ಜಮ್ಮು ಮಾರ್ಗದಲ್ಲಿ ಅಮರನಾಥ ಯಾತ್ರೆ ರದ್ದು ಪ್ರತಿಕೂಲ ಹವಾಮಾನ ಹಿನ್ನೆಲೆ 2ದಿನವೂ ಯಾತ್ರೆಗೆ ಅಡ್ಡಿ ನಾಪತ್ತೆಯಾದ 45 ಜನ ಜೀವಂತವಾಗಿರುವ ಸಾಧ್ಯತೆ ಕ್ಷೀಣ
ಜಮ್ಮು (ಜು.11): ಪ್ರತಿಕೂಲ ಹವಾಮಾನ ಪರಿಸ್ಥಿತಿ ಮುಂದುವರೆದ ಹಿನ್ನೆಲೆಯಲ್ಲಿ ಜಮ್ಮು ಮಾರ್ಗದಲ್ಲಿ ನಡೆಯುವ ಅಮರನಾಥ ಯಾತ್ರೆಯನ್ನು ರದ್ದು ಮಾಡಲಾಗಿದೆ. ದಕ್ಷಿಣ ಕಾಶ್ಮೀರದಲ್ಲಿನ ಹಿಮಾಲಯದಲ್ಲಿನ 3,880 ಮೀ. ಎತ್ತರದಲ್ಲಿರುವ ಅಮರನಾಥ ಗುಹಾ ದೇವಾಲಯಕ್ಕೆ ಕಾಶ್ಮೀರದ 2 ಬೇಸ್ ಕ್ಯಾಂಪ್‌ಗಳಿಂದ ಯಾತ್ರಿಕರ ಹೊಸ ತಂಡಗಳು ಯಾತ್ರೆ ಕೈಗೊಳ್ಳುವಂತಿಲ್ಲ ಎಂದು ಅಧಿಕಾರಿಗಳು ಸೂಚಿಸಿದ್ದಾರೆ.
ಸಾವಿನ ಸಂಖ್ಯೆ 60ಕ್ಕೆ?: ಅಮರನಾಥ ಗುಹೆಯ ಬಳಿ ಸಂಭವಿಸಿದ ಮೇಘಸ್ಫೋಟದಲ್ಲಿ ನಾಪತ್ತೆಯಾದ 45 ಮಂದಿಯ ಕುರಿತಾಗಿ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಇವರುಗಳು ಜೀವಂತವಾಗಿರುವ ಸಾಧ್ಯತೆ ಬಹಳ ಕಡಿಮೆ ಇದೆ ಎಂದು ಸೇನೆಯ ಮೂಲಗಳು ತಿಳಿಸಿವೆ. ಪ್ರವಾಹದಿಂದ ಉಂಟಾಗಿರುವ ಅವಶೇಷಗಳನ್ನು ತೆರವು ಮಾಡುವ ಕಾರ್ಯವನ್ನು ಕೈಗೊಂಡಿದ್ದಾರೆ. ಆದರೆ ಇವುಗಳ ಅಡಿಯಲ್ಲಿ ಯಾರಾದರೂ ಜೀವಂತವಿದ್ದರೆ ಅದು ಪವಾಡವೇ ಸರಿ ಎಂದು ಅಧಿಕಾರಿಗಳು ಹೇಳಿದ್ದಾರೆ. ಗುಹೆಯ ಬಳಿಯಿಂದ ಹೆಲಿಕಾಪ್ಟರ್‌ನಲ್ಲಿ 65 ಟ್ರಿಪ್‌ಗಳನ್ನು ನಡೆಸಿ 165 ಮಂದಿಯನ್ನುರಕ್ಷಣೆ ಮಾಡಲಾಗಿದೆ. ಹವಾಮಾನ ವೈಪರಿತ್ಯದಿಂದ ತಡೆಯಲಾಗಿದ್ದ ಹೆಲಿಕಾಪ್ಟರ್ ಸೇವೆಯನ್ನು ಮತ್ತೆ ಆರಂಭಿಸಲಾಗಿದೆ.
ಅಮರನಾಥದಲ್ಲಿ ಮೇಘ ಸ್ಫೋಟ: ಹಿಮಲಿಂಗ ದರ್ಶನಕ್ಕೆ ಹೋದವರು ಜಲಸಮಾಧಿ!
ರಾಜ್ಯದ 370 ಅಮರನಾಥ ಯಾತ್ರಿಗಳು ಸೇಫ್ : ‘ಪವಿತ್ರ ಅಮರನಾಥ ಯಾತ್ರೆಗೆ ರಾಜ್ಯದಿಂದ ತೆರಳಿದ್ದ 370 ಯಾತ್ರಾರ್ಥಿಗಳ ಮಾಹಿತಿಯು ರಾಜ್ಯ ವಿಕೋಪ ನಿರ್ವಹಣಾ ಕೇಂದ್ರಕ್ಕೆ (ಎಸ್‌ಇಒಸಿ) ಲಭಿಸಿದ್ದು, ಈ ಎಲ್ಲರೂ ಸುರಕ್ಷಿತವಾಗಿದ್ದಾರೆ. ಎಲ್ಲ ಯಾತ್ರಿಕರ ರಕ್ಷಣೆಗೆ ಅಗತ್ಯ ಕ್ರಮ ವಹಿಸಲಾಗುತ್ತಿದೆ’ ಎಂದು ಸರ್ಕಾರ ತಿಳಿಸಿದೆ.
‘ಜು.8ರಿಂದ 10ರವರೆಗೂ ರಾಜ್ಯ ವಿಕೋಪ ನಿರ್ವಹಣಾ ಸಹಾಯವಾಣಿಗೆ ಒಟ್ಟು 75 ಕರೆಗಳು ಬಂದಿವೆ. ಅಮರನಾಥ ಯಾತ್ರೆಗೆ ತೆರಳಿದವರ ಸಂಬಂಧಿಕರು ಕರೆ ಮಾಡಿ ತಮ್ಮ ಕುಟುಂಬದವರ ರಕ್ಷಣೆಗೆ ಕೋರಿದ್ದಾರೆ. ಇವರಿಂದ ಒಟ್ಟು 370 ಯಾತ್ರಿಗಳ ಮಾಹಿತಿ ಲಭ್ಯವಾಗಿದ್ದು, ಅವರೆಲ್ಲರನ್ನೂ ನಮ್ಮ ಕೇಂದ್ರದ ಸಿಬ್ಬಂದಿ ದೂರವಾಣಿ ಹಾಗೂ ಸ್ಥಳಿಯ ಆಡಳಿತದ ಮೂಲಕ ಸಂಪರ್ಕಿಸಿ ಅವರಿಂದ ಮಾಹಿತಿ ಪಡೆದಿದ್ದಾರೆ. ಈ ವೇಳೆ ಎಲ್ಲರೂ ಸುರಕ್ಷಿತವಾಗಿರುವುದು ತಿಳಿದು ಬಂದಿದೆ’ ಎಂದು ರಾಜ್ಯ ಕಂದಾಯ ಇಲಾಖೆಯ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತ ಮನೋಜ್ ರಾಜನ್ ತಿಳಿಸಿದ್ದಾರೆ.
Amarnath Yatra; 15000 ಮಂದಿ ರಕ್ಷಣೆ, 40 ಜನ ಇನ್ನೂ ನಾಪತ್ತೆ
‘ನಂತರವೂ ನಮ್ಮ ಸಿಬ್ಬಂದಿ ರಾಜ್ಯದ ಯಾತ್ರೆಗಳ ಗುಂಪಿನವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಇದುವರೆಗೂ ರಾಜ್ಯದಿಂದ ತೆರಳಿದ ಯಾವುದೇ ಯಾತ್ರಿಕರು ಅಪಾಯಕ್ಕೆ ಸಿಲುಕಿರುವ ಅಥವಾ ಯಾವುದೇ ಅವಘಡಗಳಿಂದ ಗಾಯಗೊಂಡಿರುವ, ಸಾವು ನೋವು ಸಂಭವಿಸಿರುವ ವರದಿಗಳು ಬಂದಿಲ್ಲ. ಯಾರು ಕೂಡ ಆತಂಕ ಪಡಬೇಕಾಗಿಲ್ಲ’ ಎಂದಿದ್ದಾರೆ.
‘ನಾವು ಜಮ್ಮು ಕಾಶ್ಮೀಕರ ಆಡಳಿತದ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ. ಅಮರನಾಥ ಯಾತ್ರೆಗೆ ಇರುವ ಅಡೆತಡೆಗಳನ್ನು ತೆರವುಗೊಳಿಸಿ ಆದಷ್ಟುಬೇಗ ಪುನಾರಂಭಿಸುವ ನಿಟ್ಟಿನಲ್ಲಿ ಭಾರತೀಯ ನೇನಾಪಡೆ, ಜಮ್ಮು ಕಾಶ್ಮೀರ ಪೊಲೀಸರು ಹಾಗೂ ಇತರೆ ಸಂಸ್ಥೆಗಳಿಂದ ಸ್ಥಳೀಯ ಆಡಳಿತ ಪ್ರಯತ್ನ ನಡೆಸಿದೆ’ ಎಂದು ಹೇಳಿದ್ದಾರೆ.
