Asianet Suvarna News Asianet Suvarna News

ತನ್ನ ಪ್ರಶ್ನೆಗೆ ಸರಿ ಉತ್ತರ ನೀಡಿದ ಇಬ್ಬರಿಗೆ ಆನಂದ್‌ ಮಹೀಂದ್ರಾ ಸ್ಪೆಷಲ್‌ ಗಿಫ್ಟ್‌!

ಕೈಗಾರಿಕೋದ್ಯಮಿ ಆನಂದ್‌ ಮಹೀಂದ್ರಾ ಬುಧವಾರ ಟ್ವಿಟರ್‌ನಲ್ಲಿ ಸ್ವಲ್ಪ ಬ್ಯುಸಿಯಾಗಿದ್ದರು. ಮಹೀಂದ್ರಾ ಟ್ರ್ಯಾಕ್ಟರ್‌ಗಳು ಯಾವುದೋ ದೇಶಕ್ಕೆ ಹೋಗಿರುವ ವಿಡಿಯೋ ಪೋಸ್ಟ್‌ ಮಾಡಿ, ಇದು ಯಾವ ದೇಶ ಎಂದು ಹೇಳಿದ್ದಲ್ಲಿ, ಇದೇ ಟ್ರ್ಯಾಕ್ಟರ್‌ನ ಸಣ್ಣ ಮಾದರಿಯನ್ನು ಗಿಫ್ಟ್‌ ಆಗಿ ನೀಡುವುದಾಗಿ ತಿಳಿಸಿದ್ದರು. ಅದರಂತೆ ರಾತ್ರಿಯ ವೇಳೆಗೆ ವಿಜೇತರನ್ನು ತಮ್ಮ ಟ್ವೀಟ್‌ ಮೂಲಕ ಪ್ರಕಟಿಸಿದ್ದಾರೆ.
 

Anand Mahindra Latest Twitter Quiz two tweeples won Tractor Replica Reward san
Author
First Published Oct 12, 2022, 8:34 PM IST

ಬೆಂಗಳೂರು (ಅ.12):  ಕೈಗಾರಿಕೋದ್ಯಮಿ ಆನಂದ್ ಮಹೀಂದ್ರ ಹಲವಾರು ಸಂದರ್ಭಗಳಲ್ಲಿ,ತಮ್ಮ ವಿಶಿಷ್ಟ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳ ಮೂಲಕ ತಮ್ಮ ಫಾಲೋವರ್‌ಗಳೊಂದಿಗೆ ಚರ್ಚೆಯಲ್ಲಿ ಇರುತ್ತಾರೆ. ಬುಧವಾರ ಅವರು ತಮ್ಮ ಟ್ವಿಟರ್‌ ಪುಟದಲ್ಲಿ ತಮ್ಮದೇ ಕಂಪನಿಯ ಟ್ರ್ಯಾಕ್ಟರ್‌ಗಳ ವಿಡಿಯೋವನ್ನು ಹಂಚಿಕೊಂಡಿದ್ದು, ಇದು ಯಾವ ದೇಶದ ವಿಡಿಯೂ ಎಂದು ಪ್ರಶ್ನೆ ಫಾಲೋವರ್ಸ್‌ಗಳಿಗೆ ಪ್ರಶ್ನೆ ಮಾಡಿದ್ದರು. ಅದಲ್ಲದೆ, ಇದು ಯಾವ ದೇಶದ ವಿಡಿಯೋ ಎಂದು ಸರಿಯಾಗಿ ಹೇಳುವ ವ್ಯಕ್ತಿಗೆ ಬಹುಮಾನದ ಭರವಸೆಯನ್ನೂ ಅವರು ನೀಡಿದ್ದರು. ಮಹೀಂದ್ರಾ ಅವರು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ವೀಡಿಯೊದಲ್ಲಿ ಹಲವಾರು ಕೆಂಪು ಬಣ್ಣದ ಟ್ರಾಕ್ಟರುಗಳು ರಸ್ತೆಬದಿಯಲ್ಲಿ ಸಾಲಾಗಿ ನಿಂತಿರುವುದನ್ನು ತೋರಿಸುತ್ತದೆ. ಒಂದು ಟ್ಯಾಬ್ಲೋ ಕೂಡ ದೂರದಲ್ಲಿರಬಹುದು. ವಿಡಿಯೋದ ಕೊನೆಯಲ್ಲಿ ಒಂದು ಟ್ಯಾಬ್ಲೋ ಕೂಡ ಕಾಣಿಸಿದೆ. "ಇದು ಮಹೀಂದ್ರಾ ಟ್ರ್ಯಾಕ್ಟರ್‌ ಎನ್ನುವುದು ಪಕ್ಕಾ. ಅದರೆ, ಇದು ಯಾವ ದೇಶ?' ಎಂದು ಮಹೀಂದ್ರಾ ಗ್ರೂಪ್‌ನ ಚೇರ್ಮನ್‌ ಟ್ವಿಟರ್‌ನಲ್ಲಿ ಪ್ರಶ್ನೆ ಮಾಡಿದ್ದರು. ಈ ಕ್ಲಿಪ್‌ನ ಜೊತೆಯಲ್ಲಿ, ಗೆದ್ದವರಿಗೆ ನೀಡಲಾಗುವ ಟ್ರ್ಯಾಕ್ಟರ್‌ನ ಚಿಕ್ಕ ಮಾದರಿಯ ಚಿತ್ರವನ್ನೂ ಅವರು ಹಾಕಿದ್ದರು.


