Asianet Suvarna News Asianet Suvarna News

ಆಂಧ್ರದ ಚರ್ಚ್, ಸಿಎಂ ಮೂಲಕ ಮೋದಿ ಸರ್ಕಾರ ಉರುಳಿಸಲು ಅಮೆರಿಕ CIA ತಂತ್ರ, ರಷ್ಯಾ ವರದಿ!

ಆಂಧ್ರ ಪ್ರದೇಶದ ಬ್ಯಾಪ್ಟಿಸ್ಟ್ ಚರ್ಚ್, ಸಿಎಂ ಚಂದ್ರಬಾಬು ನಾಯ್ಡು, ವಿಪಕ್ಷಗಳ ಪ್ರಮುಖ ನಾಯಕರ ಮೂಲಕ ಪ್ರಧಾನಿ ಮೋದಿ ಸರ್ಕಾರ ಉರುಳಿಸಲು ಅಮರಿಕ ಗುಪ್ತಚರ ಇಲಾಖೆ  CIA ತೆರೆ ಮರೆಯ ಕಸರತ್ತು ನಡೆಸುತ್ತಿರುವ ಕುರಿತು ರಷ್ಯಾದ ಸರ್ಕಾರಿ ಅಧಿಕೃತ ಮಾಧ್ಯಮ ವರದಿ ಮಾಡಿದೆ. ಈ ವರದಿ ಇದೀಗ ಕೋಲಾಹಲ ಸೃಷ್ಟಿಸಿದೆ.

America cia try to topple PM Modi govt with help of andhra church CM naidu says Russia report ckm
Author
First Published Aug 18, 2024, 8:17 PM IST | Last Updated Aug 18, 2024, 8:17 PM IST

ನವದೆಹಲಿ(ಆ.18) ಪ್ರಧಾನಿ ನರೇಂದ್ರ ಮೋದಿ ಜಾಗತಿಕ ನಾಯಕನಾಗಿ ಬೆಳೆದು ನಿಂತಿದ್ದಾರೆ. ಮೋದಿ ಮಾತನ್ನು ಜಗತ್ತಿನ ಬಹುತೇಕ ಎಲ್ಲಾ ದೇಶಗಳು ಕೇಳುತ್ತದೆ ಅನ್ನೋ ಅಭಿಪ್ರಾಯವಿದೆ. ಯಾವುದೇ ವಿದೇಶಗಳ ಶಕ್ತಿಗೆ ಭಾರತ ಮಣಿಯುವುದಿಲ್ಲ. ವಿರೋಧದ ನಡುವೆಯೂ ರಷ್ಯಾದಿಂದ ತೈಲ ಸೇರಿದಂತೆ ಹಲವು ವಿದೇಶಾಂಗ ನೀತಿಗಳು ಅಮೆರಿಕ ಸೇರಿದಂತೆ ಕೆಲ ದೇಶಗಳ ಕೆಂಗಣ್ಣಿಗೆ ಗುರಿಯಾಗಿದೆ. ತಮ್ಮ ತಾಳಕ್ಕೆ ಕುಣಿಯುತ್ತಿಲ್ಲ ಅನ್ನೋ ಕಾರಣಕ್ಕೆ ಮೋದಿ ಸರ್ಕಾರವನ್ನೇ ಉರುಳಿಸಲು ಅಮೆರಿಕದ ಗೂಢಚರ್ಯೆ CIA ತೆರೆ ಮರೆಯಲ್ಲಿ ಭಾರಿ ಪ್ರಯತ್ನ ನಡೆಸುತ್ತಿರುವುದು ಇದೀಗ ಬಯಲಾಗಿದೆ. ಆಂಧ್ರ ಪ್ರದೇಶದ ಬ್ಯಾಪ್ಟಿಸ್ಟ್ ಚರ್ಚ್ ಹಾಗೂ ವಿಪಕ್ಷ ನಾಯಕರ ಸಂಪರ್ಕದಲ್ಲಿರುವ CIA , ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ದು ನೆರವು ಪಡೆದು ಮೋದಿ ಸರ್ಕಾರ ಉರುಳಿಸಲು ಭಾರಿ ಸಂಚು ರೂಪಿಸಿರುವ ಕುರಿತು ರಷ್ಯಾದ ಸರ್ಕಾರಿ ಮಾಧ್ಯಮ ಸ್ಫುಟ್ನಿಕ್ ವರದಿ ಮಾಡಿದೆ.

