ವೈದ್ಯರು ಮೃತ ಎಂದು ಖಚಿತಪಡಿಸಿದ ವ್ಯಕ್ತಿಗೆ ಪುನರ್ಜನ್ಮ ನೀಡಿದ ಆ್ಯಂಬುಲೆನ್ಸ್ ಬ್ರೇಕ್!
ಸತ್ತ ವ್ಯಕ್ತಿ ಅಂತ್ಯಸಂಸ್ಕಾರದ ವೇಳೆ ಎದ್ದ ಘಟನೆಗಳು ಹಲವು ಬಾರಿ ವರದಿಯಾಗಿದೆ. ಇದೀಗ ವ್ಯಕ್ತಿ ಮೃತ ಎಂದು ವೈದ್ಯರು ದೃಡಪಡಿಸಿದ್ದಾರೆ. ಆದರೆ ಆ್ಯಂಬುಲೆನ್ಸ್ ವಾಹನದ ಸ್ಪೀಡ್ ಬ್ರೇಕ್ ಇದೇ ಸತ್ತ ವ್ಯಕ್ತಿಗೆ ಪುನರ್ಜನ್ಮ ಕೊಟ್ಟ ಘಟನೆ ವರದಿಯಾಗಿದೆ.
ಕೊಲ್ಹಾಪುರ(ಜ.02) ಹಲವು ಬಾರಿ ವ್ಯಕ್ತಿ ಮೃತ ಎಂದು ವೈದ್ಯರು ತಪಾಸಣೆ ನಡೆಸಿ ಖಚಿತಪಡಿಸಿದ ಬಳಿಕ ಅಂತ್ಯಸಂಸ್ಕಾರದ ವೇಳೆ ಮತ್ತೆ ಬದುಕಿ ಬಂದ ಹಲವು ಘಟನೆಗಳು ನಡೆದಿದೆ. ಈ ಮೂಲಕ ಹೊಸ ಬದುಕಿ ಆರಂಭಿಸಿದ ಹಲವರಿದ್ದಾರೆ. ಇದೀಗ 65 ವರ್ಷಗ ವ್ಯಕ್ತಿ ತೀವ್ರ ಹೃದಯಾಘಾತದಿಂದ ಆಸ್ಪತ್ರೆ ದಾಖಲಿಸಲಾಗಿತ್ತು. ಆದರೆ ತಪಾಸಣೆ ನಡೆಸಿದ ವೈದ್ಯರು ವ್ಯಕ್ತಿ ಮೃತಪಟ್ಟಿದ್ದಾರೆ ಎಂದು ದೃಢಪಡಿಸಿದ್ದಾರೆ. ಆದರೆ ಈ ವ್ಯಕ್ತಿಗೆ ಆ್ಯಂಬುಲೆನ್ಸ್ ವಾಹನದ ಸ್ಪೀಡ್ ಬ್ರೇಕ್ ಪುನರ್ಜನ್ಮ ನೀಡಿದ ಘಟನೆ ಮಹಾರಾಷ್ಟ್ರೀಯ ಕೋಲ್ಹಾಪುರದಲ್ಲಿ ನಡೆದಿದೆ. ಕಸಾಬಾ ಬಾವಾಡದ ನಿವಾಸಿಯಾಗಿರುವ 65 ವರ್ಷದ ಪಾಂಡುರಂಗ ಉಲ್ಪೆ ಪುನರ್ಜನ್ಮ ಪಡೆದು ಹೊಸ ಬದುಕು ಆರಂಭಿಸಿದ್ದಾರೆ. ಇವೆಲ್ಲಾ ವಿಠಲ ಭಗಂವತನ ಕೃಪೆ ಎಂದು ಪಾಂಡುರಂಗ ಹೇಳಿದ್ದಾರೆ.
ಆಗಿದ್ದೇನು?
15 ದಿನಗಳ ಹಿಂದೆ ನಡೆದುಕೊಂಡು ಮನೆಗೆ ಬಂದ ಪಾಂಡುರಂಗ ಕೆಲ ಹೊತ್ತು ವಿಶ್ರಾಂತಿ ಪಡೆಯಲು ಮುಂದಾಗಿದ್ದಾರೆ. ಚಹಾ ಹೀರುತ್ತಾ ಕುಳಿತಿದ್ದ ಪಾಂಡುರಂಗಗೆ ಉಸಿರಾಟ ಸಮಸ್ಯೆ, ತಲೆ ಸುತ್ತು ಶುರುವಾಗಿದೆ. ಬಾತ್‌ರೂಂಗೆ ತೆರಳಿದ ಪಾಂಡುರಂಗ ಬಿದ್ದಿದ್ದಾರೆ. ಬಳಿಕ ಏನಾಗಿದೆ ಅನ್ನೋದು ಪಾಂಡುರಂಗ ತಿಳಿದಿಲ್ಲ. ಅಷ್ಟೊತ್ತಿಗೆ ಕುಟುಂಬಸ್ಥರು ಆರೋಗ್ಯ ಹಾಗೂ ಅಪಾಯದ ತೀವ್ರತೆ ಅರಿತಿದ್ದಾರೆ. ತಕ್ಷಣವೇ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ರಸ್ತೆ ಗುಂಡಿಯಲ್ಲಿ ಬಿದ್ದು ಸಾಗಿದ ಆ್ಯಂಬುಲೆನ್ಸ್‌ನಲ್ಲಿ ಪವಾಡ, ಒಳಗಿದ್ದ ಮೃತದೇಹಕ್ಕೆ ಬಂತು ಜೀವ!
ಖಾಸಗಿ ಆಸ್ಪತ್ರೆ ಕೆಲ ದೂರದಲ್ಲಿದ್ದ ಕಾರಣ ದಾಖಲಿಸಲು 30ಗಂಟೆಗೂ ಹೆಚ್ಚು ಸಮಯ ಹಿಡಿದಿದೆ. ಅಷ್ಟೊತ್ತಿಗೆ ಪಾಂಡುರಂಗ ಅವರ ಶರೀರ ತಣ್ಣಗಾಗಿದೆ. ಯಾವುದೇ ಪ್ರತಿಕ್ರಿಯೆ ಇಲ್ಲದಾಗಿದೆ. ಎಮರ್ಜೆನ್ಸಿ ವಾರ್ಡ್‌ಗೆ ಕರೆದೊಯ್ದು ಚಿಕಿತ್ಸೆಗೆ ಮುಂದಾಗಿದ್ದಾರೆ. ಆದರೆ ತಪಾಸಣೆ ನಡೆಸಿದ ವೈದ್ಯರು ಪಾಂಡುರಂಗ ಮೃತಪಟ್ಟಿರುವುದಾಗಿ ಖಚಿತಪಡಿಸಿದ್ದಾರೆ. ಕೆಲ ಪರೀಕ್ಷೆಗಳನ್ನು ಮಾಡಿದ್ದಾರೆ. ತೀವ್ರ ಹೃದಯಾಘತದಿಂದ ಮೃತಪಟ್ಟಿರುವುದಾಗಿ ವೈದ್ಯರು ದೃಡಪಡಿಸಿದ್ದಾರೆ. ಕುಟುಂಬಸ್ಥರು ಕಣ್ಣೀರಿಟ್ಟಿದ್ದಾರೆ. ಪಾಂಡುರಂಗ ಪತ್ನಿ ಮತ್ತಷ್ಟು ಆತಂಕೊಂಡಿದ್ದಾರೆ. ಕರೆ ಮಾಡಿ ಮಕ್ಕಳು ಹಾಗೂ ಸಂಬಧಿಕರಿಗೆ ಮಾಹಿತಿ ನೀಡಿದ್ದಾರೆ. 45 ನಿಮಿಷದಲ್ಲಿ ಪಾಂಡುರಂಗ ಅವರ ಸಂಬಂಧಿಕರು ಆಗಮಿಸಿದ್ದಾರೆ. ಆಸ್ಪತ್ರೆಯ ಆ್ಯಂಬುಲೆನ್ಸ್ ಮೂಲಕ ಪಾಂಡುರಂಗ ಅವರ ಶರೀರವನ್ನು ಮರಳಿ ಮನೆಗೆ ತರಲು ಮುಂದಾಗಿದ್ದಾರೆ. ಮನೆಯಲ್ಲಿ ಸಂಬಂಧಿಕರು ಸೇರಿದ್ದಾರೆ. ಅಂತ್ಯಸಂಸ್ಕಾರಕ್ಕೆ ತಯಾರಿ ನಡೆಸಿದ್ದಾರೆ.
ಆ್ಯಂಬುಲೆನ್ಸ್ ಸ್ಪೀಡ್ ಬ್ರೇಕ್ ಕೊಟ್ಟ ಪುನರ್ಜನ್ಮ
ವೇಗವಾಗಿ ಆ್ಯಂಬುಲೆನ್ಸ್ ಪಾಂಡುರಂಗ ಅವರ ಮನೆಯತ್ತ ಸಾಗಿತ್ತು. ಇದರ ನಡುವೆ ಆ್ಯಂಬುಲೆನಸ್ ಚಾಲಕ ತುರ್ತು ಕಾರಣದಿಂದ ದಿಢೀರ್ ಬ್ರೇಕ್ ಹಾಕಿದ್ದ. ಸಡನ್ ಬ್ರೇಕ್‌ನಿಂದ ಪಾಂಡುರಂಗ ಶರೀರದ ಪಕ್ಕದಲ್ಲಿ ಕುಳಿತಿದ್ದ ಪತ್ನಿ ಹಾಗೂ ಇತರರು ಇದ್ದ ಜಾಗದಿಂದ ಕದಲಿದ್ದಾರೆ. ಇದೇ ವೇಳೆ ಪಾಂಡುರಂಗ ಅವರ ಕೈಗಳು ಚಲಿಸುತ್ತಿರುವುದನ್ನು ಪತ್ನಿ ಗಮನಿಸಿದ್ದಾರೆ.
ತಕ್ಷಣವೇ ಆ್ಯಂಬುಲೆನ್ಸ್ ನಿಲ್ಲಿಸಲು ಹೇಳಿದ್ದಾರೆ. ಆ್ಯಂಬುಲೆನ್ಸ್‌ನಲ್ಲಿದ್ದ ಚಾಲಕ ಹಾಗೂ ಇತರ ಸಿಬ್ಬಂದಿ ಧಾವಿಸಿದ್ದಾರೆ. ಈ ವೇಳೆ ಪಾಂಡುರಂಗ ದೇಹದಲ್ಲಿ ಚಲನವಲ ಇರುವುದು ಪತ್ತೆಯಾಗಿದೆ. ತಕ್ಷಣವೇ ಬೇರೆ ಆಸ್ಪತ್ರೆಗೆ ದಾಖಲಿಸುವಂತೆ ಪಾಂಡುರಂಗ ಪತ್ನಿ ಸೂಚಿಸಿದ್ದಾರೆ. ಅಲ್ಲಿಂದಲೇ ವಾಪಸ್ ಜಿಲ್ಲೆ ಬೇರೊಂದು ಆಸ್ಪತ್ರೆಗೆ ಪಾಂಡುರಂಗ ಅವರನ್ನು ದಾಖಲಿಸಲಾಗಿದೆ.
ಮಗು ಮೃತ ಎಂದು ಘೋಷಿಸಿದ ವೈದ್ಯರು, ಅಂತ್ಯಸಂಸ್ಕಾರಕ್ಕೂ ಕೆಲವೇ ನಿಮಿಷ ಮೊದಲು ಪವಾಡ!
ಪಾಂಡುರಂಗ ಅವರಿಗೆ ಆ್ಯಂಜಿಯೋಪ್ಲಾಸ್ಟಿ ಸೇರಿದಂತೆ ಕೆಲ ಶಸ್ತ್ರಚಿಕಿತ್ಸೆ ಮಾಡಲಾಗಿದೆ. 14 ದಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಪಾಂಡುರಂಗ 15 ದಿನ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ನಡೆದುಕೊಂಡೇ ಹೊರಬಂದು ಆಟೋ ಹತ್ತಿ ಮನೆಗೆ ಮರಳಿದ್ದಾರೆ. ಇವೆಲ್ಲವೂ ವಿಠಲನ ಕೃಪೆ. ದೇವರು ನನಗೆ ನೀಡಿದ ಎರಡನೇ ಜನ್ಮ ಎಂದು ಪಾಂಡುರಂಗ ಹೇಳಿದ್ದಾರೆ. 10 ದಿನಗಳಲ್ಲಿ ಏನಾಗಿದೆ ಅನ್ನೋದೇ ನೆನಪಿಲ್ಲ ಎಂದಿದ್ದಾರೆ.