Asianet Suvarna News Asianet Suvarna News

ಅಮರನಾಥ ಗುಹೆಯಲ್ಲಿ ಹಿಮಲಿಂಗ: ಈ ವರ್ಷದ ಫಸ್ಟ್ ಫೋಟೋ ವೈರಲ್!

ಜೂನ್ 23 ರಿಂದ ಅಮರನಾಥ ಯಾತ್ರೆ ಆರಂಭವಾಗುವ ಸಾಧ್ಯತೆ| ಅಮರನಾಥ ಪವಿತ್ರ ಗುಹೆಯಲ್ಲಿ ಹಿಮಲಿಂಗ| ವೈರಲ್ ಆಯ್ತು ಫಸ್ಟ್ ಫೋಟೋ

2020 First Pic Of Shivling At Holy Cave Of Amarnath Goes Viral From June 23rd Yatra May resume
Author
Bangalore, First Published Jun 4, 2020, 4:32 PM IST

ಶ್ರೀನಗರ(ಜೂ.04): ದೇಶದ ಅತ್ಯಂತ ಪ್ರಸಿದ್ಧ ಧಾರ್ಮಿಕ ಸ್ಥಳಗಳಲ್ಲಿ ಅಮರನಾಥ ಗುಹೆಯೂ ಒಂದು. ಪ್ರತಿ ವರ್ಷ ಆಯೋಜಿಸಲಾಗುವ ಅಮರನಾಥ ಯಾತ್ರೆಯಲ್ಲಿ ಅನೇಕ ಮಂದಿ ಭಕ್ತರು ಪಾಲ್ಗೊಳ್ಳುತ್ತಾರೆ. ಆದರೆ ಕೊರೋನಾ ಮಹಾಮಾರಿಯಿಂದಾಗಿ ಈ ಬಾರಿ ಅಸಮಂಜಸ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಿದ್ದರೂ ಅಮರನಾಥ ಗುಹರೆಯ ಶಿವಲಿಂಗದ ಮೊದಲ ಫೋಟೋ ಭಾರೀ ವೈರಲ್ ಆಗಿದೆ.

ಗುಹೆಯ ಸುತ್ತಲೂ ಹಿಮ ಆವರಿಸಿದ್ದು, ಶಿವ ಲಿಂಗವಿದೆ. ಸದ್ಯ ಈ ಫೋಟೋ ಸೋಶಿಯಲ್ ಮಿಡಿಯಾದಲ್ಲಿ ಭಾರೀ ವೈರಲ್ ಆಗಿದೆ. ಹೀಗಿದ್ದರೂ ಈ ಫೋಟೋ ಕ್ಲಿಕ್ಕಿಸಿದವರು ಯಾರು? ಹಾಗೂ ಶೇರ್ ಮಾಡಿದದ್ದು ಯಾರು ಎಂಬ ವಿಚಾರ ತಿಳಿದು ಬಂದಿಲ್ಲ.

ಜೂನ್ 23ರಿಂದ ಆರಂಭವಾಗಲಿದೆ ಅಮರನಾಥ ಯಾತ್ರೆ

ಪ್ರತಿ ವರ್ಷ ಅಮರನಾಥ ಯಾತ್ರೆ ಕೈಗೊಳ್ಳುವ ಭಕ್ತರಲ್ಲಿ ವಿಭಿನ್ನವಾದ ಹುಮ್ಮಸ್ಸು ಇರುತ್ತದೆ. ಈ ಯಾತ್ರೆಗೆ ಬೇಕಾದ ತಯಾರಿಯೂ ಹಲವಾರು ತಿಂಗಳ ಮೊದಲೇ ಆರಂಭಿಸುತ್ತಾರೆ. ಆದರೆ ಈ ಬಾರಿ ಕೊರೋನಾದಿಂದಾಗಿ ಎಲ್ಲಾ ವ್ಯವಸ್ಥೆಗಳು ಕೊಂಚ ಕಳೆಗುಂದಿವೆ. ಅಮರನಾಥ ಯಾತ್ರೆ ಇರುತ್ತಾ? ಇರುವುದಿಲ್ಲವಾ ಎಂಬುವುದೂ ಕೂಡಾ ಸ್ಪಷ್ಟವಿಲ್ಲ. ಏಪ್ರಿಲ್‌ 22ರಂದು ಅಮರನಾಥ ದೇಗುಲದ ಆಡಳಿತ ಮಂಡಳಿ ಈ ಯಾತ್ರೆ ರದ್ದುಗೊಳಿಸುವ ಬಗ್ಗೆ ಸುದ್ದಿಗೋಷ್ಠಿ ನಡೆಸಿತ್ತು. ಆದರೆ ಇದಕ್ಕೆ ವ್ಯಾಪಕ ವಿರೋಧ ವ್ಯಕ್ತವಾದ ಬೆನ್ನಲ್ಲೇ ತನ್ನ ನಿರ್ಧಾರವನ್ನು ಹಿಂಪಡೆದು, ಜೂನ್ 23 ರಿಂದ ಯಯಾತ್ರೆ ಆರಮಭಿಸುವುದಾಗಿ ತಿಳಿಸಿತ್ತು.

Follow Us:
Download App:
  • android
  • ios