ಶ್ರೀನಗರ(ಜೂ.07): ಕೊರೋನಾ ಮಹಾಮಾರಿ ಸದ್ಯ ದೇಶಾದ್ಯಂತ ಅಬ್ಬರಿಸುತ್ತಿದೆ. ಹೀಗಿರುವಾಗಲೇ ಅಮರನಾಥ ಯಾತ್ರೆ ದಿನಾಂಕ ಪ್ರಕಟಿಸಲಾಗಿದೆ. ಈ ವರ್ಷ ಜುಲೈ 21ರಿಂದ ಯಾತ್ರೆ ಆರಂಭವಾಗಲಿದ್ದು, ಆಗಸ್ಟ್ 3 ವರೆಗೆ ನಡೆಯಲಿದೆ. ಇವೆಲ್ಲದರ ನಡುವೆ ಶುಕ್ರವಾರ ಪ್ರಥಮ ಪೂಜೆಯೂ ನಡೆದಿದೆ ಎಂದು ಅಮರನಾಥ ಕ್ಷೇತ್ರ ಮಂಡಳಿ ಮಾಹಿತಿ ನೀಡಿದೆ. ಕೊರೋನಾ ಮಹಾಮಾರಿಯಿಂದಾಗಿ ಈ ಬಾರಿ ಅಮರನಾಥ ಯಾತ್ರೆ ಅವಧಿಯನ್ನು ಕಡಿಮೆ ಮಾಡಲಾಗಿದೆ.

ಅಲ್ಲದೇ  ಸಾಧುಗಳನ್ನು ಹೊರತುಪಡಿಸಿ ಕೇವಲ 55 ವರ್ಷಕ್ಕಿಂತ ಕಡಿಮೆ ವಯಸ್ಸಿನವರಷ್ಟೇ ಈ ಬಾರಿ ಯಾತ್ರೆ ಕೈಗೊಳ್ಳಲು ಅನುಮತಿ ಕೊಡಲಾಗುತ್ತದೆ. ಯಾತ್ರೆ ಕೈಗೊಳ್ಳುವವರಲ್ಲಿ ಕೊರೋನಾ ವೈರಸ್ ನೆಗೆಟಿವ್ ವರದಿ ಕಡ್ಡಾಯವಾಗಿ ಇರಬೇಕು. ಈ ಸಂಬಂಧ ಮಾಹಿತಿ ನೀಡಿದ ಎಸ್‌ಎಎಸ್‌ಬಿಯ ಅಧಿಕಾರಿ 'ತೀರ್ಥಯಾತ್ರೆ ಕೈಗೊಳ್ಳುವವರಿಗೆ ಜಮ್ಮು ಕಾಶ್ಮೀರದಲ್ಲಿ ಯಾತ್ರೆ ಆರಂಭಿಸಲು ಅನುಮತಿ ನೀಡುವುದಕ್ಕೂ ಮೊದಲು ಕೊರೋನಾ ವೈರಸ್ ಟೆಸ್ಟ್ ನಡೆಸಲಾಗುತ್ತದೆ. ಸಾಧುಗಳನ್ನು ಹೊರತುಪಡಿಸಿ ಉಳಿದವರೆಲ್ಲರೂ ಆನ್‌ಲೈನ್ ಮೂಲಕ ನೋಂದಾವಣೆ ಮಾಡಬೇಕು' ಎಂದಿದ್ದಾರೆ.

ಅಮರನಾಥ ಗುಹೆಯಲ್ಲಿ ಹಿಮಲಿಂಗ: ಈ ವರ್ಷದ ಫಸ್ಟ್ ಫೋಟೋ ವೈರಲ್!

ಆರತಿಯ ನೇರಪ್ರಸಾರ

ಷ್ಟೇ ಅಲ್ಲದೇ ಹದಿನೈದು ದಿನಗಳಲ್ಲಿ ಬೆಳಗ್ಗೆ ಹಾಗೂ ಸಂಜೆ ಅಮಮರನಾಥ ಗುಹೆಯಲ್ಲಿರುವ ದೇಗುಲದಲ್ಲಿ ನಡೆಯುವ ಆರತಿಯನ್ನು ದೇಶಾದ್ಯಂತ ಇರುವ ಭಕ್ತರಿಗಾಘಿ ನೇರ ಪ್ರಸಾರ ಮಾಡಲಾಗುತ್ತದೆ ಎಂದಿದ್ದಾರೆ. ಅಲ್ಲದೇ ಸ್ಥಳೀಯ ಕಾರ್ಮಿಕರ ಲಭ್ಯತೆ ಕಡಿಮೆ ಇರುವುದರಿಂದ ಹಾಗೂ ಬೇಸ್‌ ಕ್ಯಾಂಪ್‌ನಿಂದ ಮಂದಿರದವರೆಗೆ ಟ್ರೆಕ್ ಮಾಡಲು ಹಲವಾರು ಸಮಸ್ಯೆಗಳು ಇರುವುದರಿಂದ 2020ರ ಯಾಥ್ರೆಗಾಗಿ ಗಾಂದರ್ಬಲ್ ಜಿಲ್ಲೆಯ ಬಾಲ್‌ಟಾಲ್‌ ಬೇಸ್‌ ಕ್ಯಾಂಪ್‌ನಿಂದ ಗುಹೆಗೆ ತಲುಪಲು ಹೆಲಿಕಾಪ್ಟರ್ ಬಳಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.\

2020ರ ಅಮರನಾಥ ಯಾತ್ರೆ ಕೇವಲ ಉತ್ತರ ಕಾಶ್ಮೀರದ ಬಾಲ್‌ಟಾಲ್‌ ಹಾದಿ ಮೂಲಕವೇ ಮಾಡಲಾಗುತ್ತದೆ. ಪಹಲ್‌ಗಾಮ್ ಮಾರ್ಗದ ಮೂಲಕ ನಡೆಯುವ ಯಾತ್ರೆಗೆ ಅನುಮಮತಿ ನೀಡಲಾಗುವುದಿಲ್ಲ. ಈ ಯಾತ್ರೆ ಆಗಸ್ಟ್ 3ರ ಶ್ರಾವಣ ಪೂರ್ಣಿಮೆಯಂದು, ರಕ್ಷಾ ಬಂಧನದಂದು ಮುಕ್ತಾಯಗೊಳಿಸಲಾಗುತ್ತದೆ ಎಂದು ತಿಳಿಸಲಾಗಿದೆ.