'ಸರಿ ಉತ್ತರ ನೀಡುವ ಮೊದಲ ವ್ಯಕ್ತಿಗೆ ಇದೇ ಟ್ರ್ಯಾಕ್ಟರ್‌ನ ಪುಟ್ಟ ಮಾದರಿಯನ್ನು ಬಹುಮಾನವಾಗಿ ನೀಡುತ್ತೇನೆ. ಅದರ ಚಿತ್ರ ಕೂಡ ಇಲ್ಲಿದೆ' ಎಂದು ಅವರು ಬರೆದಿದ್ದರು. ಆನಂದ್‌ ಮಹೀಂದ್ರಾ ಅವರ ಈ ಟ್ವೀಟ್‌ಗೆ ಲೆಕ್ಕವಿಲ್ಲದಷ್ಟು ಪ್ರತಿಕ್ರಿಯೆಗಳು ಬಂದಿವೆ. 233 ಮಂದಿ ಕೋಟ್‌ ಟ್ವೀಟ್‌ ಮಾಡಿದ್ದರೆ, 1 ಸಾವಿರಕ್ಕೂ ಅಧಿಕ ಮಂದಿ ರೀಟ್ವೀಟ್‌ ಮಾಡಿದ್ದಾರೆ. 22 ಸಾವಿರ ಮಂದಿ ಲೈಕ್‌ ಮಾಡಿದ್ದಾರೆ. ಈ ವಿಡಿಯೋವನ್ನು 720 ಮಂದಿ ವೀಕ್ಷಣೆ ಮಾಡಿದ್ದಾರೆ.

ರಾತ್ರಿ 7.57ರ ವೇಳೆಗೆ ಇದರ ವಿಜೇತರನ್ನೂ ಪ್ರಕಟಿಸಿ ಆನಂದ್‌ ಮಹೀಂದ್ರಾ ಟ್ವೀಟ್‌ ಮಾಡಿದ್ದಾರೆ. "ಧ್ವಜಗಳು ಹೆಚ್ಚಿನ ಜನರನ್ನು ಗೊಂದಲಗೊಳಿಸಿದವು. ಇದು ಡಾಸ್ ಇರ್ಮಾಸ್, 'ಬ್ರೆಜಿಲ್'. ಜರ್ಮನ್ ವಸಾಹತುಗಾರರ ಆಗಮನವನ್ನು ಆಚರಿಸುವ ಉತ್ಸವವಾಗಿದೆ. @Shivana08596105 ಅವರು @MayankS29063346 ಅವರನ್ನು ಕೇವಲ 0.1 ಸೆಕೆಂಡ್‌ನ ಅಂತರದಿಂದ ಸೋಲಿಸಿದ್ದಾರೆ! ಹಾಗಿದ್ದರೂ, ನನ್ನ ಪ್ರಕಾರ ಇಬ್ಬರೂ ಕೂಡ ಪ್ರಶಸ್ತಿಗೆ ಅರ್ಹರಾಗಿದ್ದಾರೆ. ನಿಮಗೂ ಕೂಡ ಹಾಗೆ ಅನಿಸುತ್ತಿಲ್ಲವೇ? ನೀವುಬ್ಬರೂ ನಿಮ್ಮ ಸಂಪರ್ಕ ಮಾಹಿತಿಯನ್ನು @MahindraRise ಗೆ ಡೈರೆಕ್ಟ್‌ ಮೆಸೇಜ್‌ ಮಾಡಬಹುದೇ?' ಎಂದು ಟ್ವೀಟ್‌ ಮಾಡಿದ್ದಾರೆ.

