Asianet Suvarna News Asianet Suvarna News

AP Former CM K Rosaiah : ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕೆ ರೋಸಯ್ಯ ನಿಧನ

  •  ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕೆ ರೋಸಯ್ಯ (88) ಇಂದು ಬೆಳಗ್ಗೆ  ನಿಧನ
  •  ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ರೋಸಯ್ಯ
  •  2014 ರ ಜೂನ್ 28 ರಿಂದ ಅಗಸ್ಟ್ 31ರವರೆಗೆ ಅಲ್ಪಾಧಿಯಲ್ಲಿ ಕರ್ನಾಟಕದ ರಾಜ್ಯಪಾಲರಾಗಿಯೂ ಸೇವೆ
Andhra Pradesh Former CM K Rosaiah passes Away snr
Author
Bengaluru, First Published Dec 4, 2021, 11:50 AM IST

ಹೈದರಾಬಾದ್ (ಡಿ.04): ಆಂಧ್ರ ಪ್ರದೇಶದ (Andhra pradesh ) ಮಾಜಿ ಮುಖ್ಯಮಂತ್ರಿ ಕೆ ರೋಸಯ್ಯ (88) (Former CM K Rosiah) ಇಂದು ಬೆಳಗ್ಗೆ ವಯೋ ಸಹಜ ಅನಾರೋಗ್ಯದಿಂದ ನಿಧನರಾದರು (Passes Away). ಕೆಲ ದಿನಗಳಿಂದ ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ರೋಸಯ್ಯ ಅವರನ್ನು  ಹೈದರಾಬಾದಿನ (Hyderabad) ಖಾಸಗಿ ಆಸ್ಪತ್ರೆಗೆ (Private Hospital) ದಾಖಲಿಸಿ ಚಿಕಿತ್ಸೆ ನೀಡಲಾಗುತಿತ್ತು. ಆದರೆ ಚಿಕಿತ್ಸೆ  ಫಲಕಾರಿಯಾದರೆ ಇಂದು ಕೊನೆಯುಸಿರೆಳೆದಿದ್ದಾರೆ.  ಕೆ. ರೋಸಯ್ಯ ಅವರು 2014 ರ ಜೂನ್ 28 ರಿಂದ ಅಗಸ್ಟ್ 31ರವರೆಗೆ ಅಲ್ಪಾಧಿಯಲ್ಲಿ ಕರ್ನಾಟಕದ (Karnataka ) ರಾಜ್ಯಪಾಲರಾಗಿಯೂ (Governor)  ಸೇವೆ ಸಲ್ಲಿಸಿದ್ದರು.  

 2009 - 10ರಲ್ಲಿ ಆಂಧ್ರ ಪ್ರದೇಶದ  ಮುಖ್ಯಮಂತ್ರಿಯಾಗಿ (Andhra Pradesh CM) ಕಾರ್ಯ ನಿರ್ವಹಿಸಿದ್ದರು. ಅಲ್ಲದೇ ತಮಿಳುನಾಡು (Tamilnadu) ರಾಜ್ಯದಲ್ಲಿಯೂ (Governor)  ರಾಜ್ಯಪಾಲರಾಗಿದ್ದ ಅವರು 2011 ರಿಂದ 16ರವರೆಗೆ ದೀರ್ಘ ಅವಧಿ ವರೆಗೆ ಕಾರ್ಯ ನಿರ್ವಹಣೆ ಮಾಡಿದ್ದರು.   ತಮಿಳುನಾಡು ರಾಜ್ಯಪಾಲ ಹುದ್ದೆ  ಜೊತೆಗೆ ಹೆಚ್ಚುವರಿಯಾಗಿ ಕರ್ನಾಟಕದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು. 

ರಾಜಕೀಯ ಜೀವನ : ರೋಸಯ್ಯ  ಸ್ವತಂತ್ರ  ಪಕ್ಷದ ಮೂಲಕ ತಮ್ಮ ರಾಜಕೀಯ (Politics) ಜೀವನವನ್ನು ಅರಂಭಿಸಿ   ಹೋರಾಟಗಾರ ಎನ್‌.ಜಿ ರಂಗ (NG Ranga) ಅವರೊಂದಿಗೆ ಕೈ ಜೋಡಿಸಿದ್ದರು. 1968 ರಲ್ಲಿಮೊದಲ ಬಾರಿ  ಎಂಎಲ್‌ಸಿ (MLC ) ಆಗಿ ಆಯ್ಕೆಯಾದ ಅವರು, 1974, 1980,2009ರಲ್ಲಿಯೂ  ಎಂಎಲ್‌ಸಿ ಯಾಗಿ ಕಾರ್ಯ ನಿರ್ವಹಿಸಿದರು.  1989ರಲ್ಲಿ ಎಂಎಲ್‌ಎ ಆಗಿ ಚುನಾಯಿತರಾದರು. ಅದಾದ ಬಳಿಕ 2004ರಲ್ಲಿ ಚಿರಾಲಾ ಕ್ಷೇತ್ರದಿಂದ ಶಾಸಕರಾಗಿ (MLA) ಗೆದ್ದು ಬಂದರು.  1998 ರಲ್ಲಿ ನರಸರಾವ್ ಪೇಟೆಯ  ಸಂಸದರಾಗಿ (MP) ಆಯ್ಕೆಯಾದರು . 2011 ರಲ್ಲಿ  ತಮಿಳುನಾಡು ರಾಜ್ಯಪಾಲರಾಗಿ ಆಯ್ಕೆಯಾಗಿ 20116ರವರೆಗೆ ದೀರ್ಘಾವಧಿವರೆಗೆ ಕಾರ್ಯ ನಿರ್ವಹಿಸಿದರು.

