Asianet Suvarna News Asianet Suvarna News

ಅಂಬೇಡ್ಕರ್ ಸ್ಮರಿಸಿದ ಪವಾರ್, ನೆರೆ ರಾಷ್ಟ್ರಗಳು ಅತಂತ್ರ, ಸಂವಿಧಾನದಿಂದ ಭಾರತದಲ್ಲಿ ಏಕತೆ!

* ಡಾ ಬಾಬಾಸಾಹೇಬ್ ಭೀಮರಾವ್ ಅಂಬೇಡ್ಕರ್ ಅವರ ಜನ್ಮ ದಿನಾಚರಣೆ

* ಅಂಬೇಡ್ಕರ್ ಜಯಂತಿಯಂದು ಭಾರತ ಸಂವಿಧಾನಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸಿದ ಪವಾರ್

* ನೆರೆ ರಾಷ್ಟ್ರಗಳು ಅತಂತ್ರ, ಸಂವಿಧಾನದಿಂದ ಭಾರತದಲ್ಲಿ ಏಕತೆ

Amid instability in Sri Lanka and Pakistan India stable and united due to Ambedkar Constitution Sharad Pawar pod
Author
Bangalore, First Published Apr 15, 2022, 12:59 PM IST

ಮುಂಬೈ(ಏ.15): ಡಾ ಬಾಬಾಸಾಹೇಬ್ ಭೀಮರಾವ್ ಅಂಬೇಡ್ಕರ್ ಅವರ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು ಭಾರತ ಸಂವಿಧಾನಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸಿದರು. ನೆರೆಯ ರಾಷ್ಟ್ರಗಳಾದ ಶ್ರೀಲಂಕಾ ಮತ್ತು ಪಾಕಿಸ್ತಾನ ಅಸ್ಥಿರತೆಯನ್ನು ಎದುರಿಸುತ್ತಿರುವ ಈ ಸಂದರ್ಭದಲ್ಲಿ ಭಾರತ ಸ್ಥಿರವಾಗಿ ಮತ್ತು ಒಗ್ಗಟ್ಟಿನಿಂದ ಉಳಿದುಕೊಂಡಿರುವುದು ಡಾ.ಬಾಬಾಸಾಹೇಬ್ ಅಂಬೇಡ್ಕರ್ ನೀಡಿದ ಸಂವಿಧಾನದಿಂದ ಎಂದು ಹೇಳಿದರು. ದೇಶಕ್ಕೆ ಬಾಬಾಸಾಹೆಬ್ ನೀಡಿರುವ ಕೊಡುಗೆ ಮರೆಯಲಾಗದು ಮತ್ತು ರಾಜಕೀಯ ದೃಷ್ಟಿಕೋನದಿಂದ ಭಾರತ ಸ್ಥಿರತೆ ಕಾಪಾಡಲು ಅವರ ಕೊಡುಗೆ ಕೆಲಸ ಮಾಡಿದೆ ಎಂದು ಶರದ್ ಪವಾರ್ ಹೇಳಿದರು.

ಬಾಬಾಸಾಹೇಬ್ ಭೀಮರಾವ್ ಅಂಬೇಡ್ಕರ್ ಅವರ 131ನೇ ಜನ್ಮದಿನದ ಅಂಗವಾಗಿ ಮುಂಬೈನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪವಾರ್ ಅವರು ಈ ವಿಚಾರ ಉಲ್ಲೇಖಿಸಿದ್ದಾರೆ. ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್, ರಾಜ್ಯ ಜಲಸಂಪನ್ಮೂಲ ಸಚಿವ ಜಯಂತ್ ಪಾಟೀಲ್ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಶ್ರೀಲಂಕಾ ಅತ್ಯಂತ ಕೆಟ್ಟ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ ಎಂದ ಶರದ್ ಪವಾರ್, ದೇಶದ 22 ಮಿಲಿಯನ್ ಜನರು ವಿದ್ಯುತ್ ಕಡಿತ, ಆಹಾರ, ಇಂಧನ ಮತ್ತು ಔಷಧಿಗಳಂತಹ ಇತರ ಅಗತ್ಯ ವಸ್ತುಗಳ ತೀವ್ರ ಕೊರತೆಯನ್ನು ಎದುರಿಸುತ್ತಿದ್ದಾರೆ ಎಂದು ನೆನಪಿಸಿದರು.

ಈ ಸಂದರ್ಭದಲ್ಲಿ ಅವರು ಪಾಕಿಸ್ತಾನದಲ್ಲಿ ನಡೆಯುತ್ತಿರುವ ದಂಗೆಯ ಬಗ್ಗೆಯೂ ಪ್ರಸ್ತಾಪಿಸಿದರು. ಪಾಕಿಸ್ತಾನವು ಇತ್ತೀಚೆಗೆ ರಾಜಕೀಯ ಕ್ರಾಂತಿಗೆ ಸಾಕ್ಷಿಯಾಗಿದೆ ಎಂದು ಅವರು ಹೇಳಿದರು. ಅಲ್ಲಿನ ಇಮ್ರಾನ್ ಖಾನ್ ಸರ್ಕಾರವನ್ನು ಪ್ರತಿಪಕ್ಷಗಳು ಅವಿಶ್ವಾಸ ಮತದ ಮೂಲಕ ಹೊರಹಾಕಿದವು. ಅದರ ನಂತರ ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ನಾಯಕ ಶಹಬಾಜ್ ಷರೀಫ್ ಅವರು ಖಾನ್ ಬದಲಿಗೆ ನೆರೆಯ ದೇಶದ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡರು.
 
ಭಾರತವು ಮಹಾದ್ವೀಪದಂತಹ ದೇಶವಾಗಿದೆ, ವಿವಿಧ ಜಾತಿಗಳ ಜನರು ವಿವಿಧ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ ಮತ್ತು ವಿವಿಧ ಭಾಷೆಗಳನ್ನು ಮಾತನಾಡುವ ಜನರು ಇಲ್ಲಿ ವಾಸಿಸುತ್ತಿದ್ದಾರೆ. ಆದರೂ ಭಾರತದ ಸ್ಥಿರತೆ ಹಾಗೇ ಉಳಿದಿದೆ. ಇದರ ಹಿಂದೆ ಬಾಬಾಸಾಹೇಬರು ನೀಡಿದ ಸಂವಿಧಾನವಿದೆ. ಅವರ ಸಂವಿಧಾನದಿಂದಲೇ ಈ ದೇಶ ಅಖಂಡವಾಗಿ ಉಳಿದಿದೆ ಎಂದಿದ್ದಾರೆ. 

ದೇಶದ ಆರ್ಥಿಕತೆಗೆ ವೇಗ ನೀಡಲು ಅಂಬೇಡ್ಕರ್ ಅವರ ಕೊಡುಗೆಯನ್ನು ಯಾರೂ ನಿರ್ಲಕ್ಷಿಸಲು ಸಾಧ್ಯವಿಲ್ಲ ಎಂದು ಹೇಳಿದರು. ಅವರು ಸಂವಿಧಾನ ಶಿಲ್ಪಿ ಎಂದೇ ಪ್ರಸಿದ್ಧರಾದರೂ, ಅವರು ಪ್ರಮುಖ ಅರ್ಥಶಾಸ್ತ್ರಜ್ಞರಾಗಿದ್ದರೆಂಬುವುದು ಮರೆಯಲಸಾಧ್ಯ ಎಂದಿದ್ದಾರೆ.

Latest Videos
Follow Us:
Download App:
  • android
  • ios