ನವದೆಹಲಿ(ಏ.26): ಕೊರೋನಾ ಸೋಂಕು ವ್ಯಾಪಕವಾದ ಬೆನ್ನಲ್ಲೇ, ಮನೆ ಮತ್ತು ಕಚೇರಿಗಳಲ್ಲಿ ಹವಾ ನಿಯಂತ್ರಕ (ಎಸಿ)ಗಳ ಬಳಕೆಯನ್ನು ಬಹುತೇಕ ನಿಷೇಧಿಸಲಾಗಿದೆ. ಆದರೆ ಕೆಲವೆಡೆ ಅನಿವಾರ್ಯವಾಗಿ ಬಳಕೆ ಮಾಡಲಾಗುತ್ತಿದೆಯಾದರೂ, ಹೇಗೆ ಬಳಸಬೇಕೆಂಬ ಗೊಂದಲ ಇದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಶನಿವಾರ ಕೆಲ ಮಾರ್ಗಸೂಚಿ ಬಿಡುಗಡೆ ಮಾಡಿದೆ.

"

ವಾಸಸ್ಥಳದಲ್ಲಿ ಎಸಿ ಉಷ್ಣಾಂಶವನ್ನು 24-30 ಡಿಗ್ರಿ ಸೆಲ್ಸಿಯಸ್‌ನೊಳಗೆ ಕಾಪಾಡಿಕೊಳ್ಳಬೇಕು. ಆದ್ರ್ರತೆ (ಹ್ಯುಮಿಡಿಟಿ) ಶೇ.40ರಿಂದ ಶೇ.70ರಷ್ಟುಇರುವಂತೆ ನೋಡಿಕೊಳ್ಳಬೇಕು. ಎಸಿಯಿಂದ ಹೊರಬರುವ ತಂಪಾದ ಗಾಳಿಯ ಜೊತೆಗೆ ಮನೆಯ ಕಿಟಕಿಯನ್ನು ಸಣ್ಣದಾಗಿ ತೆರೆದಿರುವ ಮೂಲಕ ನೈಸರ್ಗಿಕವಾಗಿ ಶುದ್ಧ ಗಾಳಿ ಒಳಬರುವಂತೆ ಅಶುದ್ಧ ಗಾಳಿ ಹೊರಹೋಗುವಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದೆ.

ಮೇ ಅಂತ್ಯಕ್ಕೆ 2.5 ಲಕ್ಷ ಜನಕ್ಕೆ ವೈರಸ್‌?: ಅಮೆರಿಕಗಿಂತ ಭಾರತದಲ್ಲೇ ಸೋಂಕಿನ ವೇಗ ಅಧಿಕ!

ಇದೇ ವೇಳೆ, ಫ್ಯಾನ್‌ ಬಳಕೆ ವೇಳೆ ಕಿಟಕಿ ತೆರೆದಿಡಬೇಕು. ಕೂಲರ್‌ಗಳನ್ನು ಬಳಸುವ ವೇಳೆ ಅವು ಹೊರಗಿನ ವಾತಾವರಣದಿಂದಲೇ ಗಾಳಿಯನ್ನು ಸೆಳೆದುಕೊಳ್ಳುವಂತೆ ಅಳವಡಿಸಬೇಕು. ಕೂಲರ್‌ ಟ್ಯಾಂಕ್‌ಗಳನ್ನು ಸ್ವಚ್ಛವಾಗಿಡಬೇಕು. ಸೋಂಕು ನಿವಾರಕ ಸಿಂಪಡಿಸಬೇಕು. ಆಗಾಗ್ಗೆ ನೀರನ್ನು ಪೂರ್ಣ ಹೊರತೆಗೆದು, ಮರುಪೂರಣ ಮಾಡಬೇಕು ಎಂದು ಸೂಚಿಸಲಾಗಿದೆ.

- ಉಷ್ಣತೆ ಹೆಚ್ಚಿದ್ದಾಗ 20 ಡಿ.ಸೆ ಉಷ್ಣತೆ, ಶೇ.40ರಷ್ಟುಆದ್ರ್ರತೆ ಕಾಪಾಡಿಕೊಳ್ಳಬೇಕು.

