ಮುಂಬೈ(ಮಾ.05) ಬಾಂಬ್ ಸ್ಫೋಟಕ ತುಂಬಿದ್ದ ಕಾರನ್ನು ಅಂಬಾನಿ ಮನೆ ಮುಂದೆ ನಿಲ್ಲಿಸಿ ಸ್ಫೋಟಿಸಲು ಸಂಚು ರೂಪಿಸಿದ್ದ ಪ್ರಕರಣ ಇದೀಗ ಹಲವು ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಕಳೆದೆರಡು ದಿನದ ಹಿಂದ ಈ ಘಟನೆ ಹೊಣೆ ಹೊತ್ತು ಕಳುಹಿಸಿದ್ದ ಜೈಶ್ ಉಲ್ ಹಿಂದ್ ಉಗ್ರ ಸಂಘಟನೆ ಪತ್ರ ನಕಲಿ ಎಂದು ಪೊಲೀಸರು ಬಹಿರಂಗಪಡಿಸಿದ್ದರು.  ಇದರ ಬೆನ್ನಲ್ಲೇ ಇದೀಗ ಈ ಸ್ಫೋಟಕ ತುಂಬಿದ್ದ ಕಾರಿನ ಮಾಲೀಕ ಮೃತಪಟ್ಟಿರುವುದಾಗಿ ಪೊಲೀಸರು ಖಚಿತಪಡಿಸಿದ್ದಾರೆ.

ಮುಕೇಶ್‌ ಅಂಬಾನಿ ಮನೆ ಬಳಿ ಸ್ಫೋಟಕ ಇಟ್ಟಿದ್ದ ಕಾರು ಪತ್ತೆ...

ಉದ್ಯಮಿ ಮುಕೇಶ್ ಅಂಬಾನಿ ನಿವಾಸದ ಬಳಿ ಸ್ಕಾರ್ಪಿಯೋ ಕಾರಿನಲ್ಲಿ ಸ್ಪೋಟಕ ತುಂಬಿ ನಿಲ್ಲಿಸಲಾಗಿತ್ತು. ಈ ಸ್ಫೋಟಕ ತುಂಬಿದ್ದ ಕಾರನ್ನು ಪತ್ತೆ ಹಚ್ಚಿ ಬಹುದೊಡ್ಡ ಅನಾಹುತ ತಪ್ಪಿಸಲಾಗಿತ್ತು. ಬಳಿಕ ಈ ಘಟನೆ ಹಿಂದೆ ಯಾರಿದ್ದಾರೆ ಅನ್ನೋ ತನಿಖೆ ಆರಂಭಗೊಂಡಿತ್ತು. ಇದರ ನಡುವೆ ಹೊಣೆ ಹೊತ್ತಿದ್ದ ಜೈಶ್ ಉಲ್ ಹಿಂದ್ ಉಗ್ರ ಸಂಘಟನೆ ಪತ್ರವೇ ನಕಲಿ ಎಂದು ಬಹಿರಂಗವಾದ ಬೆನ್ನಲ್ಲೇ ಇದೀಗ ಸ್ಕಾರ್ಪಿಯೋ ಮಾಲೀಕ ಮನ್ಸುಖ್ ಹಿರೆನ್ ಸಾವನ್ನಪ್ಪಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ

ಇದು ಟ್ರೇಲರ್, ಬಾಂಬ್ ಇಟ್ಟು ಕೊಲ್ಲುತ್ತೇವೆ‌: ಅಂಬಾನಿ ಕುಟುಂಬಕ್ಕೆ ಜೀವ ಬೆದರಿಕೆ!.

ಕಾರ್ ಮಾಲೀಕ ಮನ್ಸುಖ್ ಶವ ಥಾಣೆಯ ರೈಲ್ವೇ ಕ್ರೀಕ್ ಬಳಿ ಪತ್ತೆಯಾಗಿತ್ತು. ಥಾಣೆಯ ಕಲ್ವಾ ಕ್ರೀಕ್ ಸೇತುವೆ ಮೇಲಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ ಎಂದು ಥಾಣೆ ಪೊಲೀಸಲು ಅನುಮಾನ ವ್ಯಕ್ತಪಡಿಸಿದ್ದಾರೆ. 

ಜೈಶ್ ಉಲ್ ಹಿಂದ್ ಅಸಲಿ ಸಂಘಟನೆ ಈ ಘಟನೆಗೂ ತಮಗೂ ಸಂಬಂಧ ಇಲ್ಲ ಎಂಬ ಹೇಳಿಕೆ ನೀಡಿತ್ತು. ಹೀಗಾಗಿ ಈ ಮೊದಲು ಕಳುಹಿಸಿದ್ದ ಪತ್ರದಲ್ಲಿ ಬಿಟ್‌ಕಾಯಿನ್ ಮೂಲಕ ಹಣಪಾವತಿಗೆ ಒತ್ತಾಯಿಸಿದ್ದ ಜೈಶ್ ಉಲ್ ಹಿಂದ್ ಸಂಘಟನೆ ನಕಲಿ ಎಂದು ಸಾಬೀತಾಗಿತ್ತು. ಈ ಬೆಳವಣಿಗೆಗಳ ನಡುವೆ ಕಾರು ಮಾಲೀಕನ ಸಾವು ಇದೀಗ ಹಲವು ಅನುಮಾನಗಳಿಗೆ ಕಾರಣವಾಗುತ್ತಿದೆ.