ರಿಲಯನ್ಸ್ ಅಧ್ಯಕ್ಷ ಮುಖೇಶ್ ಅಂಬಾನಿ ಕಿರಿಯ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್‌ ವಿವಾಹ ಪೂರ್ವ ಕಾರ್ಯಕ್ರಮಗಳು ಭರ್ಜರಿಯಾಗಿ ನಡೆಯುತ್ತಿದ್ದು, ಅದರ ಬೆನ್ನಲ್ಲೇ ತಮ್ಮ ಮಗ ಮತ್ತು ಸೊಸೆಗೆ ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ದಂಪತಿ ಭರ್ಜರಿ ಉಡುಗೊರೆ ನೀಡಿದ್ದಾರೆ.  

ಮುಂಬೈ (ಜು.08): ರಿಲಯನ್ಸ್ ಅಧ್ಯಕ್ಷ ಮುಖೇಶ್ ಅಂಬಾನಿ ಕಿರಿಯ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್‌ ವಿವಾಹ ಪೂರ್ವ ಕಾರ್ಯಕ್ರಮಗಳು ಭರ್ಜರಿಯಾಗಿ ನಡೆಯುತ್ತಿದ್ದು, ಅದರ ಬೆನ್ನಲ್ಲೇ ತಮ್ಮ ಮಗ ಮತ್ತು ಸೊಸೆಗೆ ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ದಂಪತಿ ಭರ್ಜರಿ ಉಡುಗೊರೆ ನೀಡಿದ್ದಾರೆ. ಅನಂತ್‌ ಜೋಡಿಗೆ ದುಬೈನ ಪಾಮ್‌ ಜುಮೈರಾದಲ್ಲಿರುವ ಬರೋಬ್ಬರಿ ₹640 ಕೋಟಿ ಮೌಲ್ಯದ ವಿಲ್ಲಾ ಉಡುಗೊರೆಯಾಗಿ ನೀಡಲಾಗಿದೆ ಎಂದು ವರದಿಗಳು ತಿಳಿಸಿವೆ. 

ಇದು ದುಬೈನ ಅತಿ ದುಬಾರಿ ವಿಲ್ಲಾಗಳ ಪೈಕಿ ಒಂದಾಗಿದ್ದು, ಬರೋಬ್ಬರಿ 3 ಸಾವಿರ ಚದರ ಅಡಿ ಪ್ರದೇಶದಲ್ಲಿ ನಿರ್ಮಾಣವಾಗಿದೆ. 10 ಬೆಡ್‌ರೂಂ, ಹಲವು ಕೊಠಡಿ, 70 ಮೀ. ಉದ್ದದ ಖಾಸಗಿ ಬೀಚ್‌ ಜೊತೆಗೆ ಅತ್ಯಾಕರ್ಷಕ ಒಳಾಂಗಣ ವಿನ್ಯಾಸವನ್ನು ಈ ವಿಲ್ಲಾ ಹೊಂದಿದೆ ಎನ್ನಲಾಗಿದೆ. ಅನಂತ್‌ ಮತ್ತು ರಾಧಿಕಾ ಜು.12ರಂದು ಮುಂಬೈನಲ್ಲಿ ವಿವಾಹವಾಗಲಿದ್ದಾರೆ.

ಹಾಡಿ ರಂಜಿಸಿದ ಬೀಬರ್‌: ರಿಲಯನ್ಸ್‌ ಮುಖ್ಯಸ್ಥ ಮುಕೇಶ್‌ ಅಂಬಾನಿ ಅವರ ಪುತ್ರ ಅನಂತ್‌ ಅಂಬಾನಿ ಹಾಗೂ ರಾಧಿಕಾ ಮರ್ಚಂಟ್‌ ಅವರ ವಿವಾಹ ಪೂರ್ವ ಸಮಾರಂಭದಲ್ಲಿ ಪ್ರಖ್ಯಾತ ಪಾಪ್ ಗಾಯಕ ಜಸ್ಟಿನ್‌ ಬೀಬರ್‌ ಶುಕ್ರವಾರ ಸಂಗೀತ ಸುಧರ ಹರಿಸಿ ರಂಜಿಸಿದರು. ಬೀಬರ್‌ ಅವರು ಬೇಬಿ, ಪೀಚಸ್‌ , ಲವ್‌ ಯುವರ್‌ ಸೆಲ್ಫ್‌ ಹಾಗೂ ಸಾರಿ ಎಂಬ ಹಿಟ್‌ ಗೀತೆಗಳನ್ನು ಹಾಡಿದರು. ‘ಸಂಗೀತ್‌’ ಸಮಾರಂಭದಲ್ಲಿ ಪ್ರದರ್ಶನ ನೀಡಲು ಜಸ್ಟಿನ್‌ ಬರೋಬ್ಬರಿ 83 ಕೋಟಿ ರು. ಸಂಭಾವನೆ ಪಡೆದಿದ್ದರು ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದ್ದವು.

ಕೋಟಿ ಕುಳನಾದ್ರೂ ಭಾರತದಲ್ಲಿ ಮದ್ವೆ ಆಗ್ತಿರೋದ್ಯಾಕೆ? ಮಗನ ಕಾರಣಕ್ಕೆ ದೂಸ್ರಾ ಮಾತಾಡ್ಲೇ ಇಲ್ಲ ಅಂಬಾನಿ!

ಈ ಸಮಾರಂಭದಲ್ಲಿ ಚಲನಚಿತ್ರ ತಾರೆಯರಾದ ಸಲ್ಮಾನ್ ಖಾನ್, ರಣವೀರ್ ಸಿಂಗ್, ಆಲಿಯಾ ಭಟ್ ಮತ್ತು ರಣಬೀರ್ ಕಪೂರ್, ದೀಪಿಕಾ ಪಡುಕೋಣೆ ಹಾಗೂ ಕ್ರಿಕೆಟಿಗರಾದ ಎಂ.ಎಸ್. ಧೋನಿ, ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ ಮತ್ತು ಸೂರ್ಯ ಕುಮಾರ್ ಯಾದವ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.