from central gow
Author
First Published Oct 22, 2023, 9:55 AM IST

ಮೈಸೂರು (ಅ.22): ನಾಡಹಬ್ಬ ದಸರಾ ಮೇಲೆಯೂ ಉಗ್ರರ ಕರಿನೆರಳು ಬಿತ್ತಾ ಎಂಬ ಪ್ರಶ್ನೆ ಎದುರಾಗಿದೆ.  ಒಂದೆಡೆ ಕ್ರಿಕೆಟ್‌ ಹಬ್ಬ ನಡೆಯುತ್ತಿದೆ. ಇನ್ನೊಂದೆಡೆ ದಸರಾ ಹಬ್ಬದ ಸಂಭ್ರಮವಿದೆ. ಈ ನಡುವೆ 70 ಜನ ಉಗ್ರರು ದೇಶದ ಒಳಗೆ ನುಸುಳಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ನಕಲಿ ಪಾಸ್‌ ಪೋರ್ಟ್ ಕೊಟ್ಟಿರುವ ಬಗ್ಗೆ ಕೇಂದ್ರ ಐಬಿ ತಂಡಕ್ಕೆ ಮಾಹಿತಿ ಲಭ್ಯವಾಗಿದೆ.

ಕೇಂದ್ರ ಗುಪ್ತಚರ ಇಲಾಖೆಯಿಂದ ಆಲರ್ಟ್ ಇರಲು ರಾಜ್ಯ ಪೊಲೀಸರಿಗೆ ಸೂಚನೆ ಬಂದ ಬೆನ್ನಲ್ಲೇ ರಾಜ್ಯದಲ್ಲಿ ಪೊಲೀಸ್‌ ಇಲಾಖೆ ಹೈ ಅಲರ್ಟ್ ಆಗಿದೆ. ಜೊತೆಗೆ   ಡಿಜಿ ಸೂಚನೆ ಬೆನ್ನಲ್ಲೇ ಅಲರ್ಟ್‌ ಮೈಸೂರು ಪೊಲೀಸರು ಕೂಡ ಅಲರ್ಟ್ ಆಗಿದ್ದಾರೆ. ಮೈಸೂರಿನ ಎಲ್ಲಾ ಕಡೆ ಲಾಡ್ಜ್‌, ಹೋಟೆಲ್, ಹೋಂ ಸ್ಟೇ ಗಳ ಮೇಲೆ ಹದ್ದಿನ ಕಣ್ಣಿಡಲಾಗಿದೆ. ರೂಂ ಕೇಳಿ ಬರುವವರು ಹೊರರಾಜ್ಯದವರು ಎಂದು ತಿಳಿದ ತಕ್ಷಣ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಬೇಕು. ಆಧಾರ್, ವೋಟರ್ ಐಡಿ ಹಾಗೂ ಇತರೇ ದಾಖಲೆಗಳು ಪಡೆಯಬೇಕು. ಕೂಡಲೇ ಪೊಲೀಸರಿಗೆ ತಿಳಿಸಬೇಕು ಎಂದು ಸಂಬಂಧಿಸಿದವರಿಗೆ ಕಟ್ಟುನಿಟ್ಟಿನ ಸೂಚನೆ ಹೊರಡಿಸಲಾಗಿದೆ.

