ಅಹಮದಾಬಾದ್[ಜ.04]: ‘ಭಾರತದ ಸಂವಿಧಾ ನದ ಕರಡು ರಚನೆಯ ಶ್ರೇಯಸ್ಸನ್ನು ಬ್ರಾಹ್ಮ ಣರಾಗಿದ್ದ ಬಿ.ಎನ್. ರಾವ್ ಅವರಿಗೆ ಸಂವಿಧಾನ ಶಿಲ್ಪಿ ಬಿ.ಆರ್. ಅಂಬೇಡ್ಕರ್ ನೀಡಿದ್ದರು’ ಎಂದು ಗುಜರಾತ್ ವಿಧಾನ ಸಭಾಧ್ಯಕ್ಷ ರಾಜೇಂದ್ರ ತ್ರಿವೇದಿ ಹೇಳಿದರು. ಅಧಿಕಾರಿಯಾಗಿದ್ದ ರಾವ್ ಅವರು ಕರ್ನಾಟಕದ ಮಂಗಳೂರು ಮೂಲದವರು ಎಂಬುದು ವಿಶೇಷ.

'ಬುದ್ಧ, ಬಸವ, ಅಂಬೇಡ್ಕರ್‌ ಓಡಿಸಿದವರಿಂದ ಬಿಜೆಪಿಗೆ ಓಟು'

ಸಮ್ಮೇಳನದಲ್ಲಿ ಮಾತನಾಡಿದ ಅವರು, ‘ಭಾರತದ ಸಂವಿಧಾನ ರಚಿಸಲು 60 ದೇಶ ಗಳ ಸಂವಿಧಾನ ಅಧ್ಯಯನ ಮಾಡಲಾಯಿತು ಎಂಬುದು ನಿಮಗೆ ಗೊತ್ತೇ? ಸಂವಿಧಾನದ ಕರಡನ್ನು ಅಂಬೇಡ್ಕರ್ ಅವರಿಗೆ ನೀಡಿದ್ದು ಯಾರು ಎಂಬುದು ಗೊತ್ತೇ? ಸಂವಿಧಾನ ಎಂದರೆ ನಾವೆಲ್ಲ ಅಂಬೇಡ್ಕರ್ ಅವರನ್ನು ನೆನೆಯುತ್ತೇವೆ ಎಂದಿದ್ದಾರೆ.

ಅಲ್ಲದೇ ಸಂವಿಧಾನದ ಕರಡು ಸಿದ್ಧಪಡಿಸಿದ್ದು ಬ್ರಾಹ್ಮಣ ರಾದ ಬೆನೆಗಲ್ ನರಸಿಂಗರಾವ್ ಅವರು ಎಂದು ಅಂಬೇಡ್ಕರ್ ಅವರೇ ಹೇಳಿದ್ದರು. ಅಂಬೇಡ್ಕರ್‌ರನ್ನು ಮುಂದಕ್ಕೆ ತಂದು ಅವರ ಹಿಂದಿದ್ದವರೇ ರಾವ್. 1949ರ ನವೆಂಬರ್ ೨೫ರ ತಮ್ಮ ಭಾಷಣದಲ್ಲಿ ಅಂಬೇಡ್ಕರ್ ಅವರೇ ಈ ವಿಚಾರವನ್ನು ಒಪ್ಪಿಕೊಂಡಿದ್ದರು ಎಂದು ಹೇಳಿದ್ದಾರೆ.

ಸಿಂದಗಿಯಲ್ಲಿ ಗುಂಪು ಘರ್ಷಣೆ: ಅಂಬೇಡ್ಕರ್‌ ಮೂರ್ತಿ ಭಗ್ನ