ಅಮರಾವತಿ[ಡಿ.13]: ಪಶುವೈದ್ಯೆ ರೇಪಿಸ್ಟ್‌ಗಳ ಎನ್‌ಕೌಂಟರ್ ಬೆನ್ನಲ್ಲೇ ರೇಪಿಸ್ಟ್‌ಗಳ ವಿರುದ್ಧ ಆಂಧ್ರ ಸರ್ಕಾರದ ಬ್ರಹ್ಮಾಸ್ತ್ರ ಪ್ರಯೋಗಿಸಿದೆ. ಜಗನ್ ನೇತೃತ್ವದ ಆಂಧ್ರ ಪ್ರದೇಶ ಸರ್ಕಾರ ಐತಿಹಾಸಿಕ ಕಾನೂನು ಜಾರಿಗೊಳಿಸಿದ್ದು, ಈ ನೂತನ ಕಾನೂನಿನ ಅನ್ವಯ ಅತ್ಯಾಚಾರಿಗಳಿಗೆ 21 ದಿನದಲ್ಲೇ ಗಲ್ಲು ಶಿಕ್ಷೆಯಾಗಲಿದೆ. ಆಂಧ್ರ ಪ್ರದೇಶ ವಿಧಾನಸಭೆಯಲ್ಲಿ ದಿಶಾ ವಿಧೇಯಕ ಮಂಡನೆಯಾಗಿದ್ದು, ಅತ್ಯಾಚಾರ ಪ್ರಕರಣಗಳನ್ನು ತಡೆಗಟ್ಟುವಲ್ಲಿ ಇದು ಪ್ರಮುಖ ಪಾತ್ರ ವಹಿಸಲಿದೆ.

ದಿಶಾ ಕಾನೂನಿನಲ್ಲಿ ಏನಿದೆ?

*ಮಹಿಳೆಯರ ಮೇಲಿನ ಅತ್ಯಾಚಾರ ದೌರ್ಜನ್ಯ ಪ್ರಕರಣಗಳ ತ್ವರಿತ ವಿಚಾರಣೆ

*ಹೊಸ ಕಾನೂನಿನಡಿ ಕೇವಲ 14 ದಿನಗಳಲ್ಲೇ ವಿಚಾರಣೆ ಪೂರ್ಣಗೊಳಿಸಬೇಕು

*ತ್ವರಿತ ವಿಚಾರಣೆ ಬಳಿಕ 21 ದಿನಗಳಲ್ಲಿ ತೀರ್ಪು ನೀಡಲಿರುವ ನ್ಯಾಯಾಲಯ

*ಪ್ರತಿ ಜಿಲ್ಲೆಗಳಲ್ಲೂ ವಿಶೇಷ ನ್ಯಾಯಾಲಯಗಳ ಸ್ಥಾಪನೆ

*ಸಂತ್ರಸ್ಥೆ ಪರ ವಾದಿಸಲು ಸರ್ಕಾರಿ ವಿಶೇಷ ವಕೀಲರ ನೇಮಕ

*ಪ್ರಕರಣಗಳಲ್ಲಿ ಸೆಕ್ಷನ್ 354(E) ಮತ್ತು 354(F) ಸೇರಿಸಲು ಒಪ್ಪಿಗೆ

*ಸಾಮಾಜಿಕ ಜಾಲತಾಣಗಳಲ್ಲಿ ಮಹಿಳೆಯರನ್ನು ನಿಂದಿಸಿದರೂ ಶಿಕ್ಷೆ

*2 ರಿಂದ ನಾಲ್ಕು ವರ್ಷಗಳ ಶಿಕ್ಷೆ ನೀಡಲು ದಿಶಾ ಕಾಯ್ದೆಯಲ್ಲಿ ಅವಕಾಶ

*ಮಹಿಳೆಯರ ವಿರದ್ಧ ಸುಳ್ಳು ಬರಹ ಹಾಕಿದ್ರೂ 2 ವರ್ಷ ಜೈಲು ಶಿಕ್ಷೆ

*ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ 10 ರಿಂದ 14 ವರ್ಷ ಜೈಲು

*ಪ್ರಕರಣದ ತೀವ್ರತೆ ಆಧರಿಸಿ ಜೀವಾವಧಿ ಶಿಕ್ಷೆ ನೀಡುವ ಅವಕಾಶ

*ಪೋಕ್ಸೋ ಕಾಯ್ದೆಯಡಿ ಕನಿಷ್ಠ 5 ವರ್ಷ ಜೈಲು ಶಿಕ್ಷೆಗೆ ಅವಕಾಶ