ನಾಡಹಬ್ಬ ಮೈಸೂರು ದಸರಾ : ಎಂಜಿಎಸ್‌ ವಿಂಟೇಜ್, ಕ್ಲಾಸಿಕ್ ಕಾರ್

ಮೈಸೂರಿನಲ್ಲಿ ತುರ್ತಾಗಿ ಭದ್ರತೆಯನ್ನು ಹೆಚ್ಚಿಸಿ ರಾಜ್ಯ ಡಿಜಿ-ಐಜಿಪಿ ಅಲೋಕ್ ಮೋಹನ್ ಸೂಚನೆ ನೀಡಿದ್ದಾರೆ.  ದಸರಾ ಹಬ್ಬಕ್ಕೆ ಈ ಬಾರಿ 3500  ಹೆಚ್ಚು ಪೊಲೀಸರನ್ನು ಭದ್ರತೆಗೆ ನಿಯೋಜನೆಯಾಗಿದೆ. ರಾಜ್ಯದ ಎಲ್ಲಾ ವಲಯ ಹಾಗೂ ಸಿಐಡಿ, ಐಎಸ್‌ ಡಿ ಯಿಂದಲೂ ಭದ್ರತೆಗೆ ನಿಯೋಜನೆಯಾಗಿದೆ. 

ಪ್ರತಿ ಬಾರಿ ದಸರಾಗೆ 1700 ರಿಂದ 2000 ಪೊಲೀಸರನ್ನ ನಿಯೋಜನೆ ಮಾಡಲಾಗುತ್ತಿತ್ತು.  ತುರ್ತಾಗಿ ಇಂದು ಬೆಳಿಗ್ಗೆ 9 ಗಂಟೆಗೆ ಮತ್ತೆ 1568 ಪೊಲೀಸರನ್ನು ಭದ್ರತೆಗೆ ನಿಯೋಜನೆ ಜೊತೆಗೆ 40 CAR ತುಕಡಿಗಳು ಹಾಗೂ 30 KSRP ತುಕಡಿಗಳ ನಿಯೋಜನೆ ಮಾಡಲಾಗಿದೆ. ಜೊತೆಗೆ ಶ್ರೀರಂಗಪಟ್ಟಣ, ಕೆ.ಆರ್.ಎಸ್,  ಹಾಗೂ ಮೈಸೂರು ಪೊಲೀಸರಿಗೆ ಆಲರ್ಟ್ ಇರುವಂತೆ ಕಟ್ಟು ನಿಟ್ಟಿನ ಸೂಚನೆ ನೀಡಲಾಗಿದೆ.

ಯುವ ದಸರಾ ಕಾರ್ಯಕ್ರಮ : ರಂಗು ರಂಗಿನ ಸಂಭ್ರಮ 

ಶ್ವಾನ ಪ್ರದರ್ಶನ ಸ್ಥಳ ಬದಲಾವಣೆ
ನಾಡ ಹಬ್ಬ ದಸರಾ ಮಹೋತ್ಸವ 2023ದ ರೈತ ದಸರಾದಲ್ಲಿ ಶ್ವಾನ ಪ್ರದರ್ಶನ ನಡೆಯಲಿದೆ. ರೈತ ದಸರಾ ಅಂಗವಾಗಿ ಪಶು ಇಲಾಖೆಯಿಂದ ಶ್ವಾನ ಪ್ರದರ್ಶನ ನಡೆಯಲಿದೆ. ಮೈಸೂರಿನ ಜೆ.ಕೆ.ಮೈದಾನದಲ್ಲಿ  ಈ ಕಾರ್ಯಕ್ರಮ ನಡೆಯಲಿದೆ. ಮೊದಲಿಗೆ ಮೈಸೂರಿನ ಪೆವಿಲಿಯನ್ ಮೈದಾನದ ಹಾಕಿ ಗ್ರೌಂಡ್ ನಲ್ಲಿ ಆಯೋಜನೆ ಮಾಡಲಾಗಿತ್ತು. ಇದೀಗ ಕಾರಣಾಂತರಗಳಿಂದ ಸ್ಥಳ ಬದಲಾವಣೆ  ಮಾಡಲಾಗಿದ್ದು, ಜೆ.ಕೆ.ಮೈದಾನದಲ್ಲಿ ಆಯೋಜನೆ ಮಾಡಲಾಗಿದೆ ಎಂದು ಪಶು ಇಲಾಖೆ  ಮಾಹಿತಿ ನೀಡಿದೆ.

Follow Us:
Download App:
  • android
  • ios