ಹಿಂದೂಗಳ ಟಾರ್ಗೆಟ್ ಮಾಡಿ ಉಗ್ರರು ನಡೆಸಿದ ಪೆಹಲ್ಗಾಂ ಉಗ್ರ ದಾಳಿಯ ಮಾಸ್ಟರ್ ಮೈಂಡ್ ಸೇರಿ ಮೂವರು ಉಗ್ರರನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ. ಈ ಕುರಿತು ಅಮಿತ್ ಶಾ ಸದನದಲ್ಲಿ ಪೆಹಲ್ಗಾಂ ಉಗ್ರರ ಹತ್ಯೆಯನ್ನು ಖಚಿತಪಡಿಸಿದ್ದಾರೆ.
ನವದೆಹಲಿ (ಜು.29) ಪೆಹಲ್ಗಾಂ ಉಗ್ರ ದಾಳಿ ದೇಶದ ಮೇಲೆ ನಡೆದ ಅತೀ ದೊಡ್ಡ ಭಯೋತ್ಪಾದಕ ದಾಳಿ.ಹಿಂದೂಗಳನ್ನು ಟಾರ್ಗೆಟ್ ಮಾಡಿ 26 ಅಮಾಯಕರನ್ನು ಉಗ್ರರು ಹತ್ಯೆ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಭಾರತೀಯ ಸೇನೆ ಉಗ್ರರ ಸದಬಡಿಯಲು ನಿರಂತರ ಕಾರ್ಯಾಚರಣೆ ನಡೆಸಿದೆ. ಇದೀಗ ಫಲ ಸಿಕ್ಕಿದೆ. ಪೆಹಲ್ಗಾಂ ಉಗ್ರ ದಾಳಿ ನಡೆಸಿದ ಮೂವರು ಭಯೋತ್ಪಾದಕರನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ. ಈ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಸದನದಲ್ಲಿ ಖಚಿತಪಡಿಸಿದ್ದಾರೆ.
ಆಪರೇಶನ್ ಮಹಾದೇವ್
ಜಂಟಿ ಕಾರ್ಯಾಚರಣೆ ಆಪರೇಶನ್ ಮಹದೇವ್‌ನಲ್ಲಿ ಭಾರತೀಯ ಸೇನೆ, ಸಿಆರ್‌ಪಿಎಫ್ ಮತ್ತು ಜೆ&ಕೆ ಪೊಲೀಸರು ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾಗಿದ್ದ ಮೂವರು ಭಯೋತ್ಪಾದಕರನ್ನು ಹತ್ಯೆ ಮಾಡಿದ್ದಾರೆ ಎಂದು ಅಮಿತ್ ಶಾ ದೃಢಪಡಿಸಿದ್ದಾರೆ.ಭಯೋತ್ಪಾದಕ ಸುಲೇಮಾನ್ ಶಾ ಅಲಿಯಾಸ್ ಹಾಶಿಂ ಮೂಸಾ ಮತ್ತು ಕಾರ್ಯಾಚರಣೆಯಲ್ಲಿ ಕೊಲ್ಲಲ್ಪಟ್ಟ ಇತರ 2 ಜನರು ಪಹಲ್ಗಾಮ್‌ನ ಬೈಸರನ್‌ನಲ್ಲಿ ನಡೆದ ದಾಳಿಗೆ ಸಂಬಂಧಿಸಿದ್ದಾರೆ ಎಂದು ಶಾ ಲೋಕಸಭೆಗೆ ತಿಳಿಸಿದರು. “ನಿನ್ನೆ ಪಹಲ್ಗಾಮ್ ಬಲಿಪಶುಗಳ ಸೇಡು ತೀರಿಸಿಕೊಂಡಿದ್ದೇವೆ, ಭಯೋತ್ಪಾದಕ ದಾಳಿಯ ಹಿಂದಿನ ಮೂವರು ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ” ಎಂದು ಅಮಿತ್ ಶಾ ಸಂಸತ್ತಿನಲ್ಲಿ ಹೇಳಿದರು.
ಲೋಕಸಭೆಯಲ್ಲಿ ಮಾತನಾಡಿದ ಶಾ, ಸುಲೇಮಾನ್ ಲಷ್ಕರ್-ಎ-ತೊಯ್ಬಾ (LeT) ಭಯೋತ್ಪಾದಕ ಗುಂಪಿನ ಕಮಾಂಡರ್ ಮತ್ತು ಗಗಂಗೀರ್ ದಾಳಿಯಲ್ಲೂ ಪಾತ್ರ ಹೊಂದಿದ್ದರು ಎಂದಿದ್ದಾರೆ. ಸುಲೇಮಾನ್ ಜೊತೆಗೆ ಇನ್ನೂ ಇಬ್ಬರು ಭಯೋತ್ಪಾದಕರು ಹತರಾಗಿದ್ದಾರೆ. ಕಳೆದ ವರ್ಷ ಸೋನಮಾರ್ಗ್ ಸುರಂಗ ದಾಳಿಯಲ್ಲಿ ಭಾಗಿಯಾಗಿದ್ದ ಜಿಬ್ರಾನ್ ಮತ್ತು ಲಷ್ಕರ್‌ನ ಮತ್ತೊಬ್ಬ ಉನ್ನತ ಭಯೋತ್ಪಾದಕ ಹಮ್ಜಾ ಅಫ್ಘಾನಿ ಎಂದು ಗುರುತಿಸಲಾಗಿದೆ.
