ನವದೆಹಲಿ(ಜು.10): ಕಾರ್ಮಿಕರ ನಿಯಮ ತಿದ್ದುಪಡಿ ಕುರಿತು ವಿರೋಧ ಪಕ್ಷಗಳ ಟೀಕೆ, ಆರೋಪಗಳಿಗೆ ತಿರುಗೇಟು ನೀಡಲು ಕೇಂದ್ರ ಸರ್ಕಾರ ಇದೀಗ ಹಲವು ಬದಲಾವಣೆಯೊಂದಿಗೆ ಕಾನೂನು ಜಾರಿಗೆ ತರಲು ನಿರ್ಧರಿಸಿದೆ. ಇದರಲ್ಲಿ ತಿಂಗಳ ಸಂಬಳ ಪಡೆಯುವ ನೌಕರರಿಗೆ ಕನಿಷ್ಠ ವೇತನ ನಿಗದಿ ಮಾಡಲು ಸರ್ಕಾರ ನಿರ್ಧರಿಸಿದೆ. ಈ ಮೂಲಕ ಬರೋಬ್ಬರಿ 50 ಕೋಟಿ ನೌಕರರಿಗೆ ನೆರವಾಗಲಿದೆ.

ಏಷ್ಯಾದ ಅತೀ ದೊಡ್ಡ ಸೋಲಾರ್ ಪ್ಲಾಂಟ್ ಉದ್ಘಾಟಿಸಿದ ಮೋದಿ!.

ಕಂಪನಿಗಳು, ಕೈಗಾರಿಗಳು, ಕಚೇರಿ ಸೇರಿದಂತೆ ಹಲವೆಡೆ ಸರಿಯಾದ ವೇತನ, ನಿಗದಿತ ವೇತನ ನೀಡದೆ ಸತಾಯಿಸುವ ಹಲವು ಪ್ರಕರಣಗಳು ಇವೆ. ಹೀಗಾಗಿ ಕೇಂದ್ರ ಸರ್ಕಾರ ಕನಿಷ್ಠ ವೇತನ ನಿಯಮದಲ್ಲಿ ತಿದ್ದು ಪಡಿ ಮಾಡುತ್ತಿದೆ. ಸದ್ಯದ ಅವಶ್ಯಕತೆ, ರೂಪಾಯಿ ಮೌಲ್ಯ, ಮೂಲಭೂತ ಸೌಕರ್ಯ ಸೇರಿದಂತೆ ಹಲವು ವಿಚಾರ ಗಮನದಲ್ಲಿಟ್ಟು ಕನಿಷ್ಠ ವೇತನ ನಿಗದಿ ಮಾಡಲಿದೆ. ಇದರಿಂದ ಭಾರತದ 50 ಕೋಟಿ ನೌಕರರಿಗೆ ಸಹಾಯವಾಗಲಿದೆ.

ಆರ್ಥಿಕ ಚೇತರಿಕೆಯಲ್ಲಿ ಭಾರತವೇ ಮುಂಚೂಣಿ: ಬಂಡವಾಳ ಹೂಡಲು ಮೋದಿ ಕರೆ!

ದೇಶದಲ್ಲೆಡೆ ಏಕರೂಪದ ಕಾರ್ಮಿಕರ ಕಾನಾನು ಜಾರಿಗೆ ಬರಲಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕನಿಷ್ಠ ವೇತನ ನಿಗದಿ ಮಾಡಲಿದೆ. ಇನ್ನುಳಿದಂತೆ ಕಾರ್ಮಿಕರ ನಿಯಮಲ್ಲಿ ಹಲವು ತಿದ್ದುಪಡಿಗಳು ಆಗಲಿವೆ. ಕಳೆದ ವರ್ಷ ಮಂಡಿಸಲಾಗಿದ್ದ ಕಾರ್ಮಿಕರ ನಿಯಮ ತಿದ್ದಪಡಿಗೆ ಹಲವು ವಿರೋಧಗಳು ಕೇಳಿ ಬಂದಿತ್ತು. ಇದೀಗ ತಜ್ಞರು, ಕಾರ್ಮಿಕರ ಸಂಘಟನೆ ಹಾಗೂ ವಿರೋಧ ಪಕ್ಷಗಳ ಸಲಹೆ ಪಡೆದು ಸಮರ್ಥ ಕಾನೂನು ಜಾರಿಯಾಗಲಿದೆ.