ಸ್ಫುಟ್ನಿಕ್ ಮಾಧ್ಯಮದ ವರದಿ ಇದೀಗ ಕೋಲಾಹಲ ಸೃಷ್ಟಿಸಿದೆ. ಬಾಂಗ್ಲಾದೇಶ ಸರ್ಕಾರ ಉರುಳಿಸಿದ ಆರೋಪ ಅಮೆರಿಕ ಮೇಲಿದೆ. ಇದರ ಬೆನ್ನಲ್ಲೇ ಬಿಜೆಪಿ ಸರ್ಕಾರ ಬೀಳಿಸಲು ಅಮೆರಿಕ CIA ಪ್ರಯತ್ನ ನಡೆಸುತ್ತಿರುವ ಕುರಿತು ಸ್ಫುಟ್ನಿಕ್ ವರದಿ ಮಾಡಿದೆ. ಇದಕ್ಕೆ ಕೆಲ ಘಟನೆಗಳನ್ನು ಉಲ್ಲೇಖಿಸಿದೆ. ಅಮೆರಿಕ ರಾಯಭಾರಿ ಹಾಗೂ ಕೆಲ ಅಧಿಕಾರಿಗಳು ಮೇಲಿಂದ ಮೇಲೆ ಭಾರತದ ವಿಪಕ್ಷ ನಾಯಕರ ಜೊತೆ ಸಭೆ ನಡೆಸುತ್ತಿರುವ ಕುರಿತು ರಷ್ಯಾ ಮಾಧ್ಯಮ ಕಳವಳ ವ್ಯಕ್ತಪಡಿಸಿದೆ.

ಬಾಂಗ್ಲಾದೇಶದ ನಿರ್ಗಮಿತ ಪ್ರಧಾನಿ ಶೇಖ್‌ ಹಸೀನಾ ಸ್ಫೋಟಕ ಹೇಳಿಕೆ! ಹಿಂಸಾಚಾರದ ಹಿಂದೆ ಅಮೆರಿಕ ಕೈವಾಡ!

