MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • State
  • Temple Run: ಕೊಲ್ಲೂರು, ಮುರ್ಡೇಶ್ವರದಲ್ಲಿ ದೇವರ ದರ್ಶನ ಪಡೆದ ರಾಜ್ಯಪಾಲ ಗೆಹ್ಲೋಟ್‌

Temple Run: ಕೊಲ್ಲೂರು, ಮುರ್ಡೇಶ್ವರದಲ್ಲಿ ದೇವರ ದರ್ಶನ ಪಡೆದ ರಾಜ್ಯಪಾಲ ಗೆಹ್ಲೋಟ್‌

ಕಾರವಾರ/ಉಡುಪಿ(ಡಿ.04):  ಕರ್ನಾಟಕದ(Karnataka) ರಾಜ್ಯಪಾಲ ಥಾವರಚಂದ್‌ ಗೆಹ್ಲೋಟ್‌(Thaawarchand Gehlot) ಅವರು ಶುಕ್ರವಾರ ಬೆಳಗ್ಗೆ ಕುಟುಂಬ ಸಮೇತರಾಗಿ ಮುರ್ಡೇಶ್ವರಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದಾರೆ. 

1 Min read
Author : Kannadaprabha News | Asianet News
| Updated : Dec 04 2021, 09:49 AM IST
Share this Photo Gallery
  • FB
  • TW
  • Linkdin
  • Whatsapp
18

ಬೆಳಗ್ಗೆ 11.30ರ ಸುಮಾರಿಗೆ ಕೊಲ್ಲೂರಿನಿಂದ(Kolluru) ಆಗಮಿಸಿದ ರಾಜ್ಯಪಾಲರನ್ನು(Governor) ದೇವಸ್ಥಾನದ ವ್ಯವಸ್ಥಾಪಕ ಮಂಜುನಾಥ ಶೆಟ್ಟಿ, ಆರ್‌ಎನ್‌ಎಸ್‌ ಟ್ರಸ್ಟ್‌ ಪರವಾಗಿ ನಾಗರಾಜ ಶೆಟ್ಟಿ ಬರಮಾಡಿಕೊಂಡರು. ದೇವಸ್ಥಾನದ ಅರ್ಚಕ ವೇ.ಮೂ. ಜಯರಾಮ ಅಡಿಗಳ್‌ ಅವರು ದೇವರಿಗೆ(God) ಪೂಜೆ(Pooje) ಸಲ್ಲಿಸಿ ಪ್ರಸಾದ ವಿತರಿಸಿದರು. 

28

ಇದೇ ಸಂದರ್ಭದಲ್ಲಿ ದೇವಾಲಯ(Temple) ವತಿಯಿಂದ ಪ್ರಸಾದದ ರೂಪದಲ್ಲಿ ದೇವರ ಎದುರಿನಲ್ಲಿ ಶಾಲು ಹೊದಿಸಿ ರಾಜ್ಯಪಾಲರನ್ನು ಗೌರವಿಸಲಾಯಿತು. ಆನಂತರ ಅವರು ದೇವಸ್ಥಾನದ ಪ್ರಾಂಗಣದಲ್ಲಿ ತಮಗಾಗಿ ಇಡಲಾಗಿದ್ದ ಆಸನದಲ್ಲಿ ಕುಳಿತು ಸಂದರ್ಶಕರ ಪುಸ್ತಕದಲ್ಲಿ(Visitor's Book) ತಮ್ಮ ಸಂದೇಶವನ್ನು ಬರೆದರು.

38

ರಾಜ್ಯಪಾಲರು ದೇವಾಲಯದ ಪ್ರಾಂಗಣ, ಬೃಹತ್‌ ಶಿವನ ಮೂರ್ತಿಯನ್ನು(statue of Lord Shiva) ವೀಕ್ಷಿಸಿದ್ದಲ್ಲದೇ, ಬೃಹತ್‌ ರಾಜಗೋಪುರದ 21ನೇ ಮಹಡಿಗೆ ಲಿಫ್ಟ್‌ ಮೂಲಕ ತೆರಳಿ ಅಲ್ಲಿಂದಲೇ ದೇವಾಲಯದ ಹಿಂದುಗಡೆ ಇರುವ ಶಿವನ ಮೂರ್ತಿ, ಅರಬ್ಬೀ ಸಮುದ್ರದ(Arabian Sea) ಸೌಂದರ್ಯ ವೀಕ್ಷಿಸಿದರು. ಬಳಿಕ ಮುರ್ಡೇಶ್ವರದ(Murdeshwar) ಆರ್‌ಎನ್‌ಎಸ್‌ ರೆಸಿಡೆನ್ಸಿಯಲ್ಲಿ ಸ್ವಲ್ಪ ಕಾಲ ವಿಶ್ರಾಂತಿ ಪಡೆದು, ಆನಂತರ ಗೋಕರ್ಣಕ್ಕೆ ತೆರಳಿದರು.

48

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌, ಎಸ್‌.ಪಿ. ಸುಮನ್‌ ಪನ್ನೇಕರ್‌, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಿಯಾಂಗಾ, ಡಿವೈಎಸ್‌ಪಿ ಕೆ.ಯು. ಬೆಳ್ಳಿಯಪ್ಪ, ಸಹಾಯಕ ಆಯುಕ್ತೆ ಮಮತಾದೇವಿ ಜಿ.ಎಸ್‌., ತಹಸೀಲ್ದಾರ್‌ ಎಸ್‌. ರವಿಚಂದ್ರ, ದೇವಸ್ಥಾನದ ಅರ್ಚಕರು, ಸಿಬ್ಬಂದಿ ಉಪಸ್ಥಿತರಿದ್ದರು.