 

Andhra Pradesh Former CM K Rosaiah passes Away snr

Andhra Pradesh Former CM K Rosaiah passes Away snr

Andhra Pradesh Former CM K Rosaiah passes Away snr

ಅಲ್ಲದೇ  ಸಾರಿಗೆ ಸಚಿವರಾಗಿ,  ಹಣಕಾಸು ಸಚಿವರಾಗಿ (Minister ), ಆರೋಗ್ಯ ಸಚಿವರಾಗಿ ಕಾನೂನು ಸಚಿವರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಅಲ್ಲದೇ 1994 ರಿಂದ 1996ರವರೆಗೆ  ಆಂಧ್ರ ಪ್ರದೇಶ ಕಾಂಗ್ರೆಸ್ (Congress) ಕಮಿಟಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.  ಒಟ್ಟು  16 ಬಾರಿ ರಾಜ್ಯ ಬಜೆಟ್ (State Budget) ಮಂಡನೆ ಮಾಡಿ ದಾಖಲೆ ಬರೆದಿದ್ದಾರೆ. ರಾಜಶೇಖರ್ ರೆಡ್ಡಿ(rajashekar Reddy) ನಿಧನದ ಬಳಿಕ ಆಂಧ್ರ ಪ್ರದೇಶದ ಮುಖ್ಯ ಮಂತ್ರಿಯಾಗಿದ್ದ ಅವರು 2010ರಲ್ಲಿ ಮುಖ್ಯಮಂತ್ರಿ ಸ್ಥಾನದಿಂದ ಇಳಿದರು. 

 

ಜೀವನ : 1933 ರಲ್ಲಿ ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆ ವೆಮೂರಿನ ತೆನಾಲಯಲ್ಲಿ ಜನಿಸಿದರು.  ವಿದ್ಯಾರ್ಥಿ ಜೀವನದಲ್ಲಿ (student Life)  ನಾಯಕರಾಗಿದ್ದ ಅವರು  ಆಂಧ್ರ ಪ್ರದೇಶ ವಿವಿಯಲ್ಲಿ ವಾಣಿಜ್ಯ ವಿಷಯದಲ್ಲಿ ಪದವಿ ಪಡೆದಿದ್ದರು. 1950ರಲ್ಲಿ ಶಿವಾಲಕ್ಷ್ಮೀ ಅವರೊಂದಿಗೆ ವಿವಾಹವಾಗಿದ್ದು  ಮೂವರು ಗಂಡು ಹಾಗೂ ಓರ್ವ ಹೆಣ್ಣುಮಗಳಿದ್ದಾರೆ. 

 

  • ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕೆ ರೋಸಯ್ಯ ನಿಧನ
  •  ವಯೋ ಸಹಜ ಅನಾರೋಗ್ಯದಿಂದ ನಿಧನ
  • ಕೆಲ ದಿನಗಳಿಂದ ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ರೋಸಯ್ಯ
  • ಹೈದರಾಬಾದಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತಿತ್ತು
  • ಕೆ. ರೋಸಯ್ಯ ಅವರು 2014 ರ ಜೂನ್ 28 ರಿಂದ ಅಗಸ್ಟ್ 31ರವರೆಗೆ ಅಲ್ಪಾಧಿಯಲ್ಲಿ ಕರ್ನಾಟಕದ ರಾಜ್ಯಪಾಲರಾಗಿಯೂ ಸೇವೆ
  •  2009 - 10ರಲ್ಲಿ ಆಂಧ್ರ ಪ್ರದೇಶದ ಮುಖ್ಯಮಂತ್ರಿಯಾಗಿ ಕಾರ್ಯ 
  • ತಮಿಳುನಾಡು ರಾಜ್ಯದಲ್ಲಿಯೂ  ರಾಜ್ಯಪಾಲರಾಗಿದ್ದ ಅವರು 2011 ರಿಂದ 16ರವರೆಗೆ ದೀರ್ಘ ಅವಧಿ ವರೆಗೆ ಕಾರ್ಯ ನಿರ್ವಹಣೆ
Follow Us:
Download App:
  • android
  • ios