ಅಕ್ರಮ ಬಾಂಗ್ಲಾ ವಲಸಿಗರಿಗೆ ನಕಲಿ ದಾಖಲೆ ಪತ್ರ ನೆರವು; ಮಾಜಿ ಕೌನ್ಸಿಲರ್ ಅರೆಸ್ಟ್!

  • ಹಣದ ಆಸೆ ಭಾರತವನ್ನೇ ಮಾರಾಟಕ್ಕಿಡಲು ಸಜ್ಜಾದ ಜನ ನಾಯಕರು
  • ಬಾಂಗ್ಲಾ ವಲಸಿಗರಿಗೆ ನಕಲಿ ದಾಖಲೆ ಪತ್ರ ನೀಡಿದ ಮಾಜಿ ಕೌನ್ಸಿಲರ್
  • ವಾಸ ದೃಢೀಕರಣ ಪತ್ರದಿಂದ ಆಧಾರ್, ವೋಟರ್ ಐಡಿ ಮಾಡಿಕೊಂಡ ವಲಸಿಗರು
Andaman Nicobar Ex Councillor issued a residence certificate to bangladeshi police arrested ckm

ಪೋರ್ಟ್‌ಬ್ಲೇರ್(ಜೂ.27):  ಅಕ್ರಮ ಬಾಂಗ್ಲಾದೇಶ ವಲಸಿಗರು ಭಾರತದಲ್ಲಿ ರಾಜರೋಶವಾಗಿ ಜೀವನ ಸಾಗಿಸುತ್ತಿದ್ದಾರೆ. ಅದರಲ್ಲೂ ಪಶ್ಚಿಮ ಬಂಗಾಳ ಸೇರಿದಂತೆ ಬಾಂಗ್ಲಾ ಗಡಿ ರಾಜ್ಯಗಳಲ್ಲಿ ಅಕ್ರಮ ವಲಸಿಗರ ಮತಗಳೇ ಸರ್ಕಾರವನ್ನು ಆಯ್ಕೆ ಮಾಡುವಷ್ಟರ ಮಟ್ಟಿಗಿದೆ. ಇದರ ವಿರುದ್ಧ ಕಠಿಣ ಕಾನೂನು ಅಗತ್ಯವಿದೆ ಅನ್ನೋ ವಾದ ಹೆಚ್ಚಾಗುತ್ತಿರುವ ಬೆನ್ನಲ್ಲೇ ಇದೀಗ ಅಕ್ರಮ ಬಾಂಗ್ಲಾ ವಲಸಿಗರಿಗೆ ವಾಸ ದೃಢೀಕರಣ ಪತ್ರ ಸೇರಿದಂತೆ ಹಲವು ದಾಖಲೆಗಳನ್ನು ಮಾಡಿದ ಆರೋಪದಡಿ ಇದೀಗ ಮಾಜಿ ಕೌನ್ಸಲರ್ ಅರೆಸ್ಟ್ ಆಗಿದ್ದಾರೆ.

ಅತ್ಯಾಚಾರಕ್ಕೂ ಮುನ್ನ ಅರೆನಗ್ನ ಪಾರ್ಟಿ, ಬಾಂಗ್ಲಾ ರಹಸ್ಯ

ಅಂಡಮಾನ್ ನಿಕೋಬಾರ್ ದ್ವೀಪದಲ್ಲಿ ಅಕ್ರಮ ಬಾಂಗ್ಲಾ ವಲಸಿಗರ ಸಂಖ್ಯೆ ಹೆಚ್ಚಾಗುತ್ತಿದೆ ಅನ್ನೋ ಮಾತುಗಳು ಕೇಳಿ ಬರುತ್ತಿದೆ. ಇದರ ಬೆನ್ನಲ್ಲೇ ಪೊಲೀಸರು ನಕಲಿ ದಾಖಲೆಗಳಿಂದ ಆಧಾರ್ , ಪಾನ್ ಕಾರ್ಡ್, ವೋಟರ್ ಐಡಿ ಸೇರಿದಂತೆ ಹಲವು ದಾಖಲೆಗಳನ್ನು ಮಾಡಿಕೊಂಡಿರುವ ಅಕ್ರಮ ಬಾಂಗ್ಲಾ ವಲಸಿಗರಾದ ನಯನ್ ಸರ್ಕಾರ ಕುಟುಂಬವನ್ನು ಪತ್ತೆಹಚ್ಚಿದೆ.

ಅಂಡಮಾನ್ ನಿಕೋಬಾರ್‌ನಲ್ಲಿ ಅಕ್ರಮ ಬಾಂಗ್ಲಾ ವಲಸಿಗರಿಗೆ ವಾಸ ದೃಢೀಕರಣ ಪತ್ರ ಸೇರಿದಂತೆ ಇತರ ದಾಖಲೆಗಳನ್ನು ನೀಡಿ ಕಾನೂನು ಉಲ್ಲಂಘಿಸಿದ ಮಾಜಿ ಕೌನ್ಸಿಲರನ್ನು ಪೊಲೀಸರು ಬಂಧಿಸಿದ್ದಾರೆ. ಈ ಕೌನ್ಸಿಲರ್ ಹಲವು ವಲಸಿಗರಿಗೆ ಈ ರೀತಿ ದಾಖಲೆ ಪತ್ರಗಳನ್ನು ಮಾಡಿಕೊಟ್ಟಿರುವುದು ಬಹಿರಂಗವಾಗಿದೆ. 

ಮ್ಯಾಕ್ರೋನ್‌ ಹೇಳಿಕೆ ಸಮರ್ಥನೆ: ಹಿಂದುಗಳ ಮನೆಗೆ ಬೆಂಕಿ!...

ನಕಲಿ ದಾಖಲೆ ಪತ್ರಗಳನ್ನು ಮಾಡಿಕೊಂಡು ಭಾರತದಲ್ಲಿ ಅಕ್ರಮವಾಗಿ ನೆಲೆಸಿರುವ ಸರ್ಕಾರ್ ಕುಟುಂಬವನ್ನು ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದಿಂದ ಇದೀಗ ಮತ್ತಷ್ಟು ಅಕ್ರಮ ವಲಸಿಗರ ಪತ್ತೆ ಕಾರ್ಯ ಆರಂಭಗೊಂಡಿದೆ. ಸಾರ್ವಜನಿಕರಲ್ಲೂ ಈ ಕುರಿತು ಎಚ್ಚರವಹಿಸಬೇಕಾಗಿ ಪೊಲೀಸರು ಸೂಚಿಸಿದ್ದಾರೆ.

Latest Videos
Follow Us:
Download App:
  • android
  • ios