Asianet Suvarna News Asianet Suvarna News

ಮೀನುಗಾರಿಕೆಗೆ ಪ್ರತ್ಯೇಕ ಇಲಾಖೆ ಬೇಕೆಂದು ಪೇಚಿಗೀಡಾದ ರಾಹುಲ್ ಗಾಂಧಿ!

ಮೀನುಗಾರರೊಂದಿಗೆ ಮಾತನಾಡಿ ಅವರನ್ನೇ ಕನ್ಫ್ಯೂಸ್ ಮಾಡಿದ ರಾಹುಲ್ ಗಾಂಧಿ| ಮೀನುಗಾರಿಕೆಯ ಪ್ರತ್ಯೇಕ ಸಚಿವಾಲಯ ಬೇಕೆಂದ ಕಾಂಗ್ರೆಸ್ ನಾಯಕ| 2019ರಲ್ಲೇ ಆರಂಭವಾಗಿದೆ ಈ ಸಚಿವಾಲಯ

Amid Congress Numbers Crisis Rahul Gandhi In Puducherry Ahead Of Polls pod
Author
Bangalore, First Published Feb 17, 2021, 5:35 PM IST

ನವದೆಹಲಿ(ಫೆ.17): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬುಧವಾರ ಪುದುಚೇರಿಗೆ ಭೇಟಿ ನೀಡಿದ್ದಾರೆ. ಚುನಾವಣೆಗೂ ಮುನ್ನ ಜನರನ್ನು ಓಲೈಸುವ ಸಲುವಾಗಿ ಭೆಟಿ ನಿಡಿದ್ದು, ಈ ವೇಳೆ ಅಲ್ಲಿನ ಮೀನುಗಾರರನ್ನೂ ರಾಹುಲ್ ಗಾಂಧಿ ಭೇಟಿಯಾಗಿದ್ದಾರೆ. ಆದರೆ ಈ ಸಂದರ್ಭದಲ್ಲಿ ತಮ್ಮ ಮಾತುಗಳು ತಮಗೇ ತಿರುಗುಬಾಣವಾಗಬಹುದೆಂಬ ನಿರೀಕ್ಷೆಯೂ ಅವರಿಗಿರಲಿಲ್ಲ.

ಅಷ್ಟಕ್ಕೂ ರಾಹುಲ್ ಗಾಂಧಿ ಹೇಳಿದ್ದೇನು?

ಮೀನುಗಾರರನ್ನು ಭೇಟಿಯಾದ ರಾಹುಲ್ ಗಾಂಧಿ, ಕೇಂದ್ರ ಸರ್ಕಾರವು ದೇಶದ ಬೆನ್ನೆಲುಬಾಗಿರುವ ರೈತರ ವಿರುದ್ಧ ಮೂರು ಕೃಷಿ ಕಾನೂನುಗಳನ್ನು ಜಾರಿಗೊಳಿಸಿದೆ. ಆದರೆ ಮೀನುಗಾರರನ್ನು ಭೇಟಿಯಾಗುವ ವೇಳೆ ನಾನು ರೈತರ ಬಗ್ಗೆ ಯಾಕೆ ಮಾತನಾಡುತ್ತಿದ್ದೇನೆಂಬ ಯೋಚನೆ ನಿಮಗೆ ಬರಬಹುದು. ವಾಸ್ತವವಾಗಿ ನಾನು ನಿಮ್ಮನ್ನು ಕಡಲ ರೈತನಾಗಿ ನೋಡುತ್ತೇನೆ. ರೈತರಿಗಾಗಿ ದೆಹಲಿಯಲ್ಲಿ ಪ್ರತ್ಯೇಕ ಸಚಿವಾಲಯ ಇದೆ ಎಂದಾದರೆ ಕಡಲ ರೈತರಿಗೆ ಯಾಕಿಲ್ಲ? ಎಂದು ಪ್ರಶ್ನಿಸಿದ್ದಾರೆ.

'ಅಮೇಠಿಯಲ್ಲಿ ತಿರಸ್ಕೃತಗೊಂಡು ಕೇರಳಕ್ಕೆ ಗುಳೆ, ರಾಹುಲ್‌ ವಲಸಿಗ ನಾಯಕ'

2019ರಲ್ಲೇ ಆರಂಭಗೊಂಡಿದೆ ಸಚಿವಾಲಯ

ಬಹುಶಃ ರಾಹುಲ್ ಗಾಂಧಿಗೆ ಮೀನುಗಾರಿಕೆ ಸಂಬಂಧ ಒಂದು ಸಚಿವಾಲಯ ಇದೆ ಎಂಬ ವಿಚಾರ ತಿಳಿದಿರಲಿಲ್ಲವೇನೋ., ಆದರೆ ಮೋದಿ ಸರ್ಕಾರ 2019 ರಲ್ಲೇ ಪಶುಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕೆ ಸಚಿವಾಲಯವನ್ನು ರಚಿಸಿದೆ. ಬೆಗುಸರೈ ಸಂಸದ ಗಿರಿರಾಜ್ ಸಿಂಗ್ ಇದರ ಸಚಿವರಾಗಿದ್ದಾರೆ.

ಇಟಾಲಿಯನ್ ಭಾಷೆಯಲ್ಲಿ ಟ್ವೀಟ್ ಮಾಡಿದ ಸ್ಮೃತಿ ಇರಾನಿ ಹಾಗೂ ಗಿರಿರಾಜ್ ಸಿಂಗ್

ರಾಹುಲ್ ಗಾಂಧಿ ಈ ಹೇಳಿಕೆ ಬೆನ್ನಲ್ಲೇ ಸಚಿವ ಗಿರಿರಾಜ್ ಸಿಂಗ್ ಇಟಾಲಿಯನ್ ಭಾಷೆಯಲ್ಲಿ ಟ್ವೀಟ್ ಮಾಡಿದ್ದು, 'ಇಟಲಿಯಲ್ಲಿ ಮೀನುಗಾರಿಕೆಗೆ ಸಂಬಂಧಿಸಿದಂತೆ ಯಾವುದೇ ಪ್ರತ್ಯೇಕ ಸಚಿವಾಲಯ ಇಲ್ಲ. ಅಲ್ಲಿ ಈ ಕ್ಷೇತ್ರ ಕೃಷಿ ಮತ್ತು ಅರಣ್ಯ ಸಚಿವಾಲಯದ ಅಡಿಯಲ್ಲಿ ಬರುತ್ತದೆ' ಎಂದಿದ್ದಾರೆ.

ಇನ್ನು ಅತ್ತ ಕೇಂದ್ರ ಸಚಿವೆ ಸ್ಮೃತಿ ಇರಾನಿ ಕೂಡಾ ಈ ಬಗ್ಗೆ ಟ್ವಿಟ್ ಮಾಡಿದ್ದು ಅವರು ಕೇವಲ ಒಂದೇ ವಿಚಾರ ತಿಳಿದಿದ್ದಾರೆ. ಸುಳ್ಳು, ಭಯ ಹಾಗೂ ತಪ್ಪು ಮಾಹಿತಿ ಹರಡುವುದಷ್ಟೇ ತಿಳಿದಿದೆ ಎಂದಿದ್ದಾರೆ. 

Follow Us:
Download App:
  • android
  • ios