Asianet Suvarna News Asianet Suvarna News

ಕಾಂಗ್ರೆಸ್‌ ಸೇರೋ ಊಹಾಪೋಹಗಳ ಮಧ್ಯೆ TRS ಬಲಪಡಿಸಲು ಪಿಕೆ ಸಿದ್ಧತೆ, ಸಿಎಂ KCR ಭೇಟಿ!

ಬಿಜೆಪಿ ಸೋಲಿಸಲು ಕಾಂಗ್ರೆಸ್‌ ಸೇರಿ ಹಲವು ಪಕ್ಷಗಳ ಸಿದ್ಧತೆ

ಕಮಲ ಪಾಳಯ ಸೋಲಿಸಲು ಪಿಕೆಗೆ ಮೊರೆ

ಕಾಂಗ್ರೆಸ್‌ ಬೆನ್ನಲ್ಲೇ ಪಿಕೆ ಬೇಟಿಯಾದ 

Amid Congress Prashant Kishor Talks KCR Party Signs Up With IPAC pod
Author
Bangalore, First Published Apr 25, 2022, 6:13 AM IST

ಹೈದರಾಬಾದ್(ಏ.25): ದಕ್ಷಿಣದಲ್ಲಿ ಜಗನ್ಮೋಹನ್ ರೆಡ್ಡಿಗೆ ಆಂಧ್ರದ ಅಧಿಕಾರದ ರುಚಿ ತೋರಿಸಿರುವ ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಕಳೆದ ಎರಡು ದಿನಗಳಿಂದ ಹೈದರಾಬಾದ್‌ನಲ್ಲಿದ್ದು, ತೆಲಂಗಾಣ ಸಿಎಂ ಹಾಗೂ ಟಿಆರ್‌ಎಸ್ ಮುಖ್ಯಸ್ಥ ಕೆ.ಚಂದ್ರಶೇಖರ್ ರಾವ್ ಅವರನ್ನು ಭೇಟಿಯಾಗುತ್ತಿದ್ದಾರೆ. ಪಕ್ಷದ ಮೂಲಗಳ ಪ್ರಕಾರ, ಪ್ರಶಾಂತ್ ಕಿಶೋರ್ ಎರಡೂ ದಿನ ಚಂದ್ರಶೇಖರ ರಾವ್ (ಕೆಸಿಆರ್) ಅವರನ್ನು ಭೇಟಿ ಮಾಡಿದ್ದಾರೆ. ತೆಲಂಗಾಣದಲ್ಲಿ 2018ರಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಈ ಬಾರಿ ಬಿಜೆಪಿ ಪೂರ್ಣ ಪ್ರಮಾಣದಲ್ಲಿ ಟಿಆರ್‌ಎಸ್‌ಗೆ ಸವಾಲೊಡ್ಡಲು ಸಜ್ಜಾಗಿದೆ. ಹಾಗಾಗಿ ಇಲ್ಲಿಯವರೆಗೂ ಬಿಜೆಪಿ ವಿರುದ್ಧ ಗರಂ ಆಗಿದ್ದ ಕೆಸಿಆರ್ ಈಗ ಬಿಜೆಪಿ ವಿರುದ್ಧ ಸಂಪೂರ್ಣವಾಗಿ ತಿರುಗಿ ಬಿದ್ದಿದ್ದು, ರಾಜ್ಯದಲ್ಲಿ ಹಿಡಿತ ಸಾಧಿಸದಂತೆ ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಅವರ ನೆರವು ಪಡೆಯುತ್ತಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕೆಸಿಆರ್ ಗೆ ನೆರವಾಗಲು ಪ್ರಶಾಂತ್ ಕಿಶೋರ್ ಈಗಾಗಲೇ ಸಿದ್ಧತೆ ಆರಂಭಿಸಿದ್ದಾರೆ ಎಂದು ಹೇಳಲಾಗಿದೆ.

ಪ್ರಶಾಂತ್ ಕಿಶೋರ್‌ರನ್ನು ಸ್ನೇಹಿತ ಎಂದು ಕರೆದ ಕೆಸಿಆರ್ 

ಪ್ರಶಾಂತ್ ಕಿಶೋರ್ ಕಾಂಗ್ರೆಸ್ ಸೇರುತ್ತಾರೆ ಎಂಬ ಊಹಾಪೋಹದ ನಡುವೆಯೇ ರಾವ್ ಅವರನ್ನು ಭೇಟಿಯಾಗಿದ್ದಾರೆ. ಕೆಸಿಆರ್ ಎಂದೇ ಜನಪ್ರಿಯವಾಗಿರುವ ಕೆ. ಚಂದ್ರಶೇಖರ್ ರಾವ್ ಮಾರ್ಚ್‌ನಲ್ಲಿ ಕಿಶೋರ್ ದೇಶಾದ್ಯಂತ "ಬದಲಾವಣೆ" ತರಲು ತಮ್ಮೊಂದಿಗೆ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದ್ದರು. ಇನ್ನು ತೆಲಂಗಾಣದಲ್ಲೂ ಇಬ್ಬರೂ ಒಟ್ಟಿಗೆ ಕೆಲಸ ಮಾಡುತ್ತಿದ್ದಾರೆ. ರಾವ್ ಅವರು ಪ್ರಶಾಂತ್ ಕಿಶೋರ್ ಅವರನ್ನು ಕಳೆದ ಏಳು-ಎಂಟು ವರ್ಷಗಳಿಂದ ಅವರ ಆತ್ಮೀಯ ಸ್ನೇಹಿತ ಎಂದು ಬಣ್ಣಿಸಿದರು ಮತ್ತು ಒಂದು ಉದ್ದೇಶಕ್ಕಾಗಿ ಅವರ ಬದ್ಧತೆಯನ್ನು ಶ್ಲಾಘಿಸಿದರು. ರಾವ್ ಅವರು ವಿವಿಧ ಬಿಜೆಪಿಯೇತರ ಪಕ್ಷಗಳನ್ನು ಒಟ್ಟುಗೂಡಿಸುವ ಕೆಲಸ ಮಾಡುತ್ತಿದ್ದಾರೆ.