58

ರಾಜ್ಯಪಾಲರು ಆಗಮಿಸಿದ ಹಿನ್ನೆಲೆಯಲ್ಲಿ ಮುರ್ಡೇಶ್ವರ ದೇವಸ್ಥಾನಕ್ಕೆ ಭಕ್ತರನ್ನು(Devotees) ನಿರ್ಬಂಧಿಸಲಾಗಿದ್ದು, ರಸ್ತೆಯಲ್ಲಿ ಕೂಡಾ ವಾಹನ ಸಂಚಾರಕ್ಕೆ ಅವಕಾಶ ಇರಲಿಲ್ಲ. ಅಲ್ಲಲ್ಲಿ ಜನರು ರಸ್ತೆಗಿಳಿಯದಂತೆ ಪೊಲೀಸರು(Police) ಕಟ್ಟೆಚ್ಚರ ವಹಿಸಿದ್ದರೆ, ದೇವಸ್ಥಾನದ ಸುತ್ತಮುತ್ತ ಕಮಾಂಡೋಗಳು ಕಾವಲು ಕಾಯುತ್ತಿದ್ದರು. 

68

ಮುರ್ಡೇಶ್ವರದಲ್ಲಿ ರಾಜ್ಯಪಾಲ ಆಗಮನದ ಹಿನ್ನೆಲೆಯಲ್ಲಿ ಕಳೆದ ಎರಡು ದಿನಗಳಿಂದ ಪೊಲೀಸರು ಸೂಕ್ತ ಬಂದೋಬಸ್ತ್‌(Security) ಏರ್ಪಡಿಸಿದ್ದರು. 

78

ಬೆಳಗ್ಗೆಯಿಂದಲೇ ಭಟ್ಕಳದ ಗಡಿಯಿಂದ ಮುರ್ಡೇಶ್ವರದ ತನಕ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಲ್ಲಲ್ಲಿ ಪಾಯಿಂಟ್‌ ಹಾಕಿದ್ದು ಅಲ್ಲದೇ ಗಸ್ತು ವಾಹನಗಳು ನಿರಂತರವಾಗಿ ಓಡಾಡುತ್ತಿದ್ದವು.

88

ಶುಕ್ರವಾರ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದ ರಾಜ್ಯಪಾಲ ಥಾವರ ಚಂದ್‌ ಗೆಹ್ಲೋಟ್‌

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

KN
Kannadaprabha News
1967ರ ನವೆಂಬರ್ 4ರಂದು ಆರಂಭವಾದ ಕನ್ನಡಪ್ರಭ ಕನ್ನಡ ಪತ್ರಿಕೋದ್ಯಮದಲ್ಲಿಯೇ ವಿಶೇಷ ಛಾಪು ಮೂಡಿಸಿದ ಕನ್ನಡ ದಿನ ಪತ್ರಿಕೆ. ದೇಶ, ವಿದೇಶ, ವಾಣಿಜ್ಯ, ಕ್ರೀಡೆ, ಮನೋರಂಜನೆ ಸೇರಿ ವೈವಿಧ್ಯಮಯ ಸುದ್ದಿಗಳ ಹೂರಣ ಹೊತ್ತು ತರುವ ಕನ್ನಡಪ್ರಭ, ಕನ್ನಡಿಗರ ಅಸ್ಮಿತೆಯ ಸಂಕೇತ. ಸದಾ ಕರುನಾಡು, ನುಡಿ, ಸಂಸ್ಕೃತಿ ಪರ ಧ್ವನಿ ಎತ್ತುವ ಕನ್ನಡಪ್ರಭ ದಿನ ಪತ್ರಿಕೆಯಲ್ಲಿ ಪ್ರಕಟಗೊಳ್ಳುವ ಸುದ್ದಿಗಳು ಸುವರ್ಣ ನ್ಯೂಸ್ ವೆಬ್‌ಸೈಟಲ್ಲೂ ಲಭ್ಯ.

Latest Videos
Recommended Stories
Recommended image1
ಬೆಂಗಳೂರಲ್ಲಿ ಕಲರ್ಸ್ ಮೊಬೈಲ್ ಅಂಗಡಿ ಮಾಲೀಕನಿಗೆ ಕಲರ್ ಕಲರ್ ಕಾಗೆ ಹಾರಿಸಿದ ಖತರ್ನಾಕ್ ಖದೀಮ!
Recommended image2
ದಾಖಲೆ ಮಾಡಿದ ಉತ್ತರ ಕನ್ನಡದ ಅಪರೂಪದ ರಾಜಕಾರಣಿ, ರಾಮಕೃಷ್ಣ ಹೆಗಡೆ ಮೊಮ್ಮಗ ಶಶಿಭೂಷಣ್‌ ಹೆಗಡೆ!
Recommended image3
ವಿದ್ಯಾರ್ಥಿಗಳ ಬೇಸಿಗೆ ರಜಾ ಮಜಾ ಕಟ್‌ ಮಾಡದಂತೆ ಕರ್ನಾಟಕದ ಶಾಲೆಗಳಿಗೆ CBSE ಖಡಕ್‌ ಸೂಚನೆ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved