ಮುಂಬೈ(ಜೂ.07):  ಕೊರೋನಾ ವೈರಸ್ ಸಂದರ್ಭವನ್ನೇ ಬಳಸಿಕೊಂಡು ತಮಗಾಗಿರುವ ನಷ್ಟ ಭರಿಸಲು ಹಲವರು ಮುಂದಾಗಿದ್ದಾರೆ. ಮುಂಬೈನಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದರ ನಡುವೆ ಹಲವರು ಸೂಕ್ಕ ಚಿಕಿತ್ಸೆಗಾಗಿ ಅಲೆದಾಡುವ ಪರಿಸ್ಥಿತಿ ಬಂದೊದಗಿದೆ. ಹೀಗೆ ಒಂದು ಆಸ್ಪತ್ರೆಯಿಂದ 200 ಮೀಟರ್ ಕೂಗಳತೆ ದೂರದಲ್ಲಿರುವ ಮತ್ತೊಂದು ಆಸ್ರತ್ರೆ ತೆರಳಲು ಖಾಸಗಿ ಆ್ಯಂಬುಲೆನ್ಸ್ ಬರೋಬ್ಬರಿ 8000 ರೂಪಾಯಿ ತೆಗೆದುಕೊಂಡಿದ್ದಾರೆ.

ಚಿಕಿತ್ಸೆಗಾಗಿ ಕೋರ್ಟ್‌ಗೆ ಹೋಗಿದ್ದ ವೃದ್ಧ ಅರ್ಜಿ ವಿಚಾರಣೆ ಮುನ್ನ ಸಾವು!.

ಕುರ್ಲಾ ನಿವಾಸಿ ಜೂನ್ 1 ರಂದು ಕೊರೋನಾ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡ ಕಾರಣ ಕುರ್ಲಾದ ಹಬೀಬ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹಬೀಬ್ ಆಸ್ಪತ್ರೆಯಲ್ಲಿ ತಪಾಸಣೆಯಲ್ಲಿ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಆದರೆ ಹಬೀಬ್ ಆಸ್ಪತ್ರೆಯಲ್ಲಿ ಕೊರೋನಾ ಸೋಂಕಿನ ಚಿಕಿತ್ಸೆ ಇಲ್ಲದ ಕಾರಣ ಕುಟುಂಬ ಸದಸ್ಯರಲ್ಲಿ ಸೋಂಕಿತೆಯನ್ನು ಹತ್ತಿದ ಆಸ್ಪತ್ರೆಗೆ ಕರೆದೊಯ್ಯಲು ಸೂಚಿಸಿದ್ದಾರೆ.

ಲಾಕ್‌ಡೌನ್ ಸಡಿಲ: ದೇಶದಲ್ಲಿ ಒಂದೇ ತಿಂಗಳಲ್ಲಿ 2 ಲಕ್ಷ ಜನಕ್ಕೆ ವೈರಸ್‌!..

ಕುಟುಂಬ ಸದಸ್ಯರಿಗೆ ಸರ್ಕಾರಿ ಆ್ಯಂಬುಲೆನ್ಸ್ ಸೇವೆ ಪಡೆಯಲು ಪ್ರಯತ್ನಿಸಿದ್ದಾರೆ. ಆದರೆ ಯಾವುದೇ ಸರ್ಕಾರಿ ಆ್ಯಂಬುಲೆನ್ಸ್ ಸೇವೆ ಲಭ್ಯವಿರಲಿಲ್ಲ. ಹೀಗಾಗಿ ಖಾಸಗಿ ಆ್ಯುಂಬುಲೆನ್ಸ್ ಬುಕ್ ಮಾಡಿದ್ದಾರೆ. ಕೊರೋನಾ ಸೋಂಕಿತೆಯನ್ನು  200 ಮೀಟರ್ ದೂರದಲ್ಲಿರುವ ಫೌಝಿಯಾ ಆಸ್ಪತ್ರೆಗೆ ಆ್ಯುಂಬುಲೆನ್ಸ್ ಮೂಲಕ ದಾಖಲಿಸಲಾಯಿತು.  ಕುಟುಂಬ ಸದ್ಯರ ಬಳಿ ಆ್ಯಂಬುಲೆನ್ಸ್ ಚಾಲಕ 10,000 ರೂಪಾಯಿ ಕೇಳಿದ್ದಾನೆ. ಈ ಮೊತ್ತ ಕೇಳಿ ಬೆಚ್ಚಿ ಬಿದ್ದ ಕುಟುಂಬ ಸದಸ್ಯರು ಕಡಿಮೆ ಮಾಡಲು ಮನವಿ ಮಾಡಿದ್ದಾರೆ. ಬಳಿಕ 8000 ರೂಪಾಯಿ ಪಡೆದಿದ್ದಾನೆ.

ಕುಟುಂಬ ಸದಸ್ಯರು ಚಾಲಕನ ಸಂಪೂರ್ಣ ಸಂಭಾಷಣೆಯನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಈ ವಿಡಿಯೋ ವೈರಲ್ ಆಗತ್ತಿದ್ದಂತೆ ಆ್ಯಂಬುಲೆನ್ಸ್ ಮಾಲೀಕ ಮೊಹಮ್ಮದ್ ಇಸ್ಮಾಯಿಲ್ ದುಬಾರಿ ಚಾರ್ಜ್ ಸಮರ್ಥಿಸಿಕೊಂಡಿದ್ದಾನೆ. ಕಳೆದೆರಡು ತಿಂಗಳಿನಿಂದ ನಮಗೆ ನಷ್ಟವಾಗಿದೆ. ಹೀಗಾಗಿ ಸಿಕ್ಕ ಬಾಡಿಗೆಯಲ್ಲಿ ವಸೂಲಿ ಮಾಡಲಿದ್ದೇವೆ ಎಂದಿದ್ದಾರೆ.