ದೆಹಲಿ(ಜೂ.27): ರಾಜಧಾನಿ ದೆಹಯಲ್ಲಿ ಕೊರೋನಾ ನಿಯಂತ್ರಣಕ್ಕೆ ಅರವಿಂದ್ ಕೇಜ್ರಿವಾಲ್ ಸರ್ಕಾರಕ್ಕೆ ಕೇಂದ್ರ ಸರ್ಕಾರವೂ ಸಾಥ್ ನೀಡಿದೆ. ಪರಿಸ್ಥಿತಿ ಕೈಮೀರುತ್ತಿರುವ ಕಾರಣ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿದೆ. ದೆಹಲಿಯಲ್ಲಿ ಅತೀ ದೊಡ್ಡ ಕೋವಿಡ್ ಕೇರ್ ಸೆಂಟರ್ ಆರಂಭಿಸಲಾಗಿದೆ. ಸರ್ದಾರ್ ಪಟೇಲ್ ಹೆಸರಿನ ಈ ಚಿಕಿತ್ಸಾ ಕೇಂದ್ರಕ್ಕೆ ಇದೀಗ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಬೇಟಿ ನೀಡಿ ಪರಿಶೀಸಿಲಿದ್ದಾರೆ.

BSYಗೆ ವರದಿ ನೀಡಿದ ಟಾಸ್ಕ್ ಫೋರ್ಸ್ : ಅಂತರ್ ಜಿಲ್ಲಾ ಓಡಾಟಕ್ಕೆ ಬೀಳುತ್ತಾ ಬ್ರೇಕ್?.

ಶುಕ್ರವಾರದಿಂದ(ಜೂ.26) ಸರ್ದಾರ್ ಪಟೇಲ್ ಕೋವಿಡ್ ಕೇರ್ ಸೆಂಟರ್ ಆರಂಭಗೊಂಡಿದೆ. ಹೆಚ್ಚುತ್ತಿರುವ ಕೊರೋನಾ ನಿಯಂತ್ರಿಸಲು ಕೋವಿಡ್ ಕೇರ್ ಸೆಂಟರ್ ಅವಶ್ಯಕವಾಗಿದೆ. ಈ ಕಾರಣದಿಂದ ದಿಢೀರ್ ಆಗಿ ದೆಹಲಿಯಲ್ಲಿ ಕೋವಿಡ್ ಕೇರ್ ಸೆಂಟರ್ ಆರಂಭಿಸಲಾಗಿದೆ. ಈ ಕೇರ್ ಸೆಂಟರ್‌ನಲ್ಲಿ 10,000 ಬೆಡ್ ವ್ಯವಸ್ಥೆ ಮಾಡಲಾಗಿದೆ. ಇದು ಅತೀ ದೊಡ್ಡ ಕೋರೋನಾ ಚಿಕಿತ್ಸಾ ಕೇಂದ್ರ ಅನ್ನೋ ಹೆಗ್ಗಳಿಕೆಗೂ ಪಾತ್ರವಾಗಿದೆ.

 

12,50,000 ಅಡಿ ವಿಸ್ತಾರವಾಗಿ ನೂತನ ಆಸ್ಪತ್ರೆ ಹರಡಿಕೊಂಡಿದೆ. 22 ಫುಟ್ಬಾಲ್ ಮೈದಾನಕ್ಕೆ ಸಮವಾಗಿದೆ.  ಸಿಸಿಟಿವಿ ಕ್ಯಾಮಾರ ಸೇರಿದಂತೆ ಎಲ್ಲಾ ಸುರಕ್ಷತಾ ಕ್ರಮಗಳನ್ನು ಅಳವಡಿಸಲಾಗಿದೆ. ದೆಹಲಿಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಮಿತಿ ಮೀರುತ್ತಿರುವ ಕಾರಣ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗುತ್ತಿದೆ. ಆಧ್ಯಾತ್ಮಿಕ ಕೇಂದ್ರಗಳಲ್ಲೂ ಬೆಡ್ ವ್ಯವಸ್ಥೆ ಮಾಡಲಾಗುತ್ತಿದೆ.