ರಷ್ಯಾ ಮಾಧ್ಯಮ ಹೇಳುವಂತೆ, ಶೀಘ್ರದಲ್ಲೇ ಮೋದಿ ಸರ್ಕಾರದ ವಿರುದ್ದ ಅವಿಶ್ವಾಸ ನಿರ್ಣಯ ಮಂಡನೆ ಪ್ರಮೇಯ ಎದುರಾಗಲಿದೆ. ಇದಕ್ಕಾಗಿ ಭಾರಿ ಪ್ರಯತ್ನಗಳು ನಡೆಯುತ್ತಿದೆ. ವಿಪಕ್ಷ ನಾಯಕರ ಜೊತೆ ನಿರಂತರ ಸಂಪರ್ಕದಲ್ಲಿರುವ ಅಮೆರಿಕ CIA, ಕೆಲ ನಾಯಕರ ಭೇಟಿಯಾಗಿ ಮಾತುಕತೆ ನಡೆಸಿದೆ ಎಂದು ವರದಿ ಮಾಡಿದೆ. ಅಮೆರಿಕ ಕಾನ್ಸುಲೇಟ್ ಜನರಲ್ ಜೆನ್ನಿಫರ್ ಲಾರ್ಸೆನ್ ಇತ್ತೀಚೆಗೆ ಹೈದರಾಬಾದ್‌ನಲ್ಲಿ ಎಐಎಂಐಎಂ ನಾಯಕ ಅಸಾದುದ್ದೀನ್  ಒವೈಸಿ ಭೇಟಿಯಾಗಿದ್ದಾರೆ. ಇದಕ್ಕೂ ಮೊದಲು ಮುಖ್ಯಮಂತ್ರಿ ಚಂದ್ರಬಾಬು ನಾಯ್ದು ಭೇಟಿಯಾಗಿದ್ದಾರೆ. ಇಷ್ಟೇ ಅಲ್ಲ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಭೇಟಿಯಾಗಿ ಮಾತುಕತೆ ನಡೆಸಿದ್ದರೆ. ಇವೆಲ್ಲವನ್ನೂ ರಷ್ಯಾ ಮಾಧ್ಯಮ ತನ್ನ ವರದಿಯಲ್ಲಿ ಉಲ್ಲೇಖಿಸಿದೆ ಲಾರ್ಸೆನ್ ಹೈದರಾಬಾದ್‌ನಲ್ಲಿ ಅಮೆರಿಕ ಮಿಷನ್ ಸಂಸ್ಥೆ ಮುನ್ನಡೆಸುತ್ತಿದ್ದಾರೆ. ಈ ಸಂಸ್ಥೆ ಮೂಲಕ ಬ್ಯಾಪ್ಟಿಸ್ಟ್ ಚರ್ಚ್ ನೆರವು ಪಡೆಯಲು ಅಮೆರಿಕ ಗುಪ್ತಚರ ಇಲಾಖೆ CIA ಪ್ರಯತ್ನಿಸುತ್ತಿದೆ ಎಂದು ವರದಿ ಮಾಡಿದೆ.

ವಿಪಕ್ಷಗಳ ಕೆಲ ನಾಯಕರ ಜೊತೆ  CIA ನಿರಂತರ ಸಂಪರ್ಕದಲ್ಲಿದೆ. ಮೋದಿ ಸರ್ಕಾರದ ವಿರುದ್ಧ ಜನತೆಗೆ ಅವಿಶ್ವಾಸ ಬರುವಂತೆ ಸಂದರ್ಭಗಳನ್ನು ಸೃಷ್ಟಿಸುವ ಪ್ರಯತ್ನಗಳು ನಡೆಯುತ್ತಲೇ ಇದೆ ಎಂದು ಸ್ಫುಟ್ನಿಕ್ ವರದಿ ಮಾಡಿದೆ. ಚಂದ್ರಬಾಬು ನಾಯ್ದು ಸಹಾಯ ಪಡೆದು ಬೆಂಬಲ ವಾಪಸ್ ಪಡೆಯುವಂತೆ ಮಾಡುವುದು  CIA ಮೊದಲ ಗುರಿಯಾಗಿದೆ. ಬ್ಯಾಪ್ಟಿಸ್ಟ್ ಚರ್ಚ್ ಮೂಲಕ ಚಂದ್ರಬಾಬು ನಾಯ್ಡು ತೆಕ್ಕೆಗೆ ತೆಗೆದುಕೊಳ್ಳುವ ಪ್ರಯತ್ನ ನಡೆಯುತ್ತಿದೆ. ಈ ಗುರಿ ಜೊತೆಗೆ ನಾಯ್ಡು ಬೆಂಬಲ ವಾಪಸ್ ಪಡೆಯಲು ಹಿಂದೇಟು ಹಾಕಿದರೆ ಪೂರಕ ವಾತಾವರಣ ಸೃಷ್ಟಿಸಲು ವಿಪಕ್ಷಗಳಿಗೆ ಸೂಚನೆ ನೀಡಲಾಗಿದೆ  ಎಂದು ವರದಿ ಮಾಡಿದೆ. ವಿಪಕ್ಷಗಳನ್ನು ಅಮೆರಿಕ ಕಾನ್ಸಲೇಟ್ ಜನರಲ್, ಡಿಪ್ಲೋಮ್ಯಾಟ್ ಭೇಟಿ ಮಾಡುವುದೇ ಕಳವಳಕ್ಕೆ ಕಾರಣ ಎಂದು ರಷ್ಯಾ ಮಾಧ್ಯಮ ಹೇಳಿದೆ. 

