ಅಮೆರಿಕದಿಂದ ಅತ್ಯಾಧುನಿಕ ಹೆಲಿಕಾಪ್ಟರ್ ಸ್ವೀಕರಿಸಿದ ಭಾರತ ಭಾರತೀಯ ನೌಕಾದಳಕ್ಕೆ MH-60R ಹೆಲಿಕಾಪ್ಟರ್ ಸೇರ್ಪಡೆ

ದೆಹಲಿ(ಜು.17): ಭಾರತ ಮತ್ತು ಅಮೆರಿಕ ನಡುವಿನ ರಕ್ಷಣಾ ಸಂಬಂಧವನ್ನು ಇನ್ನಷ್ಟು ಬಲಪಡಿಸುವ ನಿಟ್ಟಿನಲ್ಲಿ ಅಮೆರಿಕ ಭಾರತಕ್ಕೆ ಅತ್ಯಾಧುನಿಕ ಎರಡು MH-60R ಮಲ್ಟಿ ರೋಲ್ ಹೆಲಿಕಾಪ್ಟರ್‌ಗಳನ್ನು ಹಸ್ತಾಂತರಿಸಿದೆ. ಈ ಮೂಲಕ ಭಾರತದ ನೌಕಾದಳಕ್ಕೆ ಮತ್ತಷ್ಟು ಬಲ ಬಂದಿದೆ.

ಅಮೆರಿಕ ಸರ್ಕಾರದಿಂದ ವಿದೇಶಿ ಶಸ್ತ್ರ ಮಾರಾಟದಡಿಯಲ್ಲಿ ಭಾರತ ಲೋಖೀಡ್ ಮಾರ್ಟಿನ್ ನಿರ್ಮಿಸಿದ 24 ಹೆಲಿಕಾಪ್ಟರ್‌ಗಳನ್ನು ಭಾರತ ಸಂಗ್ರಹಿಸುತ್ತಿದೆ. ಇದಕ್ಕೆ ಸುಮಾರು 2.4 ಮಿಲಿಯನ್ ಡಾಲರ್ ವ್ಯಯಿಸಲಾಗುತ್ತಿದೆ.

ಒಬ್ಬ ಬಾಲಕಿಯನ್ನು ರಕ್ಷಿಸಲು ಹೋಗಿ ಬಾವಿಗೆ ಬಿದ್ದ 40 ಜನ

ಸಮಾರಂಭದಲ್ಲಿ ಈ ಹೆಲಿಕಾಪ್ಟರ್‌ಗಳನ್ನು ಯುಎಸ್ ನೇವಿಯಿಂದ ಭಾರತೀಯ ನೌಕಾಪಡೆಗೆ ಔಪಚಾರಿಕವಾಗಿ ವರ್ಗಾಯಿಸಲಾಗಿದ್ದು, ಇದನ್ನು ಅಮೆರಿಕದ ಭಾರತೀಯ ರಾಯಭಾರಿ ತಾರಂಜಿತ್ ಸಿಂಗ್ ಸಂಧು ಒಪ್ಪಿಕೊಂಡಿದ್ದಾರೆ ಎಂದು ಭಾರತೀಯ ನೌಕಾಪಡೆಯ ವಕ್ತಾರರು ತಿಳಿಸಿದ್ದಾರೆ.

ಲೋಖೀಡ್ ಮಾರ್ಟಿನ್ ಕಾರ್ಪೊರೇಷನ್ ತಯಾರಿಸಿದ MH-60R ಹೆಲಿಕಾಪ್ಟರ್ಗಳು ಎಲ್ಲಾ ಹವಾಮಾನದಲ್ಲಿ ಬಳಸುವ ಹೆಲಿಕಾಪ್ಟರ್ ಆಗಿದ್ದು, ಅತ್ಯಾಧುನಿಕ ಏವಿಯಾನಿಕ್ಸ್ ಮತ್ತು ಸಂವೇದಕಗಳೊಂದಿಗೆ ಅನೇಕ ಕಾರ್ಯಗಳನ್ನು ಬೆಂಬಲಿಸಲು ವಿನ್ಯಾಸಗೊಳಿಸಲಾಗಿದೆ.

Scroll to load tweet…

ಈ 24 ಹೆಲಿಕಾಪ್ಟರ್‌ಗಳನ್ನು ವಿದೇಶಿ ಮಿಲಿಟರಿ ಮಾರಾಟದ ಚೌಕಟ್ಟಿನಡಿಯಲ್ಲಿ ಅಮೆರಿಕ ಸರ್ಕಾರದಿಂದ ಭಾರತ ಖರೀದಿಸುತ್ತಿದೆ. ಹೆಲಿಕಾಪ್ಟರ್‌ಗಳನ್ನು ಹಲವಾರು ಭಾರತ-ವಿಶಿಷ್ಟ ಉಪಕರಣಗಳು ಮತ್ತು ಶಸ್ತ್ರಾಸ್ತ್ರಗಳೊಂದಿಗೆ ಮಾರ್ಪಡಿಸಲಾಗುತ್ತದೆ.