Anand Mahindra: ಭಾರತ ಆರ್ಥಿಕತೆಯಲ್ಲಿ ಬ್ರಿಟನ್‌ ಹಿಂದಿಕ್ಕಿದ್ದು ''ಕರ್ಮ ಸಿದ್ಧಾಂತದ ಫಲ'' ಎಂದ ಉದ್ಯಮಿ

ಆನಂದ್‌ ಮಹೀಂದ್ರಾ ಅವರು ಹೇಳಿದ ಪ್ರಕಾರ, ಆ ವಿಡಿಯೋ ಬ್ರೆಜಿಲ್‌ನದ್ದಾಗಿತ್ತು. ಆದರೆ, ಬಹುತೇಕರು ವಿಡಿಯೋದಲ್ಲಿನ ಧ್ವಜವನ್ನು ನೋಡಿ ಜರ್ಮನಿ ಎಂದು ಉತ್ತರ ನೀಡಿದ್ದರು. ಬ್ರೆಜಿಲ್‌ಗೆ ಜರ್ಮನ್‌ ವಸಹಾತುಗಾರರ ಆಗಮನವನ್ನು ಆಚರಿಸುವ ಉತ್ಸವದಲ್ಲಿ ಮಹೀಂದ್ರಾ ಟ್ರ್ಯಾಕ್ಟರ್‌ಗಳ ವಿಡಿಯೋ ಅದಾಗಿತ್ತು. ಪಶ್ಚಿಮ ಬಂಗಾದ ಪ್ರತೀಕ್‌ ಹಾಗೂ ಬಿಹಾರದ ಮಯಾಂಕ್‌ ಶೇಖರ್‌ ಸ್ವತಃ ಆನಂದ್‌ ಮಹೀಂದ್ರಾ ಅವರಿಂದ ಈ ಬಹುಮಾನವನ್ನು ಪಡೆಯಲಿದ್ದಾರೆ.

Anand Mahindra: ಇವರೇ ಬೆಸ್ಟ್‌ ಬೊಲೆರೋ ಡ್ರೈವರ್‌; ಆನೆಗೂ ಹೆದರದ ಇವರನ್ನು ಕ್ಯಾಪ್ಟನ್‌ ಕೂಲ್ ಎಂದ ಉದ್ಯಮಿ

"ಆನಂದ್ ಸರ್, ಇದು "ಜರ್ಮನಿ" ಎಂದು ಕೆಲವು ಟ್ವೀಪಲ್ಸ್‌ಗಳು ಬರೆದುಕೊಂಡಿದ್ದಾರೆ. ಇನ್ನೂ ಕೆಲವರು ಇದು ದಕ್ಷಿಣ ಆಫ್ರಿಕಾ ಇದ್ದಂತೆ ತೋರುತ್ತದೆ ಎಂದಿದ್ದಾರೆ. ಇನ್ನು ವಿಕಾಸ್‌ ಶಾ ಎನ್ನುವ ವ್ಯಕ್ತಿ, "ಈ ದೃಶ್ಯಗಳು ಜರ್ಮನಿಯಿಂದ ಬಂದವು ಮತ್ತು 2 ವರ್ಷಗಳ ಕೋವಿಡ್‌ ಲಾಕ್‌ಡೌನ್ ನಂತರ ಹಿಂತಿರುಗಿದ "ಆಕ್ಟೋಬರ್‌ಫೆಸ್ಟ್" ಸಮಯದಲ್ಲಿ ಅವರು ಟ್ರ್ಯಾಕ್ಟರ್‌ ಸವಾರಿ ಮಾಡುತ್ತಿದ್ದಾರೆ' ಎಂದು ಬರೆದಿದ್ದಾರೆ

Follow Us:
Download App:
  • android
  • ios