Asianet Suvarna News Asianet Suvarna News

ಸಾಲದ ಬಡ್ಡಿ ಕಟ್ಟದ್ದಕ್ಕೆ ದೌರ್ಜನ್ಯ: ಮಹಿಳೆಯ ಬೆತ್ತಲೆಗೊಳಿಸಿ ಬಾಯಿಗೆ ಮೂತ್ರ ವಿಸರ್ಜನೆ

ಸಾಲ ಪಡೆದಿದ್ದ 1,500 ರು.ಗೆ ಹೆಚ್ಚುವರಿ ಬಡ್ಡಿ ಕಟ್ಟಲಿಲ್ಲ ಎಂದು ದಲಿತ ಮಹಿಳೆಯನ್ನು ಬೆತ್ತಲೆಗೊಳಿಸಿ, ದೊಣ್ಣೆಯಿಂದ ಥಳಿಸಿದ್ದಲ್ಲದೇ ಆಕೆಯ ಬಾಯಿಯಲ್ಲಿ ಮೂತ್ರ ವಿಸರ್ಜನೆ ಮಾಡಿದ ಅಮಾನವೀಯ ಘಟನೆ ಬಿಹಾರದಲ್ಲಿ ನಡೆದಿದೆ.

An inhumane incident in Bihar woman was stripped naked, beaten and urinated on her mouth for not paying additional interest on a loan akb
Author
First Published Sep 26, 2023, 10:10 AM IST

ಪಟನಾ: ಸಾಲ ಪಡೆದಿದ್ದ 1,500 ರು.ಗೆ ಹೆಚ್ಚುವರಿ ಬಡ್ಡಿ ಕಟ್ಟಲಿಲ್ಲ ಎಂದು ದಲಿತ ಮಹಿಳೆಯನ್ನು ಬೆತ್ತಲೆಗೊಳಿಸಿ, ದೊಣ್ಣೆಯಿಂದ ಥಳಿಸಿದ್ದಲ್ಲದೇ ಆಕೆಯ ಬಾಯಿಯಲ್ಲಿ ಮೂತ್ರ ವಿಸರ್ಜನೆ ಮಾಡಿದ ಅಮಾನವೀಯ ಘಟನೆ ಬಿಹಾರದಲ್ಲಿ ನಡೆದಿದೆ.

ಪಟನಾ (Patna) ಜಿಲ್ಲೆಯ ಮೋಸಿಂಪುರ (Mosimpur) ಗ್ರಾಮದಲ್ಲಿ ಇಂಥದ್ದೊಂದು ಘಟನೆ ನಡೆದಿದ್ದು, ಸಂತ್ರಸ್ತೆ ಮಹಿಳೆಯ ಪತಿ ಗ್ರಾಮದ ಪ್ರಮೋದ್‌ ಸಿಂಗ್‌ (Pramod singh) ಎಂಬುವವರಿಂದ 1,500 ರು. ಸಾಲ ಪಡೆದಿದ್ದರು. ಹಣ ಮರುಪಾವತಿ ಮಾಡಿದ್ದರೂ ಹೆಚ್ಚುವರಿ ಬಡ್ಡಿ ನೀಡುವಂತೆ ಪ್ರಮೋದ್‌ ಆಗ್ರಹಿಸಿದ್ದ. ಆದರೆ ಇದಕ್ಕೆ ದಂಪತಿಗಳು ಒಪ್ಪದ ಕಾರಣಕ್ಕೆ ಪ್ರಮೋದ್‌ನ ಮಗ ಅಂಶು ಎಂಬಾತ ಮತ್ತು ಅವರ ನಾಲ್ವರು ಸಹಾಯಕರು ಮಹಿಳೆ ಮೇಲೆ ಹಲ್ಲೆ ನಡೆಸಿದ್ದಾರೆ.

ಕೆಂಪುಕೋಟೆ ಮೇಲೆ ರಾಷ್ಟ್ರಧ್ವಜ ಹಾರಾಟ ತಡೆದರೆ 8 ಕೋಟಿ ನೀಡುವುದಾಗಿ ಘೋಷಿಸಿದ್ದ ಪನ್ನೂನ್

ಶನಿವಾರ ರಾತ್ರಿ ನೀರು ತರಲು ಮಹಿಳೆ ಮನೆಯಿಂದ ಹೊರ ಹೋದಾಗ ಐವರು ಆಕೆಯನ್ನು ತಮ್ಮೊಂದಿಗೆ ಬರುವಂತೆ ಒತ್ತಾಯಿಸಿದ್ದಾರೆ. ಬಳಿಕ ಅವಳನ್ನು ಪ್ರತ್ಯೇಕ ಸ್ಥಳಕ್ಕೆ ಕರೆದೊಯ್ದು ದೊಣ್ಣೆಗಳಿಂದ ಥಳಿಸಿದ್ದಾರೆ. ಅಲ್ಲದೇ ಆಕೆಯ ಬಟ್ಟೆಯನ್ನು ಕಿತ್ತು ಹಾಕಿ ಬೆತ್ತಲೆಗೊಳಿಸಿದ್ದಾರೆ. ಈ ವೇಳೆ ಅಂಶು, ಮಹಿಳೆಯ ಬಾಯಿಯಲ್ಲಿ ಬಲವಂತವಾಗಿ ಮೂತ್ರ ವಿಸರ್ಜನೆ ಮಾಡಿ ಹೀನ ಕೃತ್ಯ ಎಸಗಿದ್ದಾನೆ. ಬಳಿಕ ಆಕೆ ಹೇಗೋ ಅವರಿಂದ ತಪ್ಪಿಸಿಕೊಂಡು ಬೆತ್ತಲೆಯಾಗಿಯೇ ಮನೆಯತ್ತ ಓಡಿಬರುತ್ತಿದ್ದಾಗ ಆಕೆಯನ್ನೇ ಹುಡುಕುತ್ತಿದ್ದ ಕುಟುಂಬಸ್ಥರಿಗೆ ಸಿಕ್ಕಿದ್ದಾಳೆ.

ಸದ್ದಿಲ್ಲದೇ ಅಮೆರಿಕಾ ಬಾಹ್ಯಾಕಾಶ ಸಂಸ್ಥೆಯ ದೊಡ್ಡ ಸಾಧನೆ: ಕ್ಷುದ್ರಗ್ರಹದ ಮಣ್ಣು ತಂದ ನಾಸಾ

ಮಹಿಳೆಯ ತಲೆಗೆ ಗಂಭಿರ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆರೋಪಿಗಳ ವಿರುದ್ಧ ಗಂಭೀರ ಪ್ರಕರಣ ದಾಖಲಾಗಿದ್ದು ಪೊಲೀಸರು ಐವರಿಗೂ ಶೋಧ ನಡೆಸಿದ್ದಾರೆ.

ಕೇರಳದಲ್ಲಿ ಯೋಧನ ಮೇಲೆ ದಾಳಿ ಮಾಡಿ ಬೆನ್ನಲ್ಲಿ ಪಿಎಫ್‌ಐ ಎಂದು ಬರೆದ ಪಿಎಫ್‌ಐ ಉಗ್ರರು

ಪೊಲೀಸರ ಕಂಡರೆ ದಾಳಿ ಮಾಡುವಂತೆ ನಾಯಿಗಳಿಗೆ ಟ್ರೇನಿಂಗ್: ಕೇರಳ ಡ್ರಗ್ಸ್‌ ವ್ಯಾಪಾರಿಯ ಭಯಾನಕ ಕುತಂತ್ರ

Follow Us:
Download App:
  • android
  • ios