- ಹೊರಗಿನ ವಾತಾವರಣದ ಉಷ್ಣತೆ ಕಡಿಮೆಯಾದಾಗ ಕೊಠಡಿಯಲ್ಲಿ ಎಸಿಯನ್ನು 30 ಡಿ.ಸೆ.ಗೆ ಮತ್ತು ಆದ್ರ್ರತೆ ಶೇ.70 ಇರುವಂತೆ ನೋಡಿಕೊಳ್ಳಬೇಕು.

- ಹೊರಗಿನಿಂದ ಗಾಳಿಯನ್ನು ಸೆಳೆದುಕೊಳ್ಳದ ಸಣ್ಣ ಕೂಲರ್‌ ಬಳಕೆ ಮಾಡದಿರುವುದು ಒಳಿತು. ಕೂಲರ್‌ ಬಳಕೆ ವೇಳೆ ಕಿಟಿಕಿ ತೆರೆದಿಡಬೇಕು.

- ಚೀನಾದ 100 ಕೊರೋನಾ ಸೋಂಕು ಪೀಡಿತ ಪ್ರದೇಶಗಳಲ್ಲಿನ ಅಧ್ಯಯನದ ವೇಳೆ ಗರಿಷ್ಠ ಉಷ್ಣತೆ ಮತ್ತು ಹೆಚ್ಚಿನ ಆದ್ರ್ರ ವಾತಾವರಣವು, ಸೋಂಕು ಹಬ್ಬುವುದಕ್ಕೆ ತಡೆ ಉಂಟು ಮಾಡುತ್ತದೆ ಎಂಬುದು ಕಂಡುಬಂದಿದೆ. 7 ರಿಂದ 8 ಡಿ.ಸೆ. ಉಷ್ಣಾಂಶವು ಗಾಳಿಯಲ್ಲಿ ಹರಡುವ ಸಾಂಕ್ರಾಮಿಕ ರೋಗಾಣುಗಳು ವಾಸ ಮಾಡಲು ಸೂಕ್ತ ವಾತಾವರಣ ಕಲ್ಪಿಸುತ್ತದೆ ಎಂದು ಅಧ್ಯಯನ ಹೇಳಿದೆ.

- 20.5 ರಿಂದ 24 ಡಿ.ಸೆ. ಉಷ್ಣಾಂಶವು ವೈರಸ್‌ಗಳ ಬದುಕುವ ಸಾಮರ್ಥ್ಯವನ್ನು ಕುಂದಿಸುತ್ತದೆ. ಉಷ್ಣಾಂಶವು 30 ಡಿ.ಸೆ.ಗೆ ಹೆಚ್ಚಿದಷ್ಟೂವೈರಸ್‌ಗಳ ಬದುಕುವ ಸಾಮರ್ಥ್ಯ ಇನ್ನಷ್ಟುಕುಸಿಯುತ್ತದೆ.

ಬಿಹಾರ ಕಾರ್ಮಿಕನಿಂದ ಸಮುದಾಯಕ್ಕೆ ಸೋಂಕು?

- ಸಾರ್ಸ್‌ 2 ವೈರಾಣುಗಳು ಮೇಲ್ಮೈನಲ್ಲಿ 4 ಡಿ.ಸೆ.ಉಷ್ಣಾಂಶದಲ್ಲಿ 14 ದಿನಗಳ ಕಾಲ ಜೀವಂತ ಇದ್ದಿದ್ದು ಕಂಡುಬಂದರೆ, 37 ಡಿ.ಸೆ ಉಷ್ಣಾಂಶದಲ್ಲಿ 1 ದಿನ ಜೀವಂತ ಇದ್ದಿದ್ದು ಕಂಡುಬಂದಿತ್ತು.

- ಕೊರೋನಾ ನಿಗ್ರಹದಲ್ಲಿ ಕೊಠಡಿಯ ಒಳಗಿನ ವಾತಾವರಣಕ್ಕೆ ಹೊರಗಿನ ವಾತಾವರಣದ ಗಾಳಿ ಆದಷ್ಟುಬರುವಂತೆ ನೋಡಿಕೊಳ್ಳಬೇಕು. ಈ ವಿಷಯದಲ್ಲಿ ಹವಾನಿಯಂತ್ರಕಗಳು ಹೆಚ್ಚಿನ ಪರಿಣಾಮಕಾರಿ ಎಂದು ಸರ್ಕಾರದ ಮಾರ್ಗಸೂಚಿ ಹೇಳಿದೆ.