Asianet Suvarna News Asianet Suvarna News

Punjab Elections: ಚುನಾವಣೆಗೂ ಮೊದಲೇ ಸಿಧುಗೆ ಬಿಗ್ ಶಾಕ್, ಸದ್ದು ಮಾಡುತ್ತಿದೆ ಸೋನು ಸೂದ್ ಹೇಳಿಕೆ!

* ಪಂಜಾಬ್ ಚುನಾವಣಾ ಹೊಸ್ತಿಲಲ್ಲಿ ಸಿಧುಗೆ ಬಿಗ್ ಶಾಕ್

* ಸೋನು ಸೂದ್ ಹೇಳಿಕೆಯ ವಿಡಿಯೋ ಬಿಡುಗಡೆ ಮಾಡಿದ ಕಾಂಗ್ರೆಸ್

* ಪಂಜಾಬ್ ಮುಂದಿನ ಸಿಎಂ ಯಾರು ಅನ್ನೋ ಸುಳಿವು ಕೊಟ್ಟ ಪಕ್ಷ

Amid Punjab Tussle Congress Video Stars Chief Minister Channi pod
Author
Bangalore, First Published Jan 18, 2022, 9:14 AM IST

ಚಂಡೀಗಢ(ಜ.18): ಪಂಜಾಬ್‌ನಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಯಲ್ಲಿ (Punjab Election 2022), ಮುಖ್ಯಮಂತ್ರಿ ಹುದ್ದೆಗೆ ಕಾಂಗ್ರೆಸ್ ಈವರೆಗೂ ಯಾರ ಹೆಸರನ್ನು ಘೋಷಿಸಿಲ್ಲ. ಪಕ್ಷದಲ್ಲಿ ನಡೆಯುತ್ತಿರುವ ಕಚ್ಚಾಟವೇ ಇದಕ್ಕೆ ಕಾರಣ. ಕಾಂಗ್ರೆಸ್ ರಾಜ್ಯಾಧ್ಯಕ್ಷ ನವಜೋತ್ ಸಿಂಗ್ ಸಿಧು ಮುಖ್ಯಮಂತ್ರಿಯಾಗುವ ಕನಸು ಕಾಣುತ್ತಿದ್ದಾರೆ. ಇದೇ ವೇಳೆ ಹಾಲಿ ಮುಖ್ಯಮಂತ್ರಿ ಚರಣ್‌ಜಿತ್‌ ಸಿಂಗ್‌ ಚನ್ನಿ ಅವರಿಗೂ ಮುಂದಿನ ಬಾರಿ ಚುನಾವಣೆಯಲ್ಲಿ ಗೆದ್ದರೆ ಸಿಎಂ ಸ್ಥಾನ ಸಿಗುವ ನಿರೀಕ್ಷೆ ಇದೆ. ಇದೆಲ್ಲದರ ನಡುವೆ ಪಕ್ಷದಿಂದ ಇಂತಹ ಸೂಚನೆಗಳು ಬಂದಿದ್ದು ಸಿದ್ದುಗೆ ದೊಡ್ಡ ಪೆಟ್ಟು ನೀಡಿದೆ.

Assembly Elections: 3 ರಾಜ್ಯ ಬಿಜೆಪಿಗೆ, 2 ಅತಂತ್ರ!

ನಟ ಸೋನು ಸೂದ್ ಅವರ ವಿಡಿಯೋವನ್ನು ಕಾಂಗ್ರೆಸ್ ಬಿಡುಗಡೆ ಮಾಡಿದೆ. ವೀಡಿಯೊದಲ್ಲಿ, ಸೋನು ಸಿಎಂ ಚರಣ್‌ಜಿತ್ ಚನ್ನಿ ಅವರೇ ಅರ್ಹರು ಎನ್ನುತ್ತಿರುವುದನ್ನು ಕಾಣಬಹುದು. ಸೋನು ಸೂದ್ ವಿಡಿಯೋದಲ್ಲಿ ಹೇಳಿದ್ದು, ಯಾರು ಸಿಎಂ ಅಭ್ಯರ್ಥಿ ಎಂದು ಹೇಳಬೇಕಾಗಿಲ್ಲ, ಅವರೇ ಸರಿಯಾದ ಮುಖ್ಯಮಂತ್ರಿ. ಬಲವಂತವಾಗಿ ಕುರ್ಚಿಗೆ ಕರೆತಂದವರೇ ನಿಜವಾದ ಮುಖ್ಯಮಂತ್ರಿ. ಅವರೊಬ್ಬ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಅವರಿಗೆ ಹೇಳಬೇಕಾಗಿಲ್ಲ. ಅವರನ್ನು ಹಿಂದಿನಿಂದ ಕರೆತಂದು ನಿಮಗೆ ಅರ್ಹತೆ ಇದೆ, ನೀವು ಸಿಎಂ ಆಗುತ್ತೀರಿ ಎಂದು ಹೇಳಿದರು. ಇಂಥವರು ಸಿಎಂ ಆದರೆ ದೇಶವನ್ನೇ ಬದಲಾಯಿಸಬಲ್ಲರು ಎಂದಿದ್ದಾರೆ.

