ರಾಂಚಿ(ನ.22): ಚುನಾವಣಾ ಚಾಣಕ್ಯ ಎಂದೇ ಪ್ರಸಿದ್ಧರಾಗಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಜಾರ್ಖಂಡ್ ವಿಧಾನಸಭೆ ಚುನಾವಣೆಗಾಗಿ ಹೊಸ ಪ್ರಚಾರ ಸೂತ್ರ ಅಳವಡಿಸಿಕೊಂಡಿದ್ದಾರೆ.

ಮತದಾರರನ್ನು ಸೆಳೆಯಲು ಸುಪ್ರೀಂಕೋರ್ಟ್ ಅಯೋಧ್ಯೆ ತೀರ್ಪು ಹಾಗೂ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದತಿ ವಿಷಯಗಳನ್ನು ಅಮಿತ್ ಶಾ  ತಮ್ಮ ಚುನಾವಣಾ ಭಾಷಣದಲ್ಲಿ ಪ್ರಸ್ತಾಪಿಸುತ್ತಿದ್ದಾರೆ.

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ವಿಳಂಬವಾಗಲು ಕಾಂಗ್ರೆಸ್ ಕಾರಣ ಎಂದಿರುವ ಅಮಿತ್ ಶಾ, ವೋಟ್’ಬ್ಯಾಂಕ್ ರಾಜಕಾರಣಕ್ಕೆ ಪ್ರಭು ಶ್ರೀರಾಮ ಬಲಿಯಾಗಬೇಕಾಯ್ತು ಎಂದು ಆರೋಪಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದತಿ ಮೋದಿ ಸರ್ಕಾರದ ಐತಿಹಾಸಿಕ ನಿರ್ಧಾರ ಎಂದೂ ಅಮಿತ್ ಶಾ ಅಭಿಪ್ರಾಯಪಟ್ಟಿದ್ದಾರೆ.

ಇಲ್ಲಿನ ಲತೇಹಾರ್’ನಲ್ಲಿ ಚುನಾವಣಾ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿದ ಶಾ, ಮೋದಿ ಸರ್ಕಾರದ ಐತಿಹಾಸಿಕ ನಿರ್ಣಯಗಳು ಕಾಂಗ್ರೆಸ್ ನಿದ್ದೆಗೆಡೆಸಿದೆ ಎಂದು ಲೇವಡಿ ಮಾಡಿದರು.

ಜಾರ್ಖಂಡ್‌ ವಿಧಾನಸಭೆಗೆ ನ.30- To ಡಿ.23 ಚುನಾವಣೆ: ಆಯೋಗ!

ಕಾಂಗ್ರೆಸ್ ಸರ್ಕಾರ ಜಾರ್ಖಂಡ್ ಅಭಿವೃದ್ಧಿಗೆ 55,253 ಕೋಟಿ ರೂ. ನೀಡಿದ್ದರೆ, ಮೋದಿ ಸರ್ಕಾರ 3,08,487 ರೂ. ನೀಡಿದೆ ಎಂದು ಅಮಿತ್ ಶಾ ನುಡಿದರು.

ಇದೇ ಡಿ.06ರಂದು ಒಟ್ಟು ನಾಲ್ಕು ಹಂತಗಳಲ್ಲಿ ಜಾರ್ಖಂಡ್ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು, ಡಿ.23ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.