ಪ್ರತೀಕಾರ ಖಚಿತಪಡಿಸಿದ ಅಮಿತ್ ಶಾ
ಭಯೋತ್ಪಾದಕರ ಗುರುತು ಪಹಲ್ಗಾಮ್ ದಾಳಿಗೆ ಕಾರಣರಾದವರಂತೆಯೇ ಇದೆ ಎಂದು ಖಚಿತಪಡಿಸಿಕೊಳ್ಳಲು ಭದ್ರತಾ ಪಡೆಗಳು ಹೆಚ್ಚಿನ ಪ್ರಯತ್ನ ಮಾಡಿವೆ ಎಂದು ಸಚಿವರು ಹೇಳಿದರು. ಅವರಿಗೆ ಆಶ್ರಯ ನೀಡಿದವರನ್ನು NIA ಈಗಾಗಲೇ ಬಂಧಿಸಿದೆ. ಅವರಿಗೆ ಆಹಾರ ನೀಡಿದವರನ್ನು ಬಂಧಿಸಲಾಗಿದೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯ ಹಿಂದಿನ ವ್ಯಕ್ತಿ ಸುಲೇಮಾನ್‌ನನ್ನು ಜಂಟಿ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಗಳು ಹತ್ಯೆ ಮಾಡಿವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಗಳವಾರ ಹೇಳಿದ್ದಾರೆ.
ಜಿಬ್ರಾನ್ ಮತ್ತು ಅಫ್ಘಾನಿ ಇಬ್ಬರೂ ‘ಎ’ ವರ್ಗದ ಭಯೋತ್ಪಾದಕರು, ಅಂದರೆ ಅವರು ಭದ್ರತಾ ಸಂಸ್ಥೆಗಳು ಹೆಚ್ಚು ಬಯಸಿದವರಲ್ಲಿ ಸೇರಿದ್ದಾರೆ ಎಂದು ಅಮಿತ್ ಶಾ ಹೇಳಿದರು. ಸುಲೇಮಾನ್ ಪಹಲ್ಗಾಮ್ ದಾಳಿಯ ಪ್ರಮುಖ ಯೋಜಕ ಎಂದು ಅಧಿಕಾರಿಗಳು ದೃಢಪಡಿಸಿದ್ದರು ಮತ್ತು ಭದ್ರತಾ ಪಡೆಗಳ ಯೋಜಿತ ದಾಳಿಯ ಸಮಯದಲ್ಲಿ ಅವರನ್ನು ಕೊಲ್ಲಲಾಯಿತು.
ಪೆಹಲ್ಗಾಂ ಉಗ್ರ ದಾಳಿ
ಜಮ್ಮು ಮತ್ತು ಕಾಶ್ಮೀರದ ಅತ್ಯಂತ ಸುಂದರ ತಾಣ ಪೆಹಲ್ಗಾಂ. ಅತೀ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ. ಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿ, ಕಲ್ಲು ತೂರಾಟ ಪ್ರಕರಣಗಳು ತಗ್ಗಿದ ಬೆನ್ನಲ್ಲೇ ಕಾಶ್ಮೀರದ ಪ್ರವಾಸೋದ್ಯ ಅಭಿವೃದ್ಧಿಗೊಂಡಿತ್ತು. ಹೀಗಾಗಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಆಗಮಿಸುತ್ತಾರೆ. ಎಪ್ರಿಲ್ 22, 2025ರಂದು ಪೆಹಲ್ಗಾಂನಲ್ಲಿ ಭಯೋತ್ಪಾದಕರು ಏಕಾಏಕಿ ಪ್ರವಾಸಿಗರ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಹಿಂದೂಗಳ ಟಾರ್ಗೆಟ್ ಮಾಡಿ ಈ ದಾಳಿ ನಡೆಸಿದ್ದರು. ಪ್ರತಿಯೊಬ್ಬರ ಧರ್ಮ ಕೇಳಿ ಹಿಂದೂ ಎಂದು ಖಚಿತಪಡಿಸಿಕೊಂಡು ದಾಳಿ ನಡೆಸಿದ್ದರು. ಕಟುಂಬದ ಜೊತೆ ಪ್ರವಾಸಕ್ಕೆ ತೆರಳಿದ್ದ ಹಲವು ಕುಟುಂಬಗಳು, ಮಕ್ಕಳು ಅನಾಥರಾಗಿದ್ದರು. ಪುರುಷರನ್ನು ಗುಂಡಿಕ್ಕೆ ಹತ್ಯೆ ಮಾಡಿದರೆ ಇತರರನ್ನು ಬಿಟ್ಟಿದ್ದರು. ಈ ವೇಳೆ ಮೋದಿಗೆ ಹೋಗಿ ಹೇಳು ಎಂದು ಭಯೋತ್ಪಾದಕರು ಸೂಚಿಸಿದ್ದರು. ಪೆಹಲ್ಗಾಂನಲ್ಲಿ 26 ಅಮಾಯಕರು ಮೃತಪಟ್ಟಿದ್ದರು. ಈ ದಾಳಿಗೆ ಪ್ರತಿಯಾಗಿ ಭಾರತ ಆಪರೇಶನ್ ಸಿಂದೂರ್ ಮೂಲಕ ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ಧ್ವಂಸಗೊಳಿಸಿತ್ತು. ಈ ದಾಳಿಯಿಂದ ಭಾರತ ಹಾಗೂ ಪಾಕಿಸ್ತಾನ ನಡುವೆ ಯುದ್ಧ ಆರಂಭಗೊಂಡಿತ್ತು. ಆದರೆ ಭಾರತದ ದಾಳಿಗೆ ಬೆಚ್ಚಿದ ಪಾಕಿಸ್ತಾನ ಕದನ ವಿರಾಮಕ್ಕೆ ಒಪ್ಪಿಕೊಂಡ ಕಾರಣ ಭರಾತ ಯುದ್ಧ ಅಂತ್ಯಗೊಳಿಸಿತ್ತು.
