ತಿರುಪತಿ(ಆ.  09)  ಕೊರೋನಾ ಕಾರಣಕ್ಕೆ ಎಲ್ಲ ದೇವಾಲಯಗಳಂತೆ ತಿರುಪತಿಯನ್ನು ಬಂದ್ ಮಾಡಲಾಗಿದ್ದು. ಅನ್ ಲಾಕ್ ನಲ್ಲಿ ಅವಕಾಶ ಸಿಕ್ಕ ನಂತರ ಓಪನ್ ಮಾಡಲಾಗಿದೆ. ಆದರೆ ಈಗ ದೇವಾಲಯ ತೆರೆದಿದ್ದೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.

ಟಿಟಿಡಿಯ 743 ಸಿಬ್ಬಂದಿಗೆ ಕೊರೋನಾ ದೃಢಪಟ್ಟಿದೆ.  ಟಿಟಿಡಿ ಕಾರ್ಯಕಾರಿ ಅಧಿಕಾರಿ ಅನಿಲ್ ಕುಮಾರ್ ಸಿಂಗ್  ಸ್ಪಷ್ಟನೆ ನೀಡಿದ್ದು ಜೂ.11 ರ ಬಳಿಕ ದೇವಾಲಯ ತೆರದ ನಂತರ 743 ಟಿಟಿಡಿ ಸಿಬ್ಬಂದಿಗಳಿಗೆ ಸೋಂಕು ತಗುಲಿದೆ ಈ ಪೈಕಿ 402 ಜನರು ಚೇತರಿಸಿಕೊಂಡಿದ್ದು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಉಳಿದ 338 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿಸಿದ್ದಾರೆ. 

ಜಗನ್ ಆಪ್ತ ಮಠಗಳಿಗೆ ತಿರುಪತಿ ಜಮೀನು?

ಟಿಟಿಡಿಯ ಮೂವರು ಸಿಬ್ಬಂದಿ ಕೊರೋನಾಕ್ಕೆ  ಬಲಿಯಾಗಿದ್ದು , ನಮ್ಮ ಉದ್ಯೋಗಿಗಳಿಗೆ ಕೋವಿಡ್ ಕೇಂದ್ರಗಳಲ್ಲಿ ಅತ್ಯುತ್ತಮವಾದ ಚಿಕಿತ್ಸೆ ನೀಡುತ್ತಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.

ಆದರೆ ದೇವಾಲಯಯಕ್ಕೆ ಭೇಟಿ ನೀಡಿದ ಯಾವೊಬ್ಬ ಭಕ್ತರಿಗೂ ಕೊರೋನಾ ಕಾಣಿಸಿಕೊಂಡಿಲ್ಲ. ಸಕಲ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡು ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ. ದೇಶಲ್ಲಿ ಲಾಕ್ ಡೌನ್ ಪರಿಸ್ಥಿತಿಯನ್ನು ಒಂದೊಂದಾಗಿ ಸಡಿಲ ಮಾಡಿಕೊಂಡು ಬರಲಾಗಿತ್ತು. ಸಿನಿಮಾ ಮಂದಿರ ಮತ್ತು ಶಾಲೆ-ಕಾಲೇಜು ತೆರೆಯಲು ಇನ್ನು ಅವಕಾಶ ನೀಡಲಾಗಿಲ್ಲ.