ವೀಡಿಯೋದಲ್ಲಿ ಚನ್ನಿಯ ದೃಶ್ಯಗಳಿವೆ, ಆದರೆ ಸಿದು ಮಾತ್ರ ಕಾಣಿಸುತ್ತಿಲ್ಲ ನಾಪತ್ತೆಯಾಗಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಸಿದ್ದು ಬದಲು ಸಿಎಂ ಚನ್ನಿಗೆ ಈ ರೀತಿ ಬಡ್ತಿ ನೀಡಿರುವುದು ಇದೇ ಮೊದಲು. ಪಂಜಾಬ್‌ನಲ್ಲಿ ಸೋನು ಸೂದ್ ಸಹೋದರಿ ಮಾಳವಿಕಾ ಸೂದ್ ಕಾಂಗ್ರೆಸ್‌ನಿಂದ ಸ್ಪರ್ಧಿಸುತ್ತಿದ್ದಾರೆ ಎಂಬುವುದು ಉಲ್ಲೇಖನೀಯ. ಅವರಿಗೆ ಮೊಗ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ನೀಡಿದೆ. ಸೋನು ಸೂದ್ ರಾಜಕೀಯದಲ್ಲಿ ಸಕ್ರಿಯವಾಗಿಲ್ಲ, ಆದರೆ ಖಂಡಿತವಾಗಿಯೂ ತಮ್ಮ ಸಹೋದರಿಗಾಗಿ ಮತ ಕೇಳುತ್ತಿದ್ದಾರೆ.

Uttarakhand Elections: ಯಾರಿಗೆ ಅಧಿಕಾರದ ಗದ್ದುಗೆ? ಸರ್ಕಾರದ ಕಾರ್ಯವೈಖರಿಗೆ ಜನರಲ್ಲಿ ಬೇಸರ!

ಸಿಧು ಆರೋಪ

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಕಾಂಗ್ರೆಸ್ ನಾಯಕತ್ವವು ಚನ್ನಿ ಅವರನ್ನು ಸಿಎಂ ಮಾಡಿತು ಎಂಬುವುದು ಗಮನಿಸಬೇಕಾದ ಸಂಗತಿ. ಸಿಎಂ ಚನ್ನಿ ದಲಿತ, ಪಂಜಾಬ್‌ನ ಶೇ.32 ರಷ್ಟು ಪರಿಶಿಷ್ಟ ಜಾತಿ ಮತ ಬ್ಯಾಂಕ್ ಹೊಂದಿದೆ. ದಲಿತರನ್ನು ಸಿಎಂ ಮಾಡುವ ಮೂಲಕ ಚುನಾವಣೆಗೂ ಮುನ್ನ ಕಾಂಗ್ರೆಸ್ ದೊಡ್ಡ ಪಣತೊಟ್ಟಿದೆ. ಮತ್ತೊಂದೆಡೆ ನವಜೋತ್ ಸಿಧು ಅವರು ಸಿಎಂ ಕುರ್ಚಿಗಾಗಿ ನಿರಂತರವಾಗಿ ಪೈಪೋಟಿ ನಡೆಸುತ್ತಿದ್ದಾರೆ. ಪಂಜಾಬ್‌ನ ಒಳಿತು ಮಾರ್ಗಸೂಚಿ ಇರುವವರಿಂದ ಮಾತ್ರ ಸಾಧ್ಯ ಎಂದು ಅವರು ಹಲವು ಬಾರಿ ಹೇಳಿದ್ದಾರೆ.

ಸಿಧು ಹಲವು ಬಾರಿ ಹೈಕಮಾಂಡ್‌ಗೆ ತಮ್ಮ ಧೋರಣೆಯನ್ನು ತೋರಿಸಿದ್ದಾರೆ, ಕಾಂಗ್ರೆಸ್ ಸಿಎಂ ಮುಖವನ್ನು ಘೋಷಿಸಬೇಕು ಎಂದು ಹೇಳಿದ್ದಾರೆ. ಆದರೆ, ಕಾಂಗ್ರೆಸ್ ಹೈಕಮಾಂಡ್ ಈ ಬಾರಿ ಸಿದ್ದು ಅವರ ಒತ್ತಾಯಕ್ಕೆ ಮಣಿಯುತ್ತಿಲ್ಲ. ವಿಧಾನಸಭಾ ಚುನಾವಣೆಗೆ ಮುನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸುವ ಕುರಿತು ಪಂಜಾಬ್ ಕಾಂಗ್ರೆಸ್‌ನಲ್ಲಿ ಕಚ್ಚಾಟದ ನಡುವೆ ಸಿಧು ಅವರು "ಯಾವುದೇ ಹುದ್ದೆಗೆ ಸ್ಪರ್ಧಿಸುತ್ತಿಲ್ಲ" ಎಂದು ಕಳೆದ ಗುರುವಾರ ಹೇಳಿದ್ದರು. ಅವರು ಪಂಜಾಬ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು ಮತ್ತು "ಹತ್ಯೆ ಮತ್ತು ಮಾದಕವಸ್ತು ಪ್ರಕರಣಗಳಲ್ಲಿ ನ್ಯಾಯವನ್ನು ನೀಡಲಾಗುವುದಿಲ್ಲ" ಎಂದು ಹೇಳಿದರು.

Follow Us:
Download App:
  • android
  • ios