ಕರ್ಫ್ಯೂ ಮಧ್ಯೆ ಪುರಿ ಜಗನ್ನಾಥ ರಥಯಾತ್ರೆ!
* ಕೊರೋನಾ ಹಿನ್ನೆಲೆ ಹೇರಲಾಗಿರುವವ ನಿರ್ಬಂಧ
* 48 ಗಂಟೆಗಳ ಕರ್ಫ್ಯೂ ಮಧ್ಯೆ ಪುರಿ ಜಗನ್ನಾಥ ರಥಯಾತ್ರೆ
* ಸಾರ್ವಜನಿಕರ ಪ್ರವೇಶಕ್ಕೆ ನಿಷೇಧ
ಭುವನೇಶ್ವರ(ಜು.12): ಕೊರೋನಾ ಹಿನ್ನೆಲೆ ಇಂದು ಜುಲೈ 12ರಂದು ನಡೆಯುವ ಪುರಿ ಜಗನ್ನಾಥ ರಥಯಾತ್ರೆ ನಿಮಿತ್ತ ಭಾನುವಾರ ರಾತ್ರಿ 8ರಿಂದ ಮಂಗಳವಾರ ರಾತ್ರಿ 8ರವರೆಗೆ ಕರ್ಫ್ಯೂ ವಿಧಿಸಲಾಗಿದೆ. ಈ ಕರ್ಫ್ಯೂ ಮಧ್ಯೆ ಪುರಿ ಜಗನ್ನಾಥ ರಥಯಾತ್ರೆಗೆ ಎಲ್ಲಾ ರೀತಿಯ ಸಿದ್ಧತೆಗಳು ಪೂರ್ಣಗೊಂಡಿವೆ. ಈಗಾಗಲೇ ಪುರಿಗೆ ಸಂಪರ್ಕಿಸುವ ಎಲ್ಲ ಪ್ರವೇಶದ್ವಾರಗಳನ್ನು ಮುಚ್ಚಲಾಗಿದ್ದು, ರಥಯಾತ್ರೆ ವೇಳೆ ಯಾವುದೇ ಹೋಟೆಲ್ ಮತ್ತು ಲಾಡ್ಜ್‌ಗಳಲ್ಲಿ ಪ್ರವಾಸಿಗರಿಗೆ ಉಳಿದುಕೊಳ್ಳುವ ಅವಕಾಶ ಇಲ್ಲ ಎಂದು ಜಿಲ್ಲಾಧಿಕಾರಿ ಸಮರ್ಥ್ ವರ್ಮಾ ಹೇಳಿದ್ದಾರೆ.
ಅಲ್ಲದೇ ಎಲ್ಲಾ ಖಾಸಗಿ ಅತಿಥಿಗೃಹಗಳು ಮತ್ತು ಕಾರ್ಪೊರೇಟ್ ಅತಿಥಿಗೃಹಗಳಿಗೂ ಇದೇ ಸೂಚನೆ ನೀಡಲಾಗಿದೆ. ಆದರೆ ಸ್ಥಳೀಯರಿಗೆ ಶನಿವಾರ ಕೆಲ ವಿನಾಯ್ತಿಗಳನ್ನು ಸರ್ಕಾರ ನೀಡಿದೆ. ಕೊರೋನಾ ಹಿನ್ನೆಲೆ ಈ ಬಾರಿಯ ವಾರ್ಷಿಕ ರಥೋತ್ಸವದಲ್ಲಿ ಪಾಲ್ಗೊಳ್ಳಲು ಸಾರ್ವಜನಿಕರಿಗಗೆ ನಿರ್ಬಂಧ ಹೇರಲಾಗಿದ್ದು, ಈ ಕಾರ್ಯಕ್ರಮದ ನೇರಪ್ರಸಾರವನ್ನು ಟಿವಿಯಲ್ಲಿ ವೀಕ್ಷಿಸುವಂತೆ ಸರ್ಕಾರ ಮನವಿ ಮಾಡಿದೆ.
ಜನನ್ನಾಥನ ವಾರ್ಷಿಕ ರಥಯಾತ್ರೆ ಶುಕ್ರವಾರ ಆರಂಭವಾಗಿದ್ದು, ಹದಿನಾಲ್ಕು ದಿನಗಳ ಅನಾಸರ ಗೃಹ ವಾಸದ ಬಳಿಕ ಜಗನ್ನಾಥ, ಬಲರಾಮ ಹಾಗೂ ದೇವಿ ಸುಭದ್ರಾ ದರ್ಶನ ಶುಕ್ರವಾರ ಆರಂಭವಾಗಿತ್ತು.