ಮೋದಿ ವಿರುದ್ಧವಿರುವ ನಾಯಕರು, ಸಾಮಾಜಿಕ ಕಾರ್ಯಕರ್ತರು, ಸೋಶಿಯಲ್ ಮೀಡಿಯಾ ಪ್ರವರ್ತಕರು, ಉದ್ಯಮಿಗಳು, ಸೆಲೆಬ್ರೆಟಿಗಳು ಸೇರಿದಂತೆ ಹಲವರನ್ನು ವ್ಯವಸ್ಥಿತವಾಗಿ ಈ ಕಾರ್ಯಾಚರಣೆಗೆ ಬಳಸಿಕೊಳ್ಳಲಾಗುತ್ತಿದೆ ಎಂದು ರಷ್ಯಾ ಹೇಳುತ್ತಿದೆ.  2024ರ ಜುಲೈ ತಿಂಗಳಲ್ಲಿ ಭಾರತದಲ್ಲಿರುವ ಅಮೆರಿಕ ರಾಯಭಾರ ಕಚೇರಿ ಇನ್‌ಫ್ಲುಯೆನ್ಸ್ ಟು ಇಂಪಾಕ್ಟ್( ಪ್ರಭಾವದ ಪರಿಣಾಮ) ಅನ್ನೋ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಈ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಪ್ರೋಪಗಾಂಡಗಳನ್ನು ಪ್ರಚಾರ ಮಾಡುವ, ಅರ್ಧ ಸತ್ಯಗಳನ್ನು ಯೂಟ್ಯೂಬ್ ಮೂಲಕ ಹೇಳಿಕೆ ಮೋದಿ ಸರ್ಕಾರದ ವಿರುದ್ಧ ಕಾರ್ಯನಿರ್ವಹಿಸುವ ಅಭಿಷೇಕ್ ಬ್ಯಾನರ್ಜಿಯನ್ನು ಕರೆಸಿತ್ತು ಎಂದು ರಷ್ಯಾದ ಸ್ಫುಟ್ನಿಕ್ ವರದಿ ಮಾಡಿದೆ.

ಗಾಜಾದ ನಾಗರಿಕರ ಬಗ್ಗೆ ಇದ್ದ ಕಾಳಜಿ ಬಾಂಗ್ಲಾದೇಶ ಹಿಂದೂಗಳ ಮೇಲೆ ಯಾಕಿಲ್ಲ? ರಾಹುಲ್ ಗಾಂಧಿ ಸೈಲೆಂಟ್!

ಭಾರತದಲ್ಲಿದ್ದುಕೊಂಡು ಹಿಂದೂ ಹಬ್ಬಗಳು, ಆಚರಣೆಗಳು, ದೇವರುಗಳ ವಿರುದ್ಧ ಮಾತನಾಡುವ, ಭಾರತ ವಿರೋಧಿ ನಿಲುವ ತಳೆದಿರುವ ಆರ್‌ಜೆ ಸಯೇಮಾಗೆ ಭಾರತದಲ್ಲಿರುವ ಅಮೆರಿಕ ರಾಯಭಾರ ಕಚೇರಿ ಸಮಾನತೆಯ ರಾಯಭಾರಿ ಎಂಬ ಬಿರುದು ನೀಡಿ ಗೌರವಿಸಿತ್ತು. ಇವೆಲ್ಲಾ  ವ್ಯವಸ್ಥಿತವಾಗಿ ಮೋದಿ ಸರ್ಕಾರದ ವಿರುದ್ಧ ಭಾರತದ ಜನರನ್ನೇ ದಂಗೆ ಏಳಿಸುವ ಪ್ರಯತ್ನದ ಭಾಗವಾಗಿದೆ ಎಂದು ಸ್ಫುಟ್ನಿಕ್ ವರದಿ ಮಾಡಿದೆ.  
 

Latest Videos
Follow Us:
Download App:
  • android
  • ios