ಪ್ರಶಾಂತ್ ಕಿಶೋರ್ ಅವರು ಕೆಸಿಆರ್ ಜೊತೆಗಿನ ಚರ್ಚೆಯ ಕುರಿತು ಟಿಆರ್‌ಎಸ್‌ನಿಂದ ಯಾವುದೇ ಅಧಿಕೃತ ಹೇಳಿಕೆ ಇಲ್ಲವಾದರೂ, ಶನಿವಾರ ರಾವ್ ಅವರನ್ನು ಭೇಟಿಯಾದ ಕಿಶೋರ್ ಭಾನುವಾರವೂ ಮಾತುಕತೆ ನಡೆಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಸಂವಾದದಲ್ಲಿ ದೇಶದ ಪ್ರಸ್ತುತ ರಾಜಕೀಯ ಪರಿಸ್ಥಿತಿಯ ಬಗ್ಗೆ ಚರ್ಚಿಸಿದಾಗ, ಕಿಶೋರ್ ಅವರು ತೆಲಂಗಾಣದಲ್ಲಿ ತಮ್ಮ ತಂಡ ನಡೆಸಿದ ಸಮೀಕ್ಷೆಗಳ ವಿವರಗಳನ್ನು ಪ್ರಸ್ತುತಪಡಿಸಿದ್ದಾರೆ ಎಂದು ಹೇಳಲಾಗಿದೆ. 

ರಾಷ್ಟ್ರ ರಾಜಕಾರಣದಲ್ಲಿ ಪಾತ್ರ ವಹಿಸಲು ಕೆಸಿಆರ್ ಸಜ್ಜು

ತೆಲಂಗಾಣದಲ್ಲಿ ಟಿಆರ್‌ಎಸ್‌ನ ಪ್ರಮುಖ ಸ್ಪರ್ಧೆಯು ಕಾಂಗ್ರೆಸ್‌ನೊಂದಿಗಿತ್ತು. ಆದರೆ ಕಳೆದ ಕೆಲವು ವರ್ಷಗಳಲ್ಲಿ ಕಾಂಗ್ರೆಸ್ ಬಹಳಷ್ಟು ದುರ್ಬಲವಾಗಿದೆ. ಕಾಂಗ್ರೆಸ್ ಕಡೆಯಿಂದ ಜನ ಬೇಸ್ ಇರುವ ನಾಯಕರೇ ಇಲ್ಲ. ಕಳೆದ ವರ್ಷದವರೆಗೂ ಬಿಜೆಪಿ ಟಿಆರ್‌ಎಸ್‌ಗೆ ಯಾವುದೇ ಮಹತ್ವದ ಸವಾಲನ್ನು ಒಡ್ಡಿರಲಿಲ್ಲ, ಆದ್ದರಿಂದ ಕೆಸಿಆರ್ ಬಿಜೆಪಿ ವಿರುದ್ಧ ಧ್ವನಿ ಎತ್ತಲಿಲ್ಲ ಆದರೆ ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಯಶಸ್ವಿಯಾಗಿ ಪ್ರಚಾರ ಮಾಡಿದ ರೀತಿಯಲ್ಲಿ ಕೆಸಿಆರ್ ಅವರನ್ನು ಬಿಜೆಪಿಯ ಪ್ರಮುಖ ಪ್ರತಿಸ್ಪರ್ಧಿ ಎಂದು ಪರಿಗಣಿಸಲಾಗಿದೆ. ಕಳೆದ ಕೆಲವು ತಿಂಗಳುಗಳಿಂದ ಕೆಸಿಆರ್ ಕೂಡ ರಾಷ್ಟ್ರ ರಾಜಕಾರಣದಲ್ಲಿ ತಮ್ಮ ಪಾತ್ರವನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.

ಈ ಮೂಲಕ ಅವರು ಮಹಾರಾಷ್ಟ್ರದಲ್ಲಿ ಶರದ್ ಪವಾರ್ ಮತ್ತು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರನ್ನು ಭೇಟಿ ಮಾಡಿದ್ದಾರೆ. ಅವರು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಭೇಟಿ ಮಾಡಿದ್ದಾರೆ. ಕಾಂಗ್ರೆಸ್ ಪ್ರತ್ಯೇಕಿಸಿ ಬಿಜೆಪಿಯೇತರ ಪಕ್ಷಗಳನ್ನು ಒಗ್ಗೂಡಿಸುವ ಹುನ್ನಾರ ನಡೆಸುತ್ತಿದ್ದಾರೆ. ತೆಲಂಗಾಣದಲ್ಲಿ ಯಾವುದೇ ಸಂದರ್ಭದಲ್ಲಿ ದೊಡ್ಡ ಬಹುಮತದೊಂದಿಗೆ ಚುನಾವಣೆಯನ್ನು ಗೆಲ್ಲಲು ಕೆಸಿಆರ್ ಬಯಸಲು ಇದೇ ಕಾರಣ ಮತ್ತು ಈ ಸಂಚಿಕೆಯಲ್ಲಿ ಅವರು ಪ್ರಶಾಂತ್ ಕಿಶೋರ್ ಅವರ ಸಹಾಯವನ್ನು ತೆಗೆದುಕೊಳ್ಳುತ್ತಿದ್ದಾರೆ.

Follow Us:
Download App